400 ಕೋಟಿ ಬಜೆಟ್ ಹಾಕಿ ಮಾಡಿರುವ RRR ಸಿನಿಮಾ ಹೇಗಿದೆ ಗೊತ್ತೇ?? ಕನ್ನಡದಲ್ಲಿ ಸಂಪೂರ್ಣ ವಿಮರ್ಶೆ ಮೊದಲ ಬಾರಿಗೆ.

66

ನಮಸ್ಕಾರ ಸ್ನೇಹಿತರೇ ಎಸ್ ರಾಜಮೌಳಿ ಅವರ ಸಿನಿಮಾಗಳೆಂದರೆ ಯಾವುದೇ ಪ್ರಚಾರದ ಅವಶ್ಯಕತೆ ಇರೋದಿಲ್ಲ ಯಾಕೆಂದರೆ ಅವರೇ ಒಂದು ದೊಡ್ಡ ಪ್ರಚಾರ ಎಂದು ಹೇಳಬಹುದಾಗಿದೆ. ರಾಜಮೌಳಿಯವರ ಚಿತ್ರದ ಪ್ರಚಾರ ಎನ್ನುವುದು ಭಾಷೆಗಳ ಎಲ್ಲೆಯನ್ನು ಮೀರಿ ಭಾರತದಾದ್ಯಂತ ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕನಲ್ಲಿ ತಲುಪುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಸಾಂಗ್ ಟ್ರೈಲರ್ ಹಾಗೂ ಟೀಸರ್ ಗಳಿಂದ ಎಲ್ಲರ ಜನಮನಗೆದ್ದಂತಹ ಆರ್ ಆರ್ ಆರ್ ಇಂದು ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಹಾಗಿದ್ದರೆ ಚಿತ್ರದ ಕುರಿತಂತೆ ವಿಮರ್ಶನ ದೃಷ್ಟಿಯಲ್ಲಿ ಸವಿಸ್ತಾರವಾಗಿ ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಪ್ರಮುಖವಾಗಿ ನಾವು ಹೇಳಬೇಕಾಗಿರುವ ಒಂದು ಅಂಶವೆಂದರೆ ಕನ್ನಡಿಗನಾಗಿರುವ ಜೂನಿಯರ್ ಎನ್ಟಿಆರ್ ರವರು ಈ ಸಿನಿಮಾಗೆ ಸ್ವತಹ ಅವರ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖಂಡಿತವಾಗಿ ಇಷ್ಟವಾಗುವಂತಹ ವಿಚಾರ. ಈ ಸಿನಿಮಾಗಾಗಿ ರಾಜಮೌಳಿ ಅವರು ಐದು ವರ್ಷ ಯಾಕೆ ತೆಗೆದುಕೊಂಡರು ಎನ್ನುವುದನ್ನು ಚಿತ್ರದಲ್ಲಿ ಪ್ರತಿಯೊಂದು ದೃಶ್ಯವನ್ನು ನೋಡಿದಾಗ ಗೊತ್ತಾಗುತ್ತದೆ. ಚಿತ್ರದಲ್ಲಿ ರಾಮಚರಣ ರವರು ಬ್ರಿಟಿಷರ ಅಧಿಪತಿ ದಲ್ಲಿರುವ ಪೊಲೀಸ್ ಅಧಿಕಾರಿಯಾಗಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಜೂನಿಯರ್ ಎನ್ಟಿಆರ್ ರವರು ಗೊಂಡ ಪಂಗಡದ ಜನಾಂಗಕ್ಕೆ ಸೇರಿದಂತಹ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಿನ ಕಾಲದಲ್ಲಿ ಹೇಗಿತ್ತು ಹಾಗೂ ಕೋಮರಂ ಭೀಮ್ ಬ್ರಿಟಿಷರಿಗೆ ಹೇಗೆ ಕಾಡುತ್ತಿದ್ದ ಎನ್ನುವುದನ್ನು ವಿವರವಾಗಿ ತೋರಿಸಿದ್ದಾರೆ. ಸ್ನೇಹದ ಹಾಡು ಹಾಗೂ ಆಕ್ಷನ್ ಸೀಕ್ವೆನ್ಸ್ ಗಳು ಪ್ರೇಕ್ಷಕರನ್ನು ಸೀಟಿನ ತುದಿಯವರೆಗೆ ಕೂರಿಸುವುದಂತೂ ಸುಳ್ಳಲ್ಲ. ಇನ್ನು ಚಿತ್ರದಲ್ಲಿ ಅಲ್ಲೂರಿ ಸೀತಾರಾಮರಾಜು ರವರ ಗೆಳತಿಯಾಗಿ ಸೀತೆ ಪಾತ್ರದಲ್ಲಿ ಅಲಿಯ ಭಟ್ ರವರು ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಕೆಲವೊಮ್ಮೆ ಕೆಲವೊಂದು ದೃಷ್ಟಿಗಳು ಅತಿಯಾಯಿತು ಎಂಬ ಭಾವನೆ ಮೂಡುವುದಂತೂ ಸುಳ್ಳಲ್ಲ. ಆದರೂ ಪ್ರತಿಯೊಬ್ಬ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಚಾಕಚಕ್ಯತೆಯನ್ನು ಸಿನಿಮಾ ಹೊಂದಿದೆ. ಇನ್ನು ಕ್ಲೈಮ್ಯಾಕ್ಸ್ ಅಂತೂ ಸೂಪರ್.

ಇದು ಜೂನಿಯರ್ ಎನ್ಟಿಆರ್ ಅವರ ಜೀವಮಾನ ಶ್ರೇಷ್ಠ ಪರ್ಫಾರ್ಮೆನ್ಸ್ ಅಂದರೆ ಖಂಡಿತವಾಗಿ ತಪ್ಪಾಗಲಾರದು. ಪ್ರತಿಯೊಂದು ದೃಶ್ಯಗಳನ್ನು ಕೂಡ ಕ್ಯಾಮೆರಾದಲ್ಲಿ ಶ್ರೀಮಂತವಾಗಿ ಸೆರೆಹಿಡಿಯಲಾಗಿದೆ. ಇನ್ನು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಜಯ್ ದೇವ್ಗನ್ ಒಲಿವಿಯಾ ಮಾರಿಸ್ ಹಾಗೂ ಶ್ರೇಯಾ ಶರಣ್ ಅವರು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಅಂತಹ ನಟನೆಯನ್ನು ತೋರಿಸಿದ್ದಾರೆ. ಕೆಲವೊಂದು ಸಂತೋಷದ ಕ್ಷಣಗಳು ನಿಮ್ಮನ್ನು ನಗಿಸುತ್ತವೆ ಇನ್ನು ಕೆಲವೊಂದು ಭಾವನಾತ್ಮಕ ಕ್ಷಣಗಳು ನಿಮ್ಮನ್ನು ಅಳಿಸುತ್ತದೆ ಇಂತಹ ರೋಲರ್ ಕೋಸ್ಟರ್ ಸಿನಿಮಾ ಅನುಭವವನ್ನು ಈ ಚಿತ್ರ ನಿಮಗೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ರಾಮಚರಣ್ ರವರು ಕೂಡ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಕಾಣಿಸಿಕೊಂಡಿರುವ ರೀತಿ ನಿಜಕ್ಕೂ ಕೂಡ ರಾಮಚರಣ್ ಅವರ ನಟನೆಯ ಶಕ್ತಿಯನ್ನು ಪ್ರೇಕ್ಷಕರಿಗೆ ತೋರ್ಪಡಿಸುತ್ತದೆ. ರಾಜಮೌಳಿಯವರು ಇಬ್ಬರು ಸ್ಟಾರ್ ನಟರ ಸಂಪೂರ್ಣ ನಟನ ಶಕ್ತಿಯನ್ನು ಹೀರಿಕೊಂಡು ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದೂಟವನ್ನು ಉಣಬಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಚಿತ್ರ ಈಗಾಗಲೇ ನಿರ್ಮಾಪಕರಿಂದ ಕೇಳಿ ಬಂದಿರುವಂತೆ 350 ಕೋಟಿಗೂ ಅಧಿಕ ಬಜೆಟ್ನಲ್ಲಿ ಮೂಡಿಬಂದಿದೆ.

ಕರ್ನಾಟಕ ಹಾಗು ತೆಲುಗು ರಾಜ್ಯಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಆರ್ ಆರ್ ಆರ್ ಚಿತ್ರ ದೊಡ್ಡ ಮಟ್ಟದಲ್ಲಿ ಜನರಿಂದ ಪಾಸಿಟಿವ್ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ವಿಮರ್ಶಕರು ಕೂಡ ಚಿತ್ರವನ್ನು ಮೆಚ್ಚಿಕೊಂಡು ಗುಣಗಾನವನ್ನು ಮಾಡುತ್ತಿದ್ದಾರೆ. ನಾವು ನೋಡಿರುವಂತೆ ಚಿತ್ರ 5 ರಲ್ಲಿ 3.5 ರೇಟಿಂಗ್ ಪಡೆಯಬಹುದಾಗಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ರಾಜಮೌಳಿಯವರ ಶ್ರೀಮಂತಿಕೆಯ ಮೇಕಿಂಗ್ ಶೈಲಿ ಹಾಗೂ ಪ್ರತಿಯೊಂದು ಕ್ಷಣಗಳನ್ನು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಅವರು ಬಳಸಿರುವ ಟ್ವಿಸ್ಟ್ ಪಾಯಿಂಟ್ ಗಳು. ಖಂಡಿತವಾಗಿ ಈ ಚಿತ್ರ ಐದು ವರ್ಷಗಳ ಕಾಲ ಪ್ರೇಕ್ಷಕರ ನಿರೀಕ್ಷಣೆಗೆ ಪಾತ್ರವಾಗಿರುವುದು ಯಾಕೆ ಎನ್ನುವುದು ಸಂಪೂರ್ಣವಾಗಿ ಸಾಬೀತುಪಡಿಸುತ್ತದೆ. ಚಿತ್ರದ ಕುರಿತಂತೆ ನಿಮಗಿರುವಂತಹ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.