ರಾಜಮೌಳಿ RRR ಚಿತ್ರದ ಮೂಲಕ ಎಷ್ಟು ಹಣ ಕಲೆಕ್ಷನ್ ಟಾರ್ಗೆಟ್ ಮಾಡಿದ್ದಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ?? ಇದು ನಿಜಕ್ಕೂ ಸಾಧ್ಯವೇ??

54

ನಮಸ್ಕಾರ ಸ್ನೇಹಿತರೇ ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವಂತೆ ರಾಜಮೌಳಿ ನಿರ್ದೇಶನದ 400 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ಅದ್ದೂರಿ ಚಿತ್ರವಾಗಿರುವ ಆರ್ ಆರ್ ಆರ್ ಇಂದು ರಾಜ್ಯಾದ್ಯಂತ ದೇಶ-ವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಚಿತ್ರದ ಕುರಿತಂತೆ ಈಗಾಗಲೇ ಬಿಡುಗಡೆಯಾಗುವ ಮುನ್ನವೇ ಹಲವಾರು ದಾಖಲೆಗಳು ದಾಖಲೆಯ ಪುಸ್ತಕವನ್ನು ಸೇರಿದ್ದವು.

ರಾಜಮೌಳಿ ನಿರ್ದೇಶನದ ಚಿತ್ರಗಳು ಅಂದಮೇಲೆ ದಾಖಲೆ ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಈಗಾಗಲೇ 400 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ಆರ್ ಆರ್ ಆರ್ ಚಿತ್ರ ಇಂದು ಬಿಡುಗಡೆಯಾಗಿ ಎಲ್ಲಾ ಕಡೆ ಹೌಸ್ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಕರ್ನಾಟಕದಲ್ಲಿ ಕೂಡ ಟಿಕೆಟ್ ಬೆಲೆ ಕೂಡ ಹೆಚ್ಚಾಗಿದ್ದು ಇಷ್ಟಿದ್ದರೂ ಕೂಡ ಪ್ರೇಕ್ಷಕರು ಸಿನಿಮಾವನ್ನು ನೋಡುವುದನ್ನು ಮಾತ್ರ ಬಿಟ್ಟಿಲ್ಲ. ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅಜಯ್ ದೇವ್ಗನ್ ರಾಮ್ ಚರಣ್ ಹಾಗೂ ಆಲಿಯಾ ಭಟ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ನಟಿಸಿದ್ದಾರೆ. ಚಿತ್ರದ ಮೇಕಿಂಗ್ ಕೂಡ ಶ್ರೀಮಂತವಾಗಿ ಮೂಡಿಬಂದಿದ್ದು ಚಿತ್ರದ ಕಲೆಕ್ಷನ್ ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷಿಸಲಾಗಿದೆ. ಹಾಗಿದ್ದರೆ ಆರ್ ಆರ್ ಆರ್ ಚಿತ್ರತಂಡ ಎಷ್ಟು ಕೋಟಿ ಕಲೆಕ್ಷನ್ ಅನ್ನು ಟಾರ್ಗೆಟ್ ಮಾಡಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಾಮಾರಿ ನಂತರ ಚಿತ್ರರಂಗ ಎನ್ನುವುದು ಸಾವಕಾಶವಾಗಿ ಚೇತರಿಸಿಕೊಳ್ಳುತ್ತಿದೆ. ಇಷ್ಟಿದ್ದರೂ ಕೂಡ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ 800 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಇಟ್ಟುಕೊಂಡಿದಯಂತೆ. ಈಗಾಗಲೇ ಬಿಡುಗಡೆಗೂ ಮುನ್ನವೇ ಚಿತ್ರತಂಡ 500 ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ. ಟಿಕೆಟ್ ದರವೂ ಕೂಡ ಕೆಲವು ಕಡೆಗಳಲ್ಲಿ ಹೆಚ್ಚಾಗಿರುವುದರಿಂದಾಗಿ ಈ ಚಿತ್ರ 800ರಿಂದ ಸಾವಿರ ಕೋಟಿ ರೂಪಾಯಿ ಸುಲಭವಾಗಿ ಮಾಡಬಹುದು ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಚಿತ್ರದ ಬಜೆಟ್ 400ಕೋಟಿ ಆಗಿರುವುದರಿಂದಾಗಿ ಮೊದಲ ದಿನವೇ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಚಿತ್ರದ ಟಾರ್ಗೆಟ್ ಸುಲಭವಾಗಬಹುದು ಎನ್ನುವುದಾಗಿ ಕೂಡ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.