ಕೃತಿ ಶೆಟ್ಟಿ ರವರ ವಯಸ್ಸು ಕೇಳಿ ಶಾಕ್ ಆದ ಅಭಿಮಾನಿಗಳು, ಕೋಟಿ ಕೋಟಿ ಸಂಭಾವನೆ ಪಡೆಯುವ ಟಾಪ್ ನಟಿಯ ನಿಜವಾದ ವಯಸ್ಸೆಷ್ಟು ಗೊತ್ತೇ?? ಇಷ್ಟೊಂದು ಚಿಕ್ಕವರಾ??

785

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಮೂಲಕ ಭಾರತೀಯ ಚಿತ್ರರಂಗ ಹಲವಾರು ಯಶಸ್ವಿ ನಟ ಹಾಗೂ ನಟಿಯರನ್ನು ಕಂಡಿದೆ‌. ಉದಾಹರಣೆಗೆ ಕನ್ನಡ ಮೂಲದಿಂದ ಕಿಚ್ಚ ಸುದೀಪ್ ಪ್ರಕಾಶ್ ರೈ ರಶ್ಮಿಕ ಮಂದಣ್ಣ ಸುನಿಲ್ ಶೆಟ್ಟಿ ಶಿಲ್ಪಶೆಟ್ಟಿ ಐಶ್ವರ್ಯ ರೈ ಹೀಗೆ ಹತ್ತು ಹಲವಾರು ನಟರು ಪರಭಾಷೆಗಳಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದಿದ್ದಾರೆ. ಇಂದು ನಾವು ಹೇಳಲು ಹೊರಟಿರುವುದು ಇದೇ ರೀತಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಪಡೆದಿರುವ ನಟಿಯೊಬ್ಬರ ಕುರಿತಂತೆ.

ಹೌದು ಅವರು ಇನ್ಯಾರೂ ಅಲ್ಲ ಕರಾವಳಿ ಮೂಲದ ಬೆಡಗಿ ಆಗಿರುವ ಕೃತಿ ಶೆಟ್ಟಿ ರವರ ಕುರಿತು. ಉಪ್ಪೇನ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ ಶೆಟ್ಟಿ ಅವರು ನಟಿಸಿದ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟಿಯ ಜನಪ್ರಿಯತೆಯನ್ನು ತೆಲುಗು ಚಿತ್ರರಂಗದಲ್ಲಿ ಪಡೆದುಕೊಂಡಿದ್ದಾರೆ. ಈಗಾಗಲೇ ಹಲವಾರು ಸ್ಟಾರ್ ನಟರ ಸಿನಿಮಾಗಳ ಆಫರ್ ಕೂಡ ಅವರನ್ನು ಹುಡುಕಿಕೊಂಡು ಬಂದಿದೆ. ಸಂಭಾವನೆಯಲ್ಲಿ ಕೂಡ ಹೆಚ್ಚಳ ಮಾಡಿಕೊಂಡು ಯಾವುದೇ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ಸಂಭಾವನೆಯನ್ನು ಲಕ್ಷ ಲಕ್ಷ ಗಟ್ಟಲೆಯಲ್ಲಿ ಪಡೆಯುತ್ತಿದ್ದಾರೆ.

ನಟನೆಯಲ್ಲೂ ಕೂಡ ಯಾವುದೇ ಅನುಭವಿ ನಟಿ ಗಿಂತ ಕಡಿಮೆ ಇಲ್ಲದಂತೆ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಇನ್ನು ಯಾವ ಕ್ವಾಲಿಟಿ ಗಳು ಬೇಕು ನೀವೇ ಹೇಳಿ. ಇಷ್ಟೆಲ್ಲಾ ಪ್ರಭುದ್ಧ ರಂತೆ ಕಾಣುವ ಕೃತಿ ಶೆಟ್ಟಿ ಅವರ ವಯಸ್ಸು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹೌದು ಇಷ್ಟೊಂದು ಚಿಕ್ಕ ವಯಸ್ಸಿಗೆ ಮಂಗಳೂರಿನಿಂದ ತೆಲುಗು ಚಿತ್ರರಂಗಕ್ಕೆ ಬಂದು ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಕೃತಿ ಶೆಟ್ಟಿಯವರ ವಯಸ್ಸು ಕೇವಲ 18 ಮಾತ್ರ. ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಾ ನಾಯಕಿಯರನ್ನು ಹಿಂದಿಕ್ಕಿ ತೆಲುಗು ಚಿತ್ರರಂಗದ ನಂಬರ್ 1 ನಾಯಕಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೃತಿ ಶೆಟ್ಟಿಯವರ ಸಿನಿಮಾ ಪಯಣಕ್ಕೆ ನಮ್ಮ ಶುಭ ಹಾರೈಕೆ ಇರಲಿ.