ಪುಟ್ಟಕ್ಕನ್ನ ಮಕ್ಕಳು ಧಾರವಾಹಿ ಸಕ್ಸಸ್ ಆದ ಬೆನ್ನಲ್ಲೇ ಮನಸೆಲ್ಲ ನೀನೆ ಎಂದ ಕಂಠಿ, ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ??

390

ನಮಸ್ಕಾರ ಸ್ನೇಹಿತರೇ ಜೀ ಕನ್ನಡದ ಟಾಪ್ ರೇಟೆಡ್ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಮುಂಚೂಣಿಯಲ್ಲಿರುವ ಧಾರಾವಾಹಿ. ಇದರಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಬಹಳನೇ ಇಂಟರೆಸ್ಟಿಂಗ್ ಆಗಿವೆ. ಅದರಲ್ಲೂ ಕಂಠಿ ಪಾತ್ರ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ಧನುಷ್ ಕಿರುತೆರೆಯಲ್ಲಿ ಪ್ರಥಮ ಬಾರಿಗೆ ಅಭಿನಯಿಸುತ್ತಿದ್ದಾರೆ ಅಂತ ಅನ್ನಿಸೋದೇ ಇಲ್ಲ. ಇತ್ತೀಚಿಗಿನ ಎಪಿಸೋಡ್ ಗಳಲ್ಲಂತೂ ಕಂಠಿ ಹವಾ ಜೋರಾಗಿದೆ.

ಕಳ್ಳನನ್ನು ಹಾಗೂ ಪೊಲೀಸ್ ನನ್ನು ಕರೆತರಲು ಕಂಠಿ ಪಟ್ಟ ಕಷ್ಟ ಎಲ್ಲರ ಮನ ಮುಟ್ಟಿದೆ. ಇಂತಿಪ್ಪ ನಟ ಧನುಷ್ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದೊಂದು ಹೊಸ ಕಾನ್ಸೆಪ್ಟ್ ನ ಆಲ್ಬಂ ಸಾಂಗ್. ನಟ ಧನುಷ್ ಕಂಠಿ ಆಗಿ ಕಿರುತೆರೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಶಾರ್ಟ್ ಮೂವಿಗಳಲ್ಲಿ ಹಾಗೂ ಆಲ್ಬಮ್ ಸಾಂಗ್ ನಟಿಸಿದ್ದರು. ಇದೀಗ ಧಾರವಾಹಿಯ ಜೊತೆ ಜೊತೆಯಲ್ಲಿ ಆಲ್ಬಮ್ ಸಾಂಗ್ ನಲ್ಲಿ ನಟಿಸಿದ್ದಾರೆ ಧನುಷ್.

ನಟ ಧನುಷ್ ಈ ಮೊದಲು ನನ್ನ ನಗು ಎನ್ನುವ ಆಲ್ಬಮ್ ಸಾಂಗ್ ನಲ್ಲಿ ನಟಿಸಿದ್ದರು. ಇದೀಗ ಮನಸೆಲ್ಲ ನೀನೇ ಎಂಬ ಆಲ್ಬಮ್ ಸಾಂಗ್ ನಲ್ಲಿ ನಟಿಸಿದ್ದು ಅದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಧನುಷ್ ಅವರನ್ನ ಈ ಲುಕ್ನಲ್ಲಿ ಜನರು ಕೂಡ ಇಷ್ಟಪಟ್ಟಿದ್ದಾರೆ. ಹೊಸ ಕಾನ್ಸೆಪ್ಟ್ ಹೊಂದಿರುವ ಮನಸೆಲ್ಲ ನೀನೆ ಆಲ್ಬಮ್ ಸಾಂಗ್, À2 ಮ್ಯೂಸಿಕ್ ನಿರ್ಮಾಣದಲ್ಲಿ ಮೂಡಿಬರಲಿದೆ. ಈ ಮ್ಯೂಸಿಕ್ ಆಲ್ಬಂ ನ ಫಸ್ಟ್ ಲುಕ್ ನಲ್ಲಿ ಸಕ್ಕತ್ ರೊಮ್ಯಾಂಟಿಕ್ ಹೀರೋ ತರ ಕಾಣಿಸುತ್ತಾರೆ. ಹಾಗಾಗಿ ಯುವತಿಯರಿಗೆ ಈ ಆಲ್ಬಂ ಸಾಂಗ್ ಮೂಲಕ ನಟ ಧನುಷ್ ಮತ್ತಷ್ಟು ಹತ್ತಿರವಾಗುವುದರಲ್ಲಿ ನೋ ಡೌಟ್.