ಅಪ್ಪು ಜೊತೆ ನಟನೆ ಮಾಡಿದ್ದ ಖ್ಯಾತ ನಟಿ ಅನುಪಮಾ ಪರಿಸ್ಥಿತಿ ಇದೀಗ ಏನಾಗಿದೆ ಗೊತ್ತೇ?? ಅದೊಂದು ತಪ್ಪು ಇನ್ನು ಮಾಡುವುದಿಲ್ಲ ಎಂದದ್ದು ಯಾಕೆ ಗೊತ್ತೇ??

187

ನಮಸ್ಕಾರ ಸ್ನೇಹಿತರೇ ತೆಲುಗು ನಟಿಯಂತೆ ತೆಲುಗು ಪ್ರೇಕ್ಷಕರಿಗೆ ಒಗ್ಗಿಕೊಂಡಿರುವ ಮಲಯಾಳಂ ಚೆಲುವೆ ಅನುಪಮಾ ಪರಮೇಶ್ವರನ್. ಕರ್ಲಿ ಹೇರ್ ಮತ್ತು ಮುದ್ದಾದ ಮೊಗದ ಸುಂದರ ನಾಯಕಿ ಎಂಬ ಟ್ಯಾಗ್ ಪಡೆದಿದ್ದರೂ, ಅನುಪಮಾಗೆ ತೆಲುಗಿನಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಅದರಲ್ಲೂ ಆರಂಭದಲ್ಲಿಯೆ ‘ಗ್ಲಾಮರ್ ಬೇಡ’ ಎಂದು ಹೇಳಿದ ನಟಿ ಈಕೆ. ಅದರೂ ‘ರೌಡಿ ಬಾಯ್ಸ್’ ಸಿನಿಮಾಗಾಗಿ ಸ್ವಲ್ಪ‘ಗ್ಲಾಮರ್ ಶೋ’ಮಾಡಿದಂತೆ ಕಾಣಿಸುತ್ತೆ.

ಚಿತ್ರದಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ಎಂಬ ಪರಿಕಲ್ಪನೆ ಇದ್ದುದರಿಂದ ಲಿಪ್ ಲಾಕ್ ದೃಶ್ಯಗಳಲ್ಲಿ ಅನುಪಮಾ ನಟಿಸಬೇಕಿತ್ತು. ಹಿಂದಿನ ಚಿತ್ರಗಳಲ್ಲಿ ಸ್ಲೀವ್ ಲೆಸ್ ಲುಕ್ ನೋಡಿದ್ದವರಿಗೆ ‘ರೌಡಿ ಬಾಯ್ಸ್’ ಸಿನಿಮಾದ ಮೂಲಕ ಲಿಪ್ ಲಾಕ್ ಸಿನ್ ಇಷ್ಟವಾಗಿ, ಅನುಪಮಾ ಅವರಿಗೂ ವಿಶೇಷ ಇಮೇಜ್ ತಂದುಕೊಟ್ಟಿತ್ತು.

‘ರೌಡಿ ಬಾಯ್ಸ್’ ಸಿನಿಮಾದ ನಂತರ ಅನುಪಮಾ ಅವರಿಗೆ ಅದೇ ತರಹದ ಚಿತ್ರದ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬಂದಿವೆ. ಹೊಸ ಹೀರೋಗಳ ಜೊತೆ ನಟಿಸಲು ಆಫರ್‌ಗಳು ಬಂದಾಗ ಏನು ಮಾಡಬೇಕೆಂದು ಅನುಪಮಾಗೆ ಗೊಂದಲವಾಗಿದೆಯಂತೆ. ‘ರೌಡಿಬಾಯ್ಸ್’ ಸಿನಿಮಾವನ್ನು ಆಕೆ ಮಾಡಲು ಹಲವು ಕಾರಣಗಳಿವೆ. ಈ ಸಿನಿಮಾ ಆಶಿಶ್ ರೆಡ್ಡಿ ಚೊಚ್ಚಲ ಸಿನಿಮಾ, ಈ ಸಿನಿಮಾದ ಪ್ರಚಾರದಲ್ಲಿ ದಿಲ್ ರಾಜು ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ.. ಹೀಗೆ ಹಲವು ವಿಷಯಗಳು ಅನುಪಮಾ ಅವರಿಗೆ ಈ ಸಿನಿಮಾಗೆ ಕಮಿಟ್ ಆಗುವಂತೆ ಮಾಡಿದ್ದವು.

ಈ ಸಿನಿಮಾದಲ್ಲಿ ನಟಿಸಿದ ನಂತರ ಆತರ ಚೆಮಿಸ್ತ್ರಿ ಇರುವ ಚಿತ್ರಗಳಲ್ಲಿ ನಟಿಸುವುದು ಕಷ್ಟ ಹಾಗೂ ಹೊಸ ಹೀರೋಗಳ ಜೊತೆ ಚಿತ್ರಗಳನ್ನು ಮಾಡುವುದು ಕಷ್ಟ ಎಂದು ಅನುಪಮಾ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಒಂದು ವೇಳೆ ನಟಿ ಅನುಪಮಾ ನಿಜವಾಗಿ ಹೀಗೆ ಹೇಳಿದರೆ ಅವರಿಗೆ ಖಂಡಿತವಾಗಿಯೂ ತೆಲುಗಿನಲ್ಲಿ ಅವಕಾಶಗಳು ಇನ್ನು ಸಿಗಲು ಸಾಧ್ಯವಿಲ್ಲ ಎಂದು ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ.