ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕೂಡ ಇರಲಿದೆ ಐಟಂ ಡ್ಯಾನ್ಸ್; ಆದ್ರೆ ಡ್ಯಾನ್ಸ್ ಮಾಡುತ್ತಿರುವುದು ಸಮಂತ ಅಲ್ಲ, ಆ ಸುರಸುಂದರಿ ಯಾರು ಗೊತ್ತೇ??

196

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ವರ್ಷ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವಂತಹ ಹೆಮ್ಮೆಯ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾವೆಂದರೆ ಅದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಪುಷ್ಪ ಚಿತ್ರ ಎಂದರೆ ತಪ್ಪಾಗಲಾರದು. ಹೌದು ಪುಷ್ಪ ಚಿತ್ರ ಬಾಕ್ಸಾಫೀಸ್ ನಲ್ಲಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮಹಾಮಾರಿ ಯಿಂದಾಗಿ ಮನೆಯಲ್ಲಿ ಅಡಗಿ ಕುಳಿತಿದ್ದ ಪ್ರೇಕ್ಷಕರು ಥಿಯೇಟರ್ಗೆ ಬರುವಂತೆ ಮಾಡಿತ್ತು. ಇನ್ನು ಈ ಸಿನಿಮಾ ಗೆಲ್ಲುವುದಕ್ಕೆ ಹಲವಾರು ಕಾರಣಗಳಿವೆ ಎಂದು ಹೇಳಬಹುದಾಗಿದೆ.

ಸುಕುಮಾರ್ ಅವರ ನಿರ್ದೇಶನ ಒಂದುಕಡೆಯಾದರೆ ಇನ್ನೊಂದು ಕಡೆ ಅಲ್ಲು ಅರ್ಜುನ ರವರ ಟ್ರಾನ್ಸ್ ಫಾರ್ಮೇಶನ್ ಮತ್ತೊಂದು ಕಡೆ ರಶ್ಮಿಕ ಮಂದಣ್ಣ ನವರ ಜನಪ್ರಿಯತೆ ಹೀಗೆ ಹತ್ತು ಹಲವಾರು ಅಂಶಗಳು ಚಿತ್ರವನ್ನು ಜಾಗತಿಕವಾಗಿ ಗೆಲ್ಲುವಂತೆ ಮಾಡಿದೆ. ಇನ್ನು ಚಿತ್ರದ ಐಟಂ ಡ್ಯಾನ್ಸ್ ಆಗಿರುವಂತಹ ಊ ಅಂಟವಾ ಕೂಡ ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡಿ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಪ್ರೇಕ್ಷಕರನ್ನು ಚಿತ್ರಮಂದಿರದ ಕಡೆಗೆ ಸೆಳೆದುಕೊಂಡಿತ್ತು. ಇದಕ್ಕೆ ಪ್ರಮುಖ ಕಾರಣ ಸಮಂತಾ ರವರು ಎಂದರೆ ತಪ್ಪಾಗಲಾರದು. ಹಲವಾರು ಸಮಯಗಳ ಕಾಲದನಂತರ ಸಮಂತಾ ರವರು ಐಟಂ ಡಾನ್ಸಿನ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದರು. ಪ್ರೇಕ್ಷಕರ ನಿರೀಕ್ಷೆಯನ್ನು ಕೂಡ ಪೂರೈಸುವಲ್ಲಿ ಯಶಸ್ವಿಯಾಗಿದ್ದರು. ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕೂಡ ಐಟಂ ಡ್ಯಾನ್ಸ್ ಇರಲಿದೆಯಂತೆ. ಆದರೆ ಈ ಐಟಂ ಡಾನ್ಸ್ ನಲ್ಲಿ ಸಮಂತ ಅವರ ಬದಲಿಗೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರಂತೆ.

ಹೌದು ಪುಷ್ಪ ಚಿತ್ರದ ಮೊದಲ ಭಾಗದಲ್ಲಿರುವ ಐಟಂಸಾಂಗ್ನಲ್ಲಿ ಕೂಡ ಅದೇ ನಟಿ ನಟಿಸಬೇಕಾಗಿತ್ತು. ಆದರೆ ಅವರು ಒಪ್ಪಿಕೊಳ್ಳದಿದ್ದ ಕಾರಣ ಸಮಂತಾ ರವರನ್ನು ಅವರ ಬದಲಿಗೆ ತರಲಾಗಿತ್ತು. ಹೌದು ಅವರು ಇನ್ಯಾರು ಅಲ್ಲ ಬಾಲಿವುಡ್ ಚಿತ್ರರಂಗದ ಒಂದು ಕಾಲದ ನ್ಯಾಷನಲ್ ಕೃಷ್ ಎಂದೇ ಕರೆಸಿಕೊಂಡಿದ್ದ ದಿಶಾ ಪಟಾನಿ ಯವರು. ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಇರುವ ಐಟಂ ಡಾನ್ಸ್ ನಲ್ಲಿ ದಿಶಾ ಪಟಾನಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಬಲವಾಗಿ ಕೇಳಿ ಬರುತ್ತಿದೆ. ಆದರೆ ದಿಶಾ ಪಟಾನಿ ಅವರು ಈಗಾಗಲೇ ಸಮಂತಾ ರವರು ಹುಟ್ಟುಹಾಕಿರುವ ನಿರೀಕ್ಷೆಗೆ ಎಷ್ಟು ಮಟ್ಟಿಗೆ ನ್ಯಾಯ ಸಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಈ ಬದಲಾವಣೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.