ಯಾರಿಗೂ ಸಲಾಂ ಹೊಡೆಯದ ರವಿಚಂದ್ರನ್ ಆ ಒಬ್ಬ ವ್ಯಕ್ತಿಯ ಮುಂದೆ ಮಾತ್ರ ತಲೆ ತಗ್ಗಿಸಿ ನಿಲ್ಲುತ್ತಿದ್ದರು ಯಾಕೆ ಗೊತ್ತಾ??

209

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಈಗಲೂ ಕನ್ನಡ ಸಿನಿಮಾ ದ ಬಗ್ಗೆಯೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಟ, ನಿರ್ದೇಶಕ ಅದಕ್ಕಿಂತ ಹೆಚ್ಚಾಗಿ ಒಬ್ಬ ನೈಜ ಕಲಾವಿದ ಅಂದ್ರೆ ಅದು ಕ್ರೇಜಿಸ್ಟಾರ್ ವಿ ರವಿಚಂದ್ರನ್! ನಾಯಕ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಕೂಡ ತನ್ನದೇ ಆದ ಶೈಲಿಯಲ್ಲಿ, ಸಿನಿಪ್ರಿಯರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ನೀಡುತ್ತಿರುವವರು ನಮ್ಮ ರವಿಮಾಮ.

ರವಿ ಸರ್ ಅತ್ಯಂತ ನೇರವಾಗಿ ಸ್ಪಷ್ಟವಾಗಿ ಮಾತನಾಡುವ ವ್ಯಕ್ತಿ. ಹಾಗಾಗಿ ಹಲವರಿಗೆ ಅವರ ಸ್ವಭಾವ ಕಹಿ ಅನ್ನಿಸಿದ್ದೂ ಇದೆ. ಆದರೆ ತಮ್ಮ ಸ್ವಪ್ರಯತ್ನದಿಂದ ಬೆಳೆಯುತ್ತಿರುವ ರವಿಚಂದ್ರನ್ ಇದುವರೆಗೆ ಯಾರ ಮುಂದೆಯೂ ತಲೆಬಾಗಿದ್ದೇ ಇಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ರವಿ ಸರ್ ತಲೆಬಾಗಿಸುತ್ತಾರೆ. ಅವರು ಉತ್ತಮ ಚಿತ್ರಗಳನ್ನು ಕೊಟ್ಟಾಗ ಅವರನ್ನು ಎತ್ತರಕ್ಕೆ ಬೆಳೆಸಿದಾಗಲೂ, ಅವರ ಚಿತ್ರ ಸೋತಾಗಲೂ ಅಭಿಮಾನಿಗಳ ತೀರ್ಪೇ ಅಂತಿಮ, ಅವರಿಗೆ ಹೇಗೆ ಬೇಕೋ ಹಾಗೆಯೇ ಚಿತ್ರ ನಿರ್ಮಾಣ ಮಾಡುತ್ತೇನೆ ಎನ್ನುವ ಅಭಿಮಾನದ ಮಾತುಗಳನ್ನು ರವಿಚಂದ್ರನ್ ಆಡುತ್ತಾರೆ.

ಇನ್ನು ಅಭಿಮಾನಿಗಳನ್ನ ಬಿಟ್ರೆ ರವಿ ಸರ್ ತಲೆ ಬಾಗಿದ್ದು, ಅವರ ಮಾತುಗಳನ್ನು ಅಕ್ಷರಶಃ ಪಾಲಿಸಿದ್ದು ಅಂದ್ರೆ ಅದು ತಂದೆ ವೀರಸ್ವಾಮಿ ಅವರದ್ದು. ಹೌದು ಚಿತ್ರರಂಗದ ಅ ಆ ಇ ಈ ಯನ್ನು ಕಲಿಸಿದ್ದೇ ಅವರ ತಂದೆ ವೀರಸ್ವಾಮಿಯವರು. ರವಿಚಂದ್ರನ್ ಅವರ ಕುಲ ಗೌರವ ಚಿತ್ರದ ನಟನೆಯ ಬಳಿಕ ಅವರ ಭವಿಷ್ಯ ಸಿನಿಮಾದಲ್ಲಿದೆ ಎನ್ನುವುದನ್ನು ಅರಿತ ವೀರಸ್ವಾಮಿ ಮಗನನ್ನು ಈಶ್ವರೀ ಸಂಸ್ಥೆಯ ಕಚೇರಿಗೆ ರವಿಚಂದ್ರನ್ ಅವರನ್ನ ಕರೆದುಕೊಂಡು ಹೋಗುತ್ತಾ ಇದ್ರು.

ಸಿನಿಮಾದ ಪ್ರತಿ ಆಯಾಮಗಳನ್ನ, ಅದರಲ್ಲಿರುವ ಆಳವನ್ನ ರವಿಚಂದ್ರನ್ ಅವರಿಗೆ ಅರಿವು ಮೂಡಿಸುವುದಕ್ಕಾಗಿ ಪ್ರಯೋಗಿಕ ಪಾಠಗಳನ್ನು ಮಾಡ್ತಾ ಇದ್ರು. ಈಗಲೂ ಅಪ್ಪ ಕಲಿಸಿದ ವಿದ್ಯೆಯನ್ನು ನೆನಪಿನಲ್ಲಿಟ್ಟುಕೊಂಡು ಅವರ ಮಾತಿಗೆ ಇಂದಿಗೂ ಗೌರವ ಸೂಚಿಸುವ ರವಿಚಂದ್ರನ್ ಅವರಿಗೆ ತಂದೆ ವೀರಸ್ವಾಮಿ ಎಂದರೆ ಅಪಾರ ಪ್ರೀತಿ. ಅವರು ತನ್ನೊಂದಿಗಿಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತಾರೆ ರವಿ ಸರ್. ಹಾಗಾಗಿ ತನ್ನ ತಂದೆ ವೀರಸ್ವಾಮಿಗೆ ಹಾಗೂ ಅಭಿಮಾನಿಗಳಿಗೆ ಮಾತ್ರ ನಾನು ತಲೆ ಬಾಗುತ್ತೇನೆಯೇ ಹೊರತು ಬೇರೆಯಾರಿಗೂ ಅಲ್ಲ ಎನ್ನುತ್ತಾರೆ ಕ್ರೇಜಿಸ್ಟಾರ್!