ನಾಯಕ ನಟನ ಅಕ್ಕನ ಪಾತ್ರ ಭಾಗ್ಯಲಕ್ಷ್ಮಿ ಪಾತ್ರಕ್ಕೆ ಗುಡ್ ಬೈ ಹೇಳಿದ ಸಹನಾ, ಕನ್ಯಾಕುಮಾರಿ ತಂಡ ಬಿಟ್ಟಿದ್ಯಾಕೆ ಗೊತ್ತಾ? ಹೇಳಿದ್ದೇನು ಗೊತ್ತೇ??

1,804

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಎಲ್ಲಾ ಧಾರಾವಾಹಿಗಳು ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿವೆ. ಈ ಸಾಲಿನಲ್ಲಿ ಮೊದಲು ನಿಲ್ಲೋದು ಕಲರ್ಸ್ ಕನ್ನಡದ “ಕನ್ಯಾಕುಮಾರಿ”! ಆರಂಭದಿಂದಲೂ ಜನರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯಲ್ಲಿ ನಾಯಕ ನಾಯಕಿ ಪಾತ್ರಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ ಎಲ್ಲಾ ಪಾತ್ರಗಳಿಗೂ ಅಷ್ಟೇ ಮಹತ್ವ ನೀಡುತ್ತಿರುವುದು ವಿಶೇಷ. ಇದಕ್ಕೆ ಸಾಕ್ಷಿ, ಈ ಧಾರಾವಾಹಿಯ ನಾಯಕ ನಟ ಚರಣ್ ಅವರ ಅಕ್ಕನ ಪಾತ್ರವನ್ನು ನಿಭಾಯಿಸುತ್ತಿದ್ದ ಸಹನಾ ಅಣ್ಣಪ್ಪ.

ಇವರು ಭಾಗ್ಯಲಕ್ಷ್ಮಿ ಪಾತ್ರದಲ್ಲಿ ಒಬ್ಬ ಹಳ್ಳಿಯ ಹುಡುಗಿಯಾಗಿ ಅತ್ಯಂತ ನೈಜ ಅಭಿನಯವನ್ನು ಕೊಟ್ಟಿದ್ದರು. ಆದರೆ ಇದೀಗ ಬೇಸರದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ತಾನು ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಮುಂದುವರೆಯುವುದಿಲ್ಲ ಎಂದು ಭಾವುಕರಾಗಿ ಇನ್ಸ್ಟಾ ದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಈ ರೀತಿಯಾಗಿ ಬರೆದುಕೊಂಡಿದ್ದಾರೆ.

“ಭಾಗ್ಯ ಲಕ್ಷ್ಮಿ ಪಾತ್ರಕ್ಕೆ ಪರದೆ ಎಳೆಯುವ ಸಮಯ ಬಂದಿದೆ. ನಿಮ್ಮಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ನಾನು ಮುಂಬರುವ ದಿನಗಳಲ್ಲಿ ಈ ಶೋನಲ್ಲಿ ಇರುವುದಿಲ್ಲ. ಕಾರಣ ಏನೆಂದು ನನ್ನ ತಂಡಕ್ಕೆ ಮತ್ತು ನಿರ್ಮಾಣ ಸಂಸ್ಥೆಗೆ ತಿಳಿಸಿರುವೆ. ನನ್ನ ಪಾತ್ರವನ್ನು ಅದ್ಭುತವಾಗಿ ಬರೆದಿರುವ ರಘು ಚರಣ್ ಅವರಿಗೆ ಧನ್ಯವಾದಗಳು, ನಾನು ಪಾತ್ರಕ್ಕೆ ನ್ಯಾಯ ಕೊಟ್ಟಿಲ್ಲ ಅಂದ್ರೆ ಕ್ಷಮಿಸಿ. ಜೋಸೆಫ್‌ ನಿಮ್ಮ ಮೇಲೆ ನನಗೆ ಅಪಾರವಾದ ಗೌರವವಿದೆ.

ನಾನು ಜೋಗಿ ಹಟ್ಟಿ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೀನಿ. ಪ್ರದೀಪ್‌ ತಿಪಟೂರು ನಿಮ್ಮಿಂದ ನಾನು ಅನೇಕ ವಿಚಾರಗಳನ್ನು ಕಲಿತಿರುವೆ, ನಿಮ್ಮ ಸಂಸ್ಥೆಯಿಂದ ಅನೇಕರಿಗೆ ವಿದ್ಯೆ ಹಂಚುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಯಮುನಾ ಶ್ರೀನಿಧಿ ಪ್ರಪಂಚದ ಹಾಟ್‌ ಅಮ್ಮ ನನಗೆ ಸಿಕ್ಕಿದ್ದರು. ಚಿತ್ರೀಕರಣದ ವೇಳೆ ಲೇಸ್ ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತೀನಿ.

ನಿಮ್ಮ ಕೆಲಸವನ್ನು ಹೀಗೆ ಮುಂದುವರೆಸಿ ಸಮಾಜಕ್ಕೆ ಒಳ್ಳೆಯದಾಗಲಿ. ಹರ್ಷ ಅರ್ಜುನ್‌ ನಮ್ಮ ಸುತ್ತಲಿರುವ ಅತಿ ಹೆಚ್ಚು ಪಾಸಿಟಿವ್ ವ್ಯಕ್ತಿ ಅಂದ್ರೆ ನೀವೇ. ನನ್ನ ಸಹೋದರಿ ಐಶುಗೆ ಕಿರಿಕಿರಿ ಕೊಡುವುದು ಮಿಸ್ ಮಾಡ್ತೀನಿ. ನನ್ನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ಸಾನ್ವಿ ನಿನಗೆ ಒಳ್ಳೆ ಪ್ರತಿಭೆ ಇದೆ ಮಗಳೆ. ಈ ಅಮ್ಮನಿಗೆ ಹೆಮ್ಮೆ ಆಗುವಂತೆ ಗುರುತಿಸಿಕೋ. ಪಾತ್ರ ಸೃಷ್ಟಿಸುವಾಗ ನನ್ನನ್ನು ಮೊದಲು ನೆನಪಿಸಿಕೊಂಡ ಪ್ರೀಥಮ್ ಸರ್‌ಗೆ ಧನ್ಯವಾದಗಳು. ಮುಂಬರುವ ಹೊಸ ಕಲಾವಿದರಿಗೆ ಇದೇ ರೀತಿ ಪ್ರೀತಿ ಹಂಚಿ’ ಎಂದು ಸಹಾನ ಅಣ್ಣಪ್ಪ ಬರೆದುಕೊಂಡಿದ್ದಾರೆ. ಇನ್ನು ಭಾಗ್ಯಲಕ್ಷ್ಮಿಯಾಗಿ ಸಹನಾ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಎನ್ನುವುದು ಮುಂದಿನ ಎಪಿಸೋಡ್ ಗಳಲ್ಲಿ ಗೊತ್ತಾಗಲಿದೆ.