ಬಿಗ್ ನ್ಯೂಸ್: ಐಪಿಎಲ್ ಪ್ರಿಯರಿಗಾಗಿ ಕಡಿಮೆ ಬೆಲೆಗೆ ಭರ್ಜರಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ. ಐಪಿಎಲ್ ನೋಡಬೇಕು ಎಂದರೆ ಏನು ಮಾಡಬೇಕು ಗೊತ್ತೇ?

38

ನಮಸ್ಕಾರ ಸ್ನೇಹಿತರೇ, ಐಪಿಎಲ್ ಎಂದ್ರೆ ಜನರಿಗೆ ಹಬ್ಬ ಇದ್ದ ಹಾಗೆ. ಈ ಮ್ಯಾಚ್ ನ್ನ ನೋಡೋದಕ್ಕೆ ಅದೇನೇ ಕೆಲಸ ಇದ್ರೂ ಬಿಟ್ಟು ತಮ್ಮ ನೆಚ್ಚಿನ ಟೀಮ್ ಆಡೋದನ್ನ ನೋಡೋದಕ್ಕೆ ಟಿ ವಿ ಮುಂದೆ ಹಾಜಾರಾಗಿ ಬಿಡ್ತಾರೆ. ಆದ್ರೆ ಈಗೆಲ್ಲಾ ಟಿವಿ ಗಾಗಿ ಕಾಯಬೇಕಾಗಿಲ್ಲ. ಮೊಬೈಲ್ ನಲ್ಲಿಯೇ ಲೈವ್ ವೀಕ್ಷಣೆ ಮಾಡಬಹುದು. ಅದಕ್ಕಾಗಿಯೇ ಜಿಯೋ ತನ್ನ ಬೇರೆ ಬೇರೆ ಪ್ರಿಪೇಯ್ಡ್ ಯೋಜನೆಗಳಲ್ಲಿ ಡಿಸ್ನಿ +ಹಾಟ್ ಸ್ಟಾರ್ ನ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ.

ಇದರಲ್ಲಿ ಹೊಸದಾಗಿ ಪರಿಚಯಿಸಿರುವ 555ರೂಪಾಯಿಗಳ ಪ್ಲಾನ್ ಗ್ರಾಹಕ ಸ್ನೇಹಿಯಾಗಿದೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ. ರಿಲಯನ್ಸ್ ಜಿಯೋ 555ರೂಪಾಯಿಗಳ ಈ ಯೋಜನೆಯನ್ನು ಐಪಿಎಲ್ ಗ್ರಾಹಕರಿಗಾಗಿ ಪ್ರಕಟಿಸಿದೆ. ಇದರಲ್ಲಿ ಯಾವುದೇ ಉಚಿತ ಧ್ವನಿ ಕರೆ ಅಥವಾ ಎಸ್ಎಂಎಸ್ ಗಳು ಸಿಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು. ಇನ್ನೂ 55 ದಿನಗಳ ಬೆರಳಿಗೆ ಹೊಂದಿರುವ ಈ ಪ್ಲಾನ್ ನಲ್ಲಿ ಗ್ರಾಹಕರು ಡಿಸ್ನಿ+ಹಾಟ್ ಸ್ಟಾರ್ ನ ಒಂದು ವರ್ಷದ ಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಅಲ್ಲದೆ ಜಿಯೋ ದ ಎಲ್ಲಾ ಅಪ್ಲಿಕೇಶನ್ ಗಳಿಗೂ ಉಚಿತ ಪ್ರವೇಶ ಪಡೆಯಬಹುದು. ಹಾಗೆ ಯೋಜನೆಯಲ್ಲಿ ಗ್ರಾಹಕರು 55 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇನ್ನು ಈ ಯೋಜನೆಯು 200 ರುಪಯಿಗಿಂತ ಹೆಚ್ಚಿನ ಬೆಲೆಯದ್ದಾಗಿದ್ದು, ಜಿಯೋ ಗ್ರಾಹಕರು ಶೇ. 20% ಜಿಯೋ ಮಾರ್ಟ್ ಮಹಾ ಕ್ಯಾಶ್‌ಬ್ಯಾಕ್‌ ನ್ನೂ ಪಡೆಯಬಹುದು. ಇನ್ನು ಯೋಜನೆಯು ಐಪಿಎಲ್ ಪ್ರಿಯ ಗ್ರಾಹಕರಿಗಾಗಿ ರಚಿಸಲಾಗಿದ್ದರೂ ಕೂಡ, ಇದರಲ್ಲಿ ಹೆಚ್ಚಿನ ಡೇಟಾವನ್ನು ನೀಡಲಾಗಿದ್ದು, ಮನೆಯಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾದ ಅಡ್ ಅನ್ ಯೋಜನೆಯಾಗಿದೆ. ಇನ್ನು 28 ದಿನಗಳ ವ್ಯಾಲಿಡಿಟಿ ಹೊಂದಿರುವ 499 ರ ಪ್ಲಾನ್ ನಲ್ಲಿ ದಿನಕ್ಕೆ 2 ಜಿ ಬಿ ಡೇಟಾ ಸಿಗುತ್ತದೆ. ಆದರೆ ಇದರ ಅವಧಿ 28 ದಿನಗಳು ಮಾತ್ರ. ಇದರಲ್ಲಿ ಅನಿಯಮಿತ ಧ್ವನಿ ಕರೆ ಹಾಗೂ ಎಸ್ ಎಂ ಎಸ್ ಸೌಲಭ್ಯವಿದೆ.