ಸಾಯಿ ಪಲ್ಲವಿ ರವರು, ಕಾಲೇಜುನಲ್ಲಿ ಓದುತ್ತಿರುವಾಗ ಮಾಡಿದ ಡಾನ್ಸ್ ನೋಡಿದಿರಾ?? ಮೊದಲ ಬಾರಿಗೆ ಅಪರೂಪದ ಡಾನ್ಸ್ ತೋರಿಸ್ತೇವೆ , ಹೇಗಿದೆ ಗೊತ್ತೇ??

3,329

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಹೊಸ ಪ್ರತಿಭೆಗಳು ಬಂದ ಮೇಲಿಂದ ಚಿತ್ರರಂಗದ ದಿಕ್ಕೆ ಬದಲಾಗಿದೆ ಎಂದು ಹೇಳಬಹುದಾಗಿದೆ‌. ಅದರಲ್ಲಿ ಇಂದು ನಾನು ಮಾತನಾಡಲು ಹೊರಟಿರುವ ನಟಿ ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಇಡೀ ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ನಟಿ ಸಾಯಿ ಪಲ್ಲವಿ ಅವರ ಬಗ್ಗೆ.

ಮಲಯಾಳಂ ಚಿತ್ರರಂಗದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿರುವ ಸಾಯಿಪಲ್ಲವಿ ಅವರು ಈಗಾಗಲೇ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಪ್ರಮುಖವಾಗಿ ಸುದ್ದಿಯಾಗುವುದು ತಮ್ಮ ನ್ಯಾಚುರಲ್ ಬ್ಯೂಟಿ ನಟನೆ ಹಾಗೂ ಪ್ರಮುಖವಾಗಿ ನೃತ್ಯದ ವಿಚಾರವಾಗಿ. ಯಾವ ಹೀರೋಗೂ ಕಡಿಮೆ ಇಲ್ಲದಂತೆ ಸಕ್ಕತ್ತಾಗಿ ಸ್ಟೆಪ್ ಹಾಕುತ್ತಾರೆ. ಮಾರಿ 2 ಚಿತ್ರದಲ್ಲಿ ರೌಡಿ ಬೇಬಿ ಹಾಡಿಗೆ ಸಾಯಿ ಪಲ್ಲವಿ ಅವರು ಹಾಕಿರುವ ಸ್ಟೆಪ್ ವಿಶ್ವವಿಖ್ಯಾತವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯೂಟ್ಯೂಬ್ ನಲ್ಲಿ ಕೂಡ ನೂರಾರು ಮಿಲಿಯನ್ಸ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇತ್ತೀಚಿಗಷ್ಟೇ ಇದೇ ಮಾದರಿಯ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು ಈ ವಿಡಿಯೋದಲ್ಲಿ ನಟಿ ಸಾಯಿ ಪಲ್ಲವಿ ಅವರು ಡ್ಯಾನ್ಸ್ ರಿಹರ್ಸಲ್ ಮಾಡುತ್ತಿದ್ದಾರೆ. ಹೌದು ಬಾಲಿವುಡ್ನ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ನಟಿಸಿರುವ ತೀಸ್ ಮಾರ್ ಖಾನ್ ಚಿತ್ರದ ಮೈ ನೇಮ್ ಇಸ್ ಶೀಲ ಹಾಡಿಗೆ ಸಾಯಿ ಪಲ್ಲವಿ ಅವರು ಕುಣಿಯುತ್ತಿರುವ ಈ ವಿಡಿಯೋ ಈಗಾಗಲೇ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಎಲ್ಲರೂ ಸಾಯಿ ಪಲ್ಲವಿ ಅವರ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಅವರ ಕಾಲೇಜು ಪ್ರೋಗ್ರಾಂಗೆ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿರುವುದು ಎನ್ನುವುದಾಗಿ ತಿಳಿದು ಬಂದಿರುವುದು ಮತ್ತೊಂದು ವಿಶೇಷ. ನೀವು ಕೂಡ ಈ ವೀಡಿಯೋವನ್ನು ವೀಕ್ಷಿಸಿ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.