ಆರ್ ಆರ್ ಆರ್ ಚಿತ್ರದ ಟಿಕೆಟ್ ಬೆಲೆ ಕೇಳಿ ಸುಸ್ತು ಬಿದ್ದ ಕನ್ನಡಿಗರು; ಚಿತ್ರದ ಟಿಕೆಟ್ ಬೆಲೆ ಕೇಳಿದರೆ ನೀವು ಕೂಡ ತಲೆತಿರುಗಿ ಬೀಳ್ತಿರಾ?? ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 25ರಿಂದ ರಾಜ್ಯಾದ್ಯಂತ ದೇಶದಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆಯ ಆರ್ ಆರ್ ಆರ್ ಚಿತ್ರ ತೆರೆಕಾಣಲಿದೆ. ಈಗಾಗಲೇ ಎರಡರಿಂದ ಮೂರು ವರ್ಷಗಳ ಕಾಲ ಅಥವಾ ಅದಕ್ಕೂ ಹೆಚ್ಚಿನ ಕಾಲ ಸಮಯವನ್ನು ತೆಗೆದುಕೊಂಡಿರುವ ಈ ಸಿನಿಮಾವನ್ನು ನೋಡಲು ಕೇವಲ ತೆಲುಗು ಪ್ರೇಕ್ಷಕರು ಮಾತ್ರವಲ್ಲದೆ ಎಲ್ಲಾ ಭಾಷೆಯ ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ.

ರಾಜಮೌಳಿ ಅವರ ನಿರ್ದೇಶನದ ಸಿನಿಮಾ ಅಂದ್ರೆ ಸುಮ್ನೆನಾ ಖಂಡಿತವಾಗಿ ಅದಕ್ಕೊಂದು ನಿಜವಾದ ಎನ್ನುವುದು ಪಂಚಭಾಷಾ ಮಾದರಿಯಲ್ಲಿ ಉದ್ಭವಾಗಿರುತ್ತದೆ. ರಾಜಮೌಳಿಯವರು ಬೇರೆ ನಿರ್ದೇಶಕರ ಹಾಗೆಯೇ ಯಾವುದೇ ವಿಚಾರಗಳಲ್ಲಿ ಕೂಡ ರಾಜಿ ಮಾಡಿಕೊಳ್ಳುವ ನಿರ್ದೇಶಕರಲ್ಲ. ನನಗೆ ಬೇಕಾಗುವಂತಹ ಫಲಿತಾಂಶ ಸಿಗುತ್ತದೆ ಎಂದರೆ 1 ಲಕ್ಷ ಖರ್ಚು ಮಾಡುವ ಕಡೆಗೆ ಒಂದು ಕೋಟಿ ರೂಪಾಯಿ ಖರ್ಚು ಮಾಡುವುದಕ್ಕೂ ಕೂಡ ಹಿಂದೆ-ಮುಂದೆ ನೋಡುವವರಲ್ಲ. ಅಷ್ಟರಮಟ್ಟಿಗೆ ಡೆಡಿಕೇಟೆಡ್ ನಿರ್ದೇಶಕ ಎಂದರೆ ತಪ್ಪಾಗಲಾರದು.
ಅದಕ್ಕಾಗಿ ಅವರು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಬಜೆಟ್ ಎನ್ನುವುದು ಏನಿಲ್ಲವೆಂದರೂ 500ಕೋಟಿ ಆದರೂ ಆಗಿಯೇ ಆಗುತ್ತದೆ. ಅದಕ್ಕಾಗಿ ಅವರನ್ನು ಮಿಸ್ಟರ್ ಪರ್ಫೆಕ್ಟ್ ಡೈರೆಕ್ಟರ್ ಎಂಬುದಾಗಿ ಕರೆಯುತ್ತಾರೆ. ಅವರ ಸಿನಿಮಾದಲ್ಲಿ ನಟಿಸುವ ಸ್ಟಾರ್ ನಟರು ಕೂಡ ಅಷ್ಟೇ ಅವರ ಸಿನಿಮಾವನ್ನು ಒಪ್ಪಿಕೊಂಡ ಮೇಲೆ ಎರಡರಿಂದ ಮೂರು ವರ್ಷಗಳ ಕಾಲ ಬೇರೆ ಯಾವುದೇ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳುವ ಅಥವಾ ಚಿತ್ರೀಕರಣದಲ್ಲಿ ಭಾಗಿಯಾಗುವ ಪ್ರಮೇಯವೇ ಬರುವುದಿಲ್ಲ. ಅದಕ್ಕಾಗಿ ಅವರು ಸಂಭಾವನೆಯನ್ನು ಕೂಡ ಹೆಚ್ಚಾಗಿ ನೀಡಲು ಸಿದ್ಧರಿರುತ್ತಾರೆ.
ಇನ್ನು ಆರ್ ಆರ್ ಆರ್ ಚಿತ್ರದ ವಿಚಾರಕ್ಕೆ ಬರುವುದಾದರೆ ಈ ಚಿತ್ರದಲ್ಲಿ ಕೂಡ ಸ್ಟಾರ್ ನಟರ ಹಿಂಡೇ ಇದೆ. ಈ ಚಿತ್ರವು ಕೂಡ 500 ಕೋಟಿ ಆಸುಪಾಸು ಬಜೆಟಿನಲ್ಲಿ ಮೂಡಿಬಂದಿದೆ. ನಿರ್ಮಾಪಕರು ರಾಜಮೌಳಿ ಅವರ ಚಿತ್ರದಲ್ಲಿ ನಾಯಕ ನಟನನ್ನು ನೋಡಿ ಅಲ್ಲ ಬದಲಾಗಿ ರಾಜಮೌಳಿ ಅವರನ್ನು ನೋಡಿ ಬಜೆಟ್ ಹಾಕುತ್ತಾರೆ. ಇನ್ನು ಈಗಾಗಲೇ ಆರ್ ಆರ್ ಆರ್ ಚಿತ್ರದ ಟೀಸರ್ ಹಾಗೂ ಟ್ರೈಲರ್ ಗಳು ಬಿಡುಗಡೆಯಾಗಿದ್ದು ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಇವುಗಳು ಪ್ರೇಕ್ಷಕರಲ್ಲಿ ಈಗಾಗಲೆ ಚಿತ್ರದ ಕುರಿತಂತೆ ಕುತೂಹಲವನ್ನು ಹೆಚ್ಚಿಸಿವೆ. ಭಾರತದಾದ್ಯಂತ ಆರ್ ಆರ್ ಆರ್ ಚಿತ್ರತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ರಾಮಚರಣ್ ಅಜಯ್ ದೇವ್ಗನ್ ಆಲಿಯಾ ಭಟ್ ಶ್ರೇಯ ಶರಣ್ ಹೀಗೆ ಹತ್ತು ಹಲವಾರು ಜನರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿತ್ತು. ಇನ್ನು ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕರ್ನಾಟಕದ ಪ್ರೇಕ್ಷಕರಿಗೆ ದೊಡ್ಡ ಆಶ್ಚರ್ಯವೊಂದು ಎದುರಾಗಿದೆ.

ಹೌದು ಸಿನಿಮಾವನ್ನು ಅಡ್ವಾನ್ಸಾಗಿ ಬುಕ್ ಮಾಡಲು ಹೊರಟ ಕನ್ನಡಿಗರಿಗೆ ಕರ್ನಾಟಕದಲ್ಲಿ ಈ ಸಿನಿಮಾದ ಟಿಕೆಟ್ಗೆ ಇರುವ ಬೆಲೆ ನೋಡಿ ಬೆವರು ಇಳಿಯಲು ಆರಂಭವಾಗಿದೆ. ಬರಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಟಿಕೆಟ್ ಬೆಲೆ 400ರಿಂದ 500 ರೂಪಾಯಿ ಇದೆ. ಇನ್ನು ಮಾಲ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಏನಿಲ್ಲವೆಂದರೂ 800ರಿಂದ ಸಾವಿರ ರೂಪಾಯಿ ಖಂಡಿತವಾಗಿ ಇದ್ದೇ ಇರುತ್ತದೆ. ಇದನ್ನು ಕನ್ನಡಿಗರು ವಿರೋಧಿಸಿದ್ದಾರೆ.
ಯಾಕೆಂದರೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಟಿಕೆಟ್ ಬೆಲೆ ನೂರರಿಂದ ಇನ್ನೂರು ರೂಪಾಯಿ ಅಷ್ಟೇ ಇರುವುದು. ಕರ್ನಾಟಕದಲ್ಲಿ ಮಾತ್ರ ಚಿತ್ರತಂಡ ಹಗಲು ದ’ರೋಡೆ ಮಾಡುತ್ತಿದೆ ಎಂಬುದಾಗಿ ಆರೋಪಿಸಿದ್ದಾರೆ. ಈ ದುಡ್ಡಿನಲ್ಲಿ ಒಂದು ಕುಟುಂಬ ಹೊಟ್ಟೆತುಂಬ ಊಟ ಮಾಡಬಹುದು ಎಂಬುದಾಗಿದೆ ಲೇವಡಿಮಾಡಿದ್ದಾರೆ. ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸರಕಾರಕ್ಕೆ ದೂರು ನೀಡಿದೆ.
ದೊಡ್ಡ ಬಜೆಟ್ ನಲ್ಲಿ ಮೂಡಿಬಂದಿದೆ ಎಂಬುದಾಗಿ ಈ ರೀತಿಯಾಗಿ ಟಿಕೆಟ್ ದರವನ್ನು ಹೆಚ್ಚಿಸುವುದು ಎಷ್ಟರಮಟ್ಟಿಗೆ ಸರಿ ಅಲ್ಲವೇ. ಇನ್ನು ಅಪ್ಪು ಅಭಿಮಾನಿಗಳು ಕೂಡ ಆರ್ ಆರ್ ಆರ್ ಚಿತ್ರದ ನೆಪ ಹೇಳಿಕೊಂಡು ಜೇಮ್ಸ್ ಚಿತ್ರದ ಚಿತ್ರಮಂದಿರಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂಬುದಾಗಿ ಎಚ್ಚರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಒಂದಂತೂ ಸತ್ಯ ಟಿಕೆಟ್ ಬೆಲೆಯನ್ನು ಇಟ್ಟರೆ ಕರ್ನಾಟಕದಲ್ಲಂತೂ ಚಿತ್ರ ತಂಡ ಗೆಲುವು ಸಾಧಿಸುವುದು ಕನಸಿನ ಮಾತು.