ಐಪಿಎಲ್ ತಂಡವನ್ನು ಹೊಂದಿದ್ದ ಅತ್ಯಂತ ಸುಂದರಿ ಒಡತಿಯರು ಯಾರ್ಯಾರು ಗೊತ್ತೇ?? ಟಾಪ್ 5 ಒಡತಿಯರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತದ ವನಿತೆಯರು ಮೊದಲಿನಿಂದಲೂ ಕೂಡ ತಾವು ಪುರುಷ ಪ್ರಾಮುಖ್ಯತೆ ಹೊಂದಿರುವ ಸಮಾಜ ಇದ್ದಾಗಿನಿಂದಲೂ ಯಾವುದೇ ಕೆಲಸವನ್ನು ಮಾಡಲು ಸಿದ್ದರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ಇಂದಿನ ಕಾಲದಲ್ಲಿ ಪುರುಷರಷ್ಟೇ ಸಮಾನತೆಯನ್ನು ಮಹಿಳೆಯರಿಗೂ ಕೂಡ ನೀಡಲಾಗಿದೆ. ಹೀಗಾಗಿ ಪುರುಷ ಯಾವೆಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾನೋ ಅಲ್ಲೆಲ್ಲ ಮಹಿಳೆಯರ ಪ್ರಾಬಲ್ಯತೆ ಕೂಡ ಇದೆ.
ಇನ್ನು ಈಗ ನಾವು ಮಾತನಾಡುತ್ತಿರುವುದು ಭಾರತೀಯ ಕ್ರೀಡಾ ಕ್ಷೇತ್ರದ ಹಬ್ಬ ಎಂದೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಐಪಿಎಲ್ ಪಂದ್ಯಾವಳಿಗಳಿಗಳ ಕುರಿತಂತೆ. ಐಪಿಎಲ್ ನಲ್ಲಿ ಕೇವಲ ಆಟಗಾರರು ಮಾತ್ರವಲ್ಲದೆ ತಂಡದ ಮಾಲೀಕರು ಕೂಡ ಪ್ರಮುಖವಾಗಿರುತ್ತಾರೆ. ನಾವು ಇಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವುದು ಐಪಿಎಲ್ ತಂಡಗಳ ಒಡೆತನವನ್ನು ಈಗಾಗಲೇ ಹೊಂದಿರುವಂತಹ 5 ಸುಂದರ ಒಡತಿಯ ರ ಕುರಿತಂತೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಯಾರೆಲ್ಲ ಕಾಣಸಿಗುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.

ಶಿಲ್ಪ ಶೆಟ್ಟಿ; ಕರ್ನಾಟಕ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಶಿಲ್ಪಾ ಶೆಟ್ಟಿ ಅವರು ಕೂಡ ಈ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಪತಿ ಹಾಗೂ ಶ್ರೀಮಂತ ಉದ್ಯಮಿಯಾಗಿರುವ ರಾಜ್ ಕುಂದ್ರಾ ರಾಜಸ್ಥಾನ ರಾಯಲ್ಸ್ ತಂಡದಲ್ಲಿ 11.7% ಒಡೆತನವನ್ನು ಹೊಂದಿದ್ದರು. ಆದರೆ ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ರಾಜಸ್ಥಾನ ದಂಡವನ್ನು ಎರಡು ವರ್ಷಗಳ ಕಾಲ ನಿಷೇಧ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇವರ ಮಾಲಿಕತ್ವ ಕೂಡ ಹೊರಟು ಹೋಗುತ್ತದೆ.

ಕಾವ್ಯ ಮಾರನ್; ಸನ್ ನೆಟ್ವರ್ಕ್ ಸಂಸ್ಥೆಯ ಮಾಲೀಕರಾಗಿರುವ ಕಲಾನಿಧಿ ಮಾರನ್ ಅವರವರ ಮಗಳಾಗಿರುವ ಕಾವ್ಯ ಮಾರನ್ ರವರು ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಯಾಗಿದ್ದಾರೆ. ಈಗಾಗಲೇ ಅವರನ್ನು ಹಲವಾರು ಬಾರಿ ತಮ್ಮ ತಂಡಕ್ಕೆ ಸಪೋರ್ಟ್ ಮಾಡುವ ವಿಡಿಯೋ ತುಣುಕುಗಳಲ್ಲಿ ಜನಪ್ರಿಯರಾಗಿರುವುದನ್ನು ನೋಡಿರುತ್ತೀರಿ. ತಂಡಕ್ಕೆ ಸಪೋರ್ಟ್ ಮಾಡುವ ವಿಚಾರಕ್ಕೆ ಬಂದರೆ ಅವರು ಅಗ್ರಸ್ಥಾನದಲ್ಲಿ ಕಾಣಸಿಗುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೂಹಿ ಚಾವ್ಲಾ; ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲಕ ನಾಗಿ ಕೇವಲ ಶಾರುಖ್ ಖಾನ್ ರವರು ಮಾತ್ರವಲ್ಲದೆ ಕೋ ಓನರ್ ಆಗಿ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ನಟಿ ಜೂಹಿ ಚಾವ್ಲಾ ಅವರು ಕೂಡ ಇದ್ದಾರೆ. ಇವರನ್ನು ನೀವು ಇವರ ಮಗಳೊಂದಿಗೆ ಹಲವಾರು ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹುರಿದುಂಬಿಸಿ ತ್ತಿರುವುದನ್ನು ಕ್ರೀಡಾಂಗಣದ ಸ್ಟ್ಯಾಂಡ್ ಗಳಲ್ಲಿ ನೋಡಿರಬಹುದಾಗಿದೆ.

ಪ್ರೀತಿ ಜಿಂಟಾ; ಪ್ರೀತಿಜಿಂಟಾ ಆರಂಭಿಕ ಐಪಿಎಲ್ ಸೀಸನ್ ನಿಂದಲೂ ಕೂಡ ಇಂದಿನವರೆಗೆ ತಮ್ಮ ಪಂಜಾಬ್ ಕಿಂಗ್ಸ್ ತಂಡವನ್ನು ಮಾಲಕಿ ಯಾಗಿ ಹುರಿದುಂಬಿಸು ವುದರಲ್ಲಿ ಹಿಂದೆಬಿದ್ದಿಲ್ಲ. ತಂಡದ ಒಡತಿಯಾಗಿ ಅಂದಿನಿಂದ ಇಂದಿನವರೆಗೂ ಒಬ್ಬಳೇ ನಿಭಾಯಿಸಿಕೊಂಡು ಬಂದಿರುವುದು ನಿಜಕ್ಕೂ ಕೂಡ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಆಗುವಂತಹ ವಿಚಾರ. ಅದಕ್ಕಾಗಿಯೇ ಐಪಿಎಲ್ ಪ್ರೇಕ್ಷಕರ ನೆಚ್ಚಿನ ಮಹಿಳಾ ಓನರ್ ಆಗಿ ಪ್ರೀತಿಜಿಂಟಾ ರವರು ಕಾಣಿಸಿಕೊಳ್ಳುತ್ತಾರೆ.

ಗಾಯತ್ರಿ ರೆಡ್ಡಿ; ಇವರ ಹೆಸರನ್ನು ನೀವು ಹೆಚ್ಚಿನ ಮಟ್ಟದಲ್ಲಿ ಕೇಳುವುದಕ್ಕೆ ಚಾನ್ಸ್ ಇಲ್ಲ. ಇವರು ಮೊದಲ ಆವೃತ್ತಿಯ ಐಪಿಎಲ್ ಅನ್ನು ಗೆದ್ದಿರುವ ಡೆಕ್ಕನ್ ಚಾರ್ಜರ್ಸ್ ತಂಡದ ಮಾಲೀಕರಾಗಿರುವ ಡೆಕ್ಕನ್ ಕ್ರಾನಿಕಲ್ ಸಂಸ್ಥೆಯ ವೆಂಕಟರಾಮರೆಡ್ಡಿ ಅವರ ಮಗಳ ಆಗಿದ್ದಾರೆ. ಆ ಸಮಯದಲ್ಲಿ ಅವರು ತಮ್ಮ ತಂಡವನ್ನು ಹುರಿದುಂಬಿಸಲು ಸ್ಟೇಡಿಯಂನಲ್ಲಿ ಕುಳಿತುಕೊಳ್ಳುತ್ತಿದ್ದರು. ಆಗ ಅವರನ್ನು ಎಲ್ಲರೂ ಕೂಡ ದಕ್ಷಿಣ ಭಾರತ ಚಿತ್ರರಂಗದ ನಟಿ ಎಂದೇ ಭಾವಿಸಿದ್ದರು. ಇವರೇ ನಾವು ಇಂದು ಹೇಳಲು ಹೊರಟಿರುವ ಐಪಿಎಲ್ ಹಿಸ್ಟರಿಯ ಅತ್ಯಂತ 5 ಸುಂದರ ಒಡತಿಯರು. ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವುದನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಈ ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.