RRR ಕಲೆಕ್ಷನ್ಗೆ ದೊಡ್ಡ ಹೊಡೆತ, ಸಾವಿರ ಕೋಟಿ ಮಾಡುತ್ತದೆ ಎಂದು ಕೊಂಡಿದ್ದ RRR ಗೆ ಬಿಗ್ ಶಾಕ್. ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಕೂಡ ಬರೋಬ್ಬರಿ 8000 ತೆರೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಪರದೆಗಳಲ್ಲಿ ಬಿಡುಗಡೆಯಾದಂತಹ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಈಗಾಗಲೇ ಆರ್ ಆರ್ ಆರ್ ಚಿತ್ರ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಕೂಡ ಹೌಸ್ಫುಲ್ ಪ್ರದರ್ಶನವನ್ನು ಕಾಣುತ್ತಿದೆ.
ಪುಷ್ಪ ಚಿತ್ರದ ನಂತರ ದೇಶದಾದ್ಯಂತ ಪ್ರತಿಯೊಂದು ಭಾಷೆಯ ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್ಗೆ ಕರೆತಂದ ಮತ್ತೊಂದು ಚಿತ್ರವೆಂದರೆ ಅದು ಖಂಡಿತವಾಗಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಎಂದು ಹೇಳಬಹುದಾಗಿದೆ. ಜೂನಿಯರ್ ಎನ್ಟಿಆರ್ ರಾಮಚರಣ್ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆರ್ ಆರ್ ಆರ್ ಚಿತ್ರ ಪ್ರತಿಯೊಂದು ಭಾಷೆಯ ಪ್ರೇಕ್ಷಕರನ್ನು ಕೂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ರಾಜಮೌಳಿಯವರ ಮ್ಯಾಜಿಕ್ ಮತ್ತೊಮ್ಮೆ ಭಾರತದ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಿದೆ ಎಂದರೆ ತಪ್ಪಾಗಲಾರದು. ಇನ್ನು ನಿಮಗೆ ಗೊತ್ತಿರುವಂತೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವೆಂದರೆ ಅದು ಬಾಹುಬಲಿ 2. ಅದನ್ನು ನಿರ್ದೇಶಿಸಿರುವ ನಿರ್ದೇಶಕ ಕೂಡ ರಾಜಮೌಳಿ ಅವರೇ. ಹೀಗಾಗಿ ಆರ್ ಆರ್ ಆರ್ ಚಿತ್ರದ ಮೂಲಕ ಆ ದಾಖಲೆಯನ್ನು ಕೂಡ ಮುರಿಯುವತ್ತ ರಾಜಮೌಳಿಯವರು ಹೊರಟಿದ್ದಾರೆ. ಆದರೆ ರಾಜಮೌಳಿಯವರ ಈ ವಿಜಯದ ಹಾದಿಯಲ್ಲಿ ಕೆಲವೊಂದು ಮುಳ್ಳುಗಳು ಎದುರಾಗಿವೆ. ಹಾಗಿದ್ದರೆ ಆ ಸಮಸ್ಯೆಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.
ಈಗಾಗಲೇ ಬಂದಿರುವಂತಹ ರಿಪೋರ್ಟ್ ಗಳ ಪ್ರಕಾರ ಬಾಹುಬಲಿ 2 ಚಿತ್ರದ ಮೊದಲ ದಿನದ ಕಲೆಕ್ಷನ್ ಅನ್ನು ಆರ್ ಆರ್ ಆರ್ ಚಿತ್ರ ಮುರಿಯುವುದು ಕನ್ಫರ್ಮ್. ಆದರೆ ಬಾಹುಬಲಿ 2 ಚಿತ್ರದ ಜೀವಮಾನ ಕಲೆಕ್ಷನ್ ಅನ್ನು ಹಿಂದಿಕ್ಕೋ ರಾಜಮೌಳಿ ಅವರ ಆಸೆಗೆ ಇಂಟರ್ನೆಟ್ ಎನ್ನುವುದು ತಣ್ಣೀರನ್ನು ಎರಚಿದೆ ಎಂದು ಹೇಳಬಹುದಾಗಿದೆ. ಹೌದು ಟೊರೆಂಟ್ ಹಾಗು ಟೆಲಿಗ್ರಾಮ್ ನಂತಹ ಪೈರಸಿ ಸೈಟ್ ಗಳಿಂದಾಗಿ ಆರ್ ಆರ್ ಆರ್ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದರಿಂದಾಗಿ ಖಂಡಿತವಾಗಿ ಆರ್ ಆರ್ ಆರ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಕುಂಠಿತಗೊಳ್ಳಬಹುದಾದಂತಹ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಹೀಗಾಗಿ ಬಾಹುಬಲಿಯ ಕಲೆಕ್ಷನ್ ಅನ್ನು ಮೀರಿಸುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.