ಇಡೀ ದೇಶದಲ್ಲಿ ಜನರ ಮನಗೆದ್ದಿರುವ ಚಿತ್ರವಾದ ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಲಾವಿದರ ಸಂಭಾವನೆ ಎಷ್ಟು ಗೊತ್ತೇ?? ನಿಜಕ್ಕೂ ತಿಳಿದರೇ ಸಲ್ಯೂಟ್ ಮಾಡುತ್ತೀರಿ.
ನಮಸ್ಕಾರ ಸ್ನೇಹಿತರೇ, ಈಗಂತೂ ದೇಶದಾದ್ಯಂತ ದಿ ಕಾಶ್ಮೀರ್ ಫೈಲ್ಸ್ ದ್ದೆ ಹವಾ. ಎಲ್ಲಿ ನೋಡಿದರೂ ಇದೇ ಸಿನಿಮಾದ ಮಾತು. ರಾಜಕಾರಣಿಗಳಂತೂ ಸಿನಿಮಾ ಹೆಚ್ಚು ಕನೆಕ್ಟ್ ಆಗಿದೆ. ಕಮರ್ಷಿಯಲ್ ಚಿತ್ರಕ್ಕಿಂತ ಹೆಚ್ಚು ಗಳಿಕೆಯನ್ನು ಕೇವಲ ಹನ್ನೆರಡು ದಿನಗಳಲ್ಲಿ ಪಡೆದುಕೊಂಡಿದೆ ಈ ಚಿತ್ರ. ಅಂದಹಾಗೆ ಈ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಬಹುದು ಎಂದು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ.
ಇನ್ಫ್ಯಾಕ್ಟ್ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತೋ ಇಲ್ವೋ ಇಲ್ವೋ ಡೌಟ್ ಇತ್ತು. ಆದರೆ ಇವೆಲ್ಲವನ್ನು ಮೀರಿದ ದಿ ಕಾಶ್ಮೀರ್ ಫೈಲ್ಸ್ ಬೆಳೆದು ನಿಂತಿದೆ. ಕೇವಲ ಒಂದು ತಿಂಗಳ ಚಿತ್ರೀಕರಣವನ್ನು ಮಾಡಿದ್ದರು ಈ ಚಿತ್ರದ ಹಿಂದೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಾಲ್ಕು ವರ್ಷಗಳ ಸಂಶೋಧನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಇಂದು ಅವರ ಪರಿಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿದೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರೀಕ್ಷೆಗೂ ಮೀರಿ ಈ ಚಿತ್ರದ ಮೂಲಕ ಮನೆಮಾತಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ದೊಡ್ಡ ಸ್ಟಾರ್ ನಟರು ಯಾರು ಇಲ್ಲ ಆದರೆ ಇರುವ ನಟರ ನಟನೆಗೆ ಸರಿಸಾಟಿಯೇ ಇಲ್ಲ. ಸುಮಾರು ಕೋಟಿ ರೂಪಾಯಿಗಳನ್ನು ಈಗಾಗಲೇ ಬಾಚಿಕೊಂಡಿರುವ ಕಾಶ್ಮೀರ್ ಫೈಲ್ಸ್ ಅದರಲ್ಲಿ ನಟಿಸಿರುವ ನಟರಿಗೂ ಕೂಡ ಅದೇ ಪ್ರಮಾಣದಲ್ಲಿ ಸಂಭಾವನೆಯನ್ನು ಕೊಟ್ಟಿರುವುದು ವಿಶೇಷ.

ಈ ಚಿತ್ರದಲ್ಲಿ ನಟ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್ ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್ ಮೊದಲಾದ ನಟರ ನೈಜ ನಟನೆಯನ್ನು ನೀವಿಲ್ಲಿ ನೋಡಬಹುದು. 1990ರ ಕಾಶ್ಮೀರಿ ಪಂಡಿತರ ಹತ್ಯೆಯ ಪ್ರತಿ ಘಟನೆಯನ್ನು ಕಣ್ಮುಂದೆ ತರುತ್ತದೆ ಈ ಚಿತ್ರ. ಹಾಗೆಯೇ ಶೋಷಣೆಗೆ ಒಳಗಾದ ಪಂಡಿತರು ಇವರೇ ಇರಬೇಕು ಎನ್ನುವಂಥ ನಟನೆಯನ್ನು ನೀಡಿದ್ದು ಅನುಪಮ್ ಖೇರ್ ಮೊದಲಾದವರು.
ಇನ್ನು ಈ ನಟರಿಗೆ ಸಿಕ್ಕ ಸಂಭಾವನೆಯ ಬಗ್ಗೆ ಮಾತನಾಡುವುದಾದರೆ, ಅತ್ಯಂತ ಉತ್ತಮ ಕಲೆಕ್ಷನ್ ಕಂಡಿರುವ ಈ ಚಿತ್ರ ನಟರಿಗೂ ಕೂಡ ಉತ್ತಮ ಸಂಭಾವನೆಯನ್ನು ನೀಡಿದೆ. ಹಿರಿಯ ನಟ ಮಿಥುನ್ ಚಕ್ರವರ್ತಿಗೆ 1.5ಕೋಟಿ ರೂಪಾಯಿ ನೀಡಲಾಗಿದೆ, ಅನುಪಮ್ ಖೇರ್ ಅವರಿಗೆ ಒಂದು ಕೋಟಿ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.

ನಟಿ ಪಲ್ಲವಿ ಜೋಶಿ ಅವರು 50ರಿಂದ 70 ಲಕ್ಷ ರೂಪಾಯಿ ಸಂಭಾವನೆ ಪಡೆದಿರಬಹುದು ಎನ್ನಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಕೆಲಸಕ್ಕೆ 1 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎಂದು ವರದಿ ಆಗಿದೆ. ಇನ್ನುಳಿದಂತೆ ಯುವ ನಟ ದರ್ಶನ್ ಕುಮಾರ್ ಅವರಿಗೆ 45 ಲಕ್ಷ ರೂಪಾಯಿ ನೀಡಲಾಗಿದೆ. ಪುನೀತ್ ಇಸ್ಸಾರ್ ಮತ್ತು ಮೃಣಾಲ್ ಕುಲಕರ್ಣಿ ಅವರು ತಲಾ 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹೊರಹಾಕಿಲ್ಲ. ಇನ್ನು ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ದೆಹಲಿ ಫೈಲ್ಸ್ ಕೂಡ ಅಷ್ಟೇ ಕುತೂಹಲವನ್ನು ಹೆಚ್ಚಿಸಿದೆ.