ಬೇಡ ಬೇಡ ಎಂದರೂ ಕೆಜಿಎಫ್-2 ಜೊತೆ ಬಿಡುಗಡೆ ಮುನಾದ ವಿಜಯ್ ಬೀಸ್ಟ್, ಆದರೆ ಸಮೀಕ್ಷೆ ಮಾಡಿದಾಗ ಗೆದ್ದದ್ದು ಯಾರು ಗೊತ್ತೇ?? ವಿಜಯ್ vs ಯಶ್ ನಲ್ಲಿ ಗೆಲುವು ಯಾರದ್ದು ಗೊತ್ತೇ??

388

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಚಿತ್ರ ಕನ್ನಡ ಚಿತ್ರರಂಗದಲ್ಲಿ ಯಾರು ಮರೆಯಲಾಗದಂತಹ ಬಾಕ್ಸಾಫೀಸ್ ರೆಕಾರ್ಡನ್ನು ಕ್ರಿಯೇಟ್ ಮಾಡಿದೆ. ಇನ್ನು ಈ ಸಿನಿಮಾ ಮಾಡಿರುವ ದಾಖಲೆಗಳನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಲು ಕನ್ನಡದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಸಿದ್ಧವಾಗಿದೆ. ಕೆಜಿಎಫ್ ಚಾಪ್ಟರ್ 2 ಈಗಾಗಲೇ ದೇಶ ವಿದೇಶಗಳಲ್ಲಿ ಕೂಡ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹೊಂದಿದೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 1 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಸ್ವತಹ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್ ಅವರ ಜೀರೋ ಸಿನಿಮಾವನ್ನು ಹಿಂದಿಯಲ್ಲಿ ಮಣ್ಣುಮುಕ್ಕಿಸುವಂತೆ ಮಾಡಿತ್ತು. ಇನ್ನು ಈ ಬಾರಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಎದುರುಗಡೆ ಯಾವುದೇ ಸಿನಿಮಾಗಳು ಕೂಡ ಬಿಡುಗಡೆಯಾಗುವುದು ಅನುಮಾನವೇ ಸರಿ ಎಂಬುದಾಗಿ ಅಂದುಕೊಳ್ಳಲಾಗಿತ್ತು. ಆದರೆ ಎಲ್ಲಾ ನಿರೀಕ್ಷೆಗಳನ್ನು ಕೂಡ ತಮಿಳು ಚಿತ್ರರಂಗ ಹುಸಿ ಮಾಡಿತ್ತು.

ಹೌದು ನೆಲ್ಸನ್ ನಿರ್ದೇಶನದಲ್ಲಿ ಹಾಗೂ ತಲಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಬೀಸ್ಟ್ ಚಿತ್ರ ಇದೇ ಏಪ್ರಿಲ್ 13ರಂದು ಬಿಡುಗಡೆಯಾಗುವುದನ್ನು ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ ಸನ್ ನೆಟ್ವರ್ಕ್ ಅಧಿಕೃತವಾಗಿ ಘೋಷಿಸಿದೆ. ಅಂದ್ರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಯ ಒಂದು ದಿನ ಮುಂಚಿತವಾಗಿ ಈ ಚಿತ್ರ ಬಿಡುಗಡೆಯಾಗಲಿದೆ. ಅಂದರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ನೇರವಾಗಿ ಸವಾಲೆಸೆದಿದೆ ವಿಜಯ್ ನಟನೆಯ ಬೀಸ್ಟ್ ಚಿತ್ರ. ಇವುಗಳಿಂದಾಗಿ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಕೂಡ ಕೊಂಚ ಮಟ್ಟಿಗೆ ಇಳಿತ ಕಂಡು ಬರಬಹುದಾಗಿದೆ.

ಇವುಗಳ ನಡುವೆ ಎರಡು ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಸಿನಿಮಾ ಯಾವುದು ಯಾವ ಸಿನಿಮಾಗಾಗಿ ಜನರು ಕಾಯುತ್ತಿದ್ದಾರೆ ಎನ್ನುವುದರ ಕುರಿತಂತೆ ಸಮೀಕ್ಷೆಗಳು ಕೂಡ ನಡೆದಿವೆ. ನಿಮಗೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ವಿಜಯ್ ಇಬ್ಬರೂ ಕೂಡ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವಂತಹ ನಟರು. ಇಬ್ಬರ ಸಿನಿಮಾಗಳಿಗೂ ಕೂಡ ವೀಕ್ಷಕರ ಸಂಖ್ಯೆ ಪ್ರತಿ ಬಾರಿ ಕೂಡ ಹೆಚ್ಚಿರುತ್ತಾರೆ. ಹೀಗಾಗಿ ಈ ಬಾರಿ ಇಬ್ಬರೂ ಕೂಡ ಬಾಕ್ಸಾಫೀಸ್ ನಲ್ಲಿ ಕ್ಲ್ಯಾಶ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಜನರು ಯಾರ ಚಿತ್ರವನ್ನು ನೋಡಲು ಬಯಸುತ್ತಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

ಈಗ ಈ ಕುತೂಹಲಕ್ಕೆ ತೆರೆಬಿದ್ದಿದ್ದು ಫಲಿತಾಂಶ ಎಲ್ಲರ ಮುಂದಿದೆ. ಹೌದು ಈ ಕಾಂಪಿಟೇಷನ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಜಯ್ ರವರ ಬೀಸ್ಟ್ ಚಿತ್ರವನ್ನು ದೊಡ್ಡ ಮಾರ್ಜಿನ್ ನಲ್ಲಿ ಹಿಂದಿಕ್ಕಿದೆ. ಹೌದು ಬುಕ್ ಮೈ ಶೋ ಅಪ್ಲಿಕೇಶನ್ನಲ್ಲಿ ವಿಜಯ್ ದರವರ ಬೀಸ್ಟ್ ಚಿತ್ರವನ್ನು ನೋಡಲು 114700 ಜನ ಇಷ್ಟಪಡುತ್ತಿದ್ದರೆ, ಈಕಡೆ ನಮ್ಮೆಲ್ಲರ ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ರವರ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಲು 5.99 ಲಕ್ಷ ಜನರು ಕಾತರರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಈ ರೇಸ್ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಬಹಳಷ್ಟು ಮುಂದಿದೆ ಎಂಬುದಾಗಿ ತಿಳಿದುಬಂದಿದೆ.

ಸದ್ಯಕ್ಕೆ 2 ಚಿತ್ರಗಳ ಬಿಡುಗಡೆ ದಿನಾಂಕ ಆಸುಪಾಸಿನಲ್ಲೇ ಇದು ನಿಜಕ್ಕೂ ಕೂಡ ಇದು ಪರಸ್ಪರ ಚಿತ್ರಗಳ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಪರಿಣಾಮ ಬೀರಲಿದೆ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ನಿಜಕ್ಕೂ ಕೂಡ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವುದಾಗಿ ಕೂಡ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ನಮ್ಮ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ದೇಶ ವಿದೇಶಗಳಲ್ಲಿ ತನ್ನದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದು ಚಿತ್ರ ಬಿಡುಗಡೆಯಾದರೆ ಖಂಡಿತವಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಕಲೆಕ್ಷನ್ ಮಾಡುವುದಂತೂ ಸುಳ್ಳಲ್ಲ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಎರಡು ಚಿತ್ರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.