ನಿಮ್ಮ ಮನೆಯಲ್ಲಿ ಹಣದ ಹೊಳೆ ಹರಿದು, ಶಾಂತಿ ನೆಮ್ಮದಿಯ ಜೊತೆ ಸಂಪತ್ತು ಇರಬೇಕು ಎಂದರೆ ಗರುಡ ಪುರಾಣರ ಪ್ರಕಾರ ಹೀಗೆ ಮಾಡಿ.

51

ನಮಸ್ಕಾರ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ಹೇಳಲಾಗಿರುವ ಪ್ರತಿಯೊಂದು ಗ್ರಂಥಗಳಲ್ಲಿಯೂ ಪುರಾಣಗಳಲ್ಲಿಯೂ ಕಲಿಯುಗದಲ್ಲಿಯು ಕೂಡ ಮನುಷ್ಯ ಹೇಗೆ ಇದ್ದರೆ ಆತ ತನ್ನ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಲು ಸಾಧ್ಯ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. 18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣ ಕೂಡ ಮನುಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಲವಾರು ವಿಷಯಗಳನ್ನು ಹೇಳುತ್ತದೆ. ಈ ವಿಷಯಗಳನ್ನು ಮನುಷ್ಯ ಚಾಚುತಪ್ಪದೇ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆತನ ಸಮಸ್ಯೆಯಿಂದ ದೂರ ಇರಬಹುದು. ಅಲ್ಲದೇ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ಆಗುತ್ತದೆ. ಹಾಗಾದರೆ ಬನ್ನಿ ಗರುಡ ಪುರಾಣದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬ ಮನುಷ್ಯ ಕಷ್ಟಪಡುವುದು ತನ್ನ ಮನೆ ಸಂಸಾರ ಸುಖವಾಗಿ ಇರಲಿ ಎಂಬ ಕಾರಣಕ್ಕೆ. ಆದರೆ ಜೀವನ ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ನಾವೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ, ಸಾಕಷ್ಟು ಬಾರಿ ನಮ್ಮ ಗ್ರಹಗತಿಗಳು ನಾವು ಅಂದುಕೊಂಡಂತೆ ಜೀವನ ನಡೆಸಲು ಬಿಡುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಕೆಲವು ವಸ್ತುಗಳನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಭಗವಂತ ವಿಷ್ಣು. ಧಾರ್ಮಿಕ ಗ್ರಂಥಗಳ ಪ್ರಕಾರ, ವಿಷ್ಣುವು ಭಕ್ತರ ಎಲ್ಲಾ ದುಃಖಗಳನ್ನು ನಿವಾರಿಸುತ್ತಾನೆ. ನಮ್ಮಲ್ಲಿ ವಿಷ್ಣುಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಭಕ್ತಿಯಿಂದ ನಿಯಮಿತವಾಗಿ ಮಹಾವಿಷ್ಣುವಿನ ಪೂಜೆ ಸಲ್ಲಿಸುತ್ತಾ ಬಂದರೆ, ಮಹಾವಿಷ್ಣುವನ್ನು ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥಸಿದ್ಧಿಯಾಗುವುದು. ಏಕಾದಶಿ ಉಪವಾಸ. ಉಪವಾಸಗಳಲ್ಲಿ ಏಕಾದಶಿ ಉಪವಾಸವು ಶ್ರೇಷ್ಠವಾಗಿದೆ. ಏಕಾದಶಿ ಉಪವಾಸವನ್ನು ಪೂರ್ಣ ಶ್ರದ್ಧೆಯಿಂದ ಆಚರಿಸಿದರೆ, ಅದು ಅತ್ಯಂತ ಶುಭ ಫಲವನ್ನು ಕೊಡುತ್ತದೆ. ಪಾಪ ನಾಶಿನಿ ಗಂಗಾ. ಗಂಗಾಜಲವನ್ನು ಯಾವುದೇ ಶುಭ ಕಾರ್ಯದಲ್ಲಿ ಬಳಸಲಾಗುತ್ತದೆ. ಅಂದರೆ ಇದು ಶುದ್ಧೀಕರಣದ ಸಂಕೇತ. ಹಾಗಾಗಿ ಗಂಗಾಜಲವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು.

ತುಳಸಿ. ತುಳಸಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ತುಳಸಿ ಮನೆ ಮುಂದಿದ್ದರೆ ಮನೆಯಲ್ಲಿ ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ. ಸುಖ-ಶಾಂತಿ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಭಗವಾನ್ ಮಹಾವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ಪೂಜಿಸುವುದು ಅತ್ಯಂತ ಒಳ್ಳೆಯದು.

ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನ. ಗರುಡ ಪುರಾಣದ ಪ್ರಕಾರ, ದೇವಾನು ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಗೋವನ್ನು ಪೂಜಿಸುವುದು ಅತ್ಯಂತ ಶ್ರೇಷ್ಠ. 7 ವಿಧದ ಧಾನ್ಯ ಪಕ್ಷಿಗಳಿಗೆ ಹಾಕುವುದು ವ್ಯಕ್ತಿಯನ್ನು ಆರ್ಥಿಕವಾಗಿ ಗಟ್ಟಿಯಾಗಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಎಲ್ಲಾ ಬಾ ದೊರೆಯಬೇಕು ಎಂದರೆ ಪಶುಪಕ್ಷಿಗಳನ್ನು ಗೌರವದಿಂದ ಕಾಣುವುದು ಅತ್ಯಂತ ಮುಖ್ಯ.

ಕೆಲವೊಮ್ಮೆ ಇದ್ದಕ್ಕಿದ್ದಂತೆ ಸಮಸ್ಯೆಗಳು ಬರಲು ಶುರುವಾದರೆ ಕಬ್ಬಿಣದ ಪಾತ್ರೆಯಲ್ಲಿ ನೀರು, ಸಕ್ಕರೆ, ತುಪ್ಪ, ಹಾಲು ಬೆರೆಸಿ ಪೀಪಲ್ ಮರದ ಬೇರಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಚೌಕದಲ್ಲಿ ಚಿನ್ನದ ನಾಣ್ಯ, ನವಿಲು ಗರಿ ಇಟ್ಟು ನಾಯಿಗೆ ಹಾಲು ನೀಡುವುದರಿಂದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಹೀಗೆ ಇಂತ ಕೆಲವು ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿಯೂ ಅದೃಷ್ಟ ಜೊತೆಯಾಗುತ್ತದೆ.