ಆ ಜಾಹಿರಾತು ಮಾಡಬೇಡ ಎಂದು ಅಪ್ಪುಗೆ ನಾನು ಹೇಳಿದ್ದೆ, ಆದರೆ ! ಜೇಮ್ಸ್ ಚಿತ್ರದ ಸಕ್ಸೆಸ್ ಮೀಟ್ ನಲ್ಲಿ ರಂಗಾಯಣ ರಘು ರವರು ಹೇಳಿದ್ದೇನು ಗೊತ್ತೇ??

6,893

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೂರೇ ದಿನಗಳಲ್ಲಿ 100 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಹಲವಾರು ಅಡೆತಡೆಗಳ ನಂತರವೂ ಕೂಡ ಇಂದಿಗೂ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲಿ ನಿರ್ಮಾಪಕರು ಹಾಕಿರುವ ಎಲ್ಲಾ ಬಂಡವಾಳ ಕೂಡ ವಾಪಸಾಗಿ ಈಗ ಲಾಭದ ಪ್ರದರ್ಶನವನ್ನು ಕಾಣುತ್ತಿದೆ ಎಂಬುದಾಗಿ ಸುದ್ದಿಗಳು ಹರಿದಾಡುತ್ತಿವೆ.

ಇತ್ತೀಚಿಗಷ್ಟೇ ಜೇಮ್ಸ ಚಿತ್ರತಂಡ ಸಕ್ಸೆಸ್ ಮೀಟ್ ಕೂಡ ಮಾಡಿತ್ತು. ಇದರಲ್ಲಿ ಶಿವಣ್ಣ ಸೇರಿದಂತೆ ಚಿತ್ರತಂಡದ ಎಲ್ಲಾ ಸದಸ್ಯರು ಕೂಡ ಭಾಗಿಯಾಗಿದ್ದರು. ಇನ್ನು ಈ ಸಂದರ್ಭದಲ್ಲಿ ಅಪ್ಪು ಅವರಿಗೆ ಧ್ವನಿ ನೀಡಿರುವ ಕುರಿತಂತೆ ಕೂಡ ಶಿವಣ್ಣ ಭಾವುಕರಾಗಿದ್ದರು. ಈ ಸಂದರ್ಭದಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ರಂಗಾಯಣ ರಘು ರವರು ಕೂಡ ಅಪ್ಪು ಅವರನ್ನು ನೆನಸಿಕೊಂಡು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅಪ್ಪು ಅವರ ಕುರಿತಂತೆ ಯಾರಿಗೂ ಗೊತ್ತಿರದ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಗೊತ್ತಿರೋ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಅತ್ಯಂತ ಹೆಚ್ಚು ಜಾಹೀರಾತುಗಳಲ್ಲಿ ನಟಿಸುವ ನಟರಲ್ಲಿ ಒಬ್ಬರಾಗಿದ್ದಾರೆ. ಒಮ್ಮೆ ಅಪ್ಪೂರ್ ಅವರನ್ನು ಭೇಟಿಯಾಗಿದ್ದಾಗ ರಂಗಾಯಣ ರಘು ರವರು ಯಾವುದೇ ಜಾಹೀರಾತು ಬೇಕಾದರೂ ಮಾಡಿ ಆದರೆ ಕೋಲ್ಡ್ ಡ್ರಿಂಕ್ಸ್ ಜಾಹೀರಾತನ್ನು ಮಾತ್ರ ಮಾಡಬೇಡಿ ಎಂಬುದಾಗಿ ಹೇಳಿದ್ದರಂತೆ. ಆಗ ಯಾಕೆ ಎಂದು ಅಪ್ಪು ಕೇಳಿದಾಗ ರಂಗಾಯಣದ ರಘುರವರು ಕೋಲ್ಡ್ ಡ್ರಿಂಕ್ಸ್ ಬದಲು ರೈತ ಮಾರಾಟಮಾಡುವ ಎಳನೀರನ್ನು ಎಲ್ಲರು ಖರೀದಿಸಿದರೆ ಆತನ ಜೀವನ ಉಳಿಯುತ್ತದೆ ಹಾಗೂ ಆರೋಗ್ಯವೂ ಕೂಡ ಸಮೃದ್ಧಿಯಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ. ಅದೇ ಕೂಡಲೇ ಅಪ್ಪು ಅವರು ರಂಗಾಯಣರಘು ರವರಿಗೆ ಯಾವುದೇ ಕಾರಣಕ್ಕೂ ತಾನು ಕೋಲ್ಡ್ ಡ್ರಿಂಕ್ಸ್ ಜಾಹೀರಾತಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದಾಗಿ ಮಾತು ನೀಡಿದ್ದರಂತೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.