RRR ಸಿನೆಮಾಗೆ ಇದುವರೆಗೂ ಒಂದು ರೂಪಾಯಿ ಪಡೆಯದ ರಾಜಮೌಳಿ, ಆದರೆ ಅಸಲಿ ಲೆಕ್ಕಾಚಾರ ಏನು ಗೊತ್ತೇ??

964

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಬಾಹುಬಲಿ ಎಂದರೆ ರಾಜಮೌಳಿ ರಾಜಮೌಳಿ ಎಂದರೆ ಬಾಹುಬಲಿ ಹೆಸರು ನೆನಪಾಗುವುದು ಸಹಜ. ಯಾಕಂದ್ರೆ ಈ ಪ್ಯಾನ್ ಇಂಡಿಯಾ ಸಿನಿಮಾ ರಾಜಮೌಳಿ ಇಂದಲೇ ಫೇಮಸ್ ಆಗಿದ್ದು, ಅಥವಾ ರಾಜಮೌಳಿ ಇನ್ನಷ್ಟು ಮುನ್ನಲೆಗೆ ಬಂದಿದ್ದು ಈ ಸಿನಿಮಾದಿಂದಲೇ ಎಂದು ತೀರ್ಮಾನಿಸುವುದು ಕಷ್ಟ. ಆದರೆ ರಾಜಮೌಳಿಯವರು ಏನು ಅಂತ ಮಾತ್ರ ಎಲ್ಲರಿಗೂ ಗೊತ್ತಾಗಿದೆ. ಜಕ್ಕಣ್ಣ ರಾಜಮೌಳಿ ಸಿನಿಮಾ ತೆರೆಕಾಣಲು ನಾಲ್ಕು ವರ್ಷ ತೆಗೆದುಕೊಂಡಿದ್ದಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜಮೌಳಿ ನಿರ್ದೇಶಕರಷ್ಟೇ ಅಲ್ಲ ಒಂದು ಸಂಪೂರ್ಣ ಪ್ಯಾಕೇಜ್. ಇವರು ಸಿನಿಮಾ ಗೆಲುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಯಾಕಂದ್ರೆ ಸಿನಿಮಾವನ್ನು ಹೇಗೆ ಮಾರ್ಕೆಟ್ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೆ ‘ಬಾಹುಬಲಿ’ ಪ್ಯಾನ್ ಇಂಡಿಯಾ ಚಿತ್ರವಾಯಿತು.

ಅಂದಹಾಗೆ, ‘ಆರ್ ಆರ್ ಆರ್’ ಸಿನಿಮಾ ಲೆಕ್ಕಾಚಾರದ ಬಗ್ಗೆ ಸಿನಿಮಾ ಮತ್ತು ಮಾಧ್ಯಮ ವಲಯದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. ಚಿತ್ರ ನಿರ್ಮಾಣಕ್ಕೆ 330 ಕೋಟಿ ಖರ್ಚು ಮಾಡಲಾಗಿದೆ. ಚಿತ್ರ ನಿರ್ಮಾಣಕ್ಕೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಒಟ್ಟು 400 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಈ ಚಿತ್ರದ ನಟರು ಮತ್ತು ತಂತ್ರಜ್ಞರ ಸಂಭಾವನೆ 125 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಇದರಲ್ಲಿ ರಾಜಮೌಳಿ ಸಂಭಾವನೆ ಸೇರಿಲ್ಲ. ಪ್ರಚಾರಕ್ಕಾಗಿ ಇದುವರೆಗೆ ಅಂದಾಜು 50 ಕೋಟಿ ರೂ. ಸೇರಿ ಒಟ್ಟು 575 ಕೋಟಿ ರೂ.

ಹಾಗೂ ತೆಲುಗು ಆವೃತ್ತಿಯ ಹಕ್ಕುಗಳು ಸುಮಾರು 300 ಕೋಟಿ ರೂ.ಗೆ ಮಾರಾಟವಾಗುತ್ತಿದೆ. 225 ಕೋಟಿ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳಿಗೂ ಥಿಯೇಟರೇತರ ಹಕ್ಕುಗಳು, ಒವರ್ಸಿಸಿ ಡೀಲ್ 70 ಕೋಟಿ, ತಮಿಳು ಹಾಗೂ ಮಲಯಾಳಂನಲ್ಲಿ 40 ಕೋಟಿ. ಇವೆಲ್ಲ ಸೇರಿ ಒಟ್ಟು 635 ಕೋಟಿ ರೂ. ವ್ಯಯಿಸಲಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ತೆಲುಗು ರಾಜ್ಯಗಳಲ್ಲಿ ವಿತರಕರು ಸ್ವಲ್ಪ ರಿಯಾಯಿತಿ ಕೇಳುತ್ತಿದ್ದಾರೆ. ಎಂದು ಹೇಳಲಾಗುತ್ತಿದೆ. ಸುಮಾರು 575 ಕೋಟಿ ಕಲೆಕ್ಷನ್ ಮಾಡದ ಹೊರತು ಸಿನಿಮಾ ಬ್ರೇಕ್ ಮುರಿಯಲು ಸಾಧ್ಯವಿಲ್ಲ. ಇನ್ನು ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ದಾನಯ್ಯ ಎಷ್ಟು ಪಡೆಯುತ್ತಾರೆ? ಮಾಹಿತಿಯಿಲ್ಲ. ಹಿಂದಿ ಆವೃತ್ತಿಯ ಮೂಲಕ ಬರುವ ಮೊತ್ತವನ್ನು ಹಂಚಲಾಗುತ್ತದೆ. ಈ ಲೆಕ್ಕಾಚಾರಗಳು ನಿಜವೇ.? ಅದೇನೇ ಇರಲಿ, ಸಿನಿಮಾ ರಿಲೀಸ್ ಆದ ಮೇಲೆ ಬಹುತೇಕ ಎಲ್ಲ ಲೆಕ್ಕಾಚಾರಗಳು ಹೊರಬೀಳುತ್ತವೆ.