ಕೊನೆಗೂ ಸಿಕ್ತು ವಿಡಿಯೋ, ನಟಿ ತೇಜಸ್ವಿನಿ ಪ್ರಕಾಶ್ ರವರ ಮದುವೆ ಹೇಗಿತ್ತು ಗೊತ್ತೇ?? ತಾಳಿ ಕಟ್ಟುವ ವಿಡಿಯೋ ಸಮೇತ ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

308

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಸೆಲೆಬ್ರಿಟಿಗಳು ಮದುವೆಯಾಗೋದು ಹೆಚ್ಚಾಗಿದೆ. ಅಭಿಮಾನಿಗಳು ಕೂಡಾ ತಮ್ಮ ನೆಚ್ಚಿನ ನಟ ನಟಿಯರು ಮದುವೆಯಾಗುತ್ತಿದ್ದಾರೆ ಎನ್ನುವುದನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ತೆಗೆದುಕೊಂಡರೆ ಚಂದನ್ ಗೌಡ ಕವಿತಾ ಗೌಡ ಪ್ರಣಿತ ಸುಭಾಷ್ ಹೀಗೆ ಹತ್ತು ಹಲವಾರು ಜನರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಅವರ ಸಾಲಿಗೆ ಇನ್ನೊಬ್ಬ ಕನ್ನಡ ಚಿತ್ರರಂಗದ ಹಾಗೂ ಕಿರುತೆರೆ ನಟಿಯಾಗಿರುವ ತೇಜಸ್ವಿನಿ ಪ್ರಕಾಶ್ ರವರು ಸೇರಿದ್ದಾರೆ.

ಹೌದು ಇದೇ ಮಾರ್ಚ್ 20ರಂದು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ನಟಿ ತೇಜಸ್ವಿನಿ ಪ್ರಕಾಶ್. 2008 ರಲ್ಲಿ ಬಿಡುಗಡೆಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಜ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದಾದ ನಂತರ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ತೇಜಸ್ವಿನಿ ಪ್ರಕಾಶ್ ರವರು ನಟಿಸಿರುವ ಪ್ರಮುಖ ಸಿನಿಮಾಗಳೆಂದರೆ ಮಾತಾಡ್ ಮಾತಾಡ್ ಮಲ್ಲಿಗೆ ಪ್ರೀತಿ ಏಕೆ ಭೂಮಿ ಮೇಲಿದೆ ಅರಮನೆ ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ರಾಬರ್ಟ್ ಕೂಡ ಹೌದು. ಇನ್ನು ಇವರ ಮದುವೆಗೆ ಹಲವಾರು ಕಿರುತೆರೆ ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಬಂದು ಜೋಡಿಗೆ ಹಾರೈಸಿದ್ದಾರೆ.

ಇನ್ನು ತೇಜಸ್ವಿನಿ ಪ್ರಕಾಶ್ ರವರು ಮದುವೆಯಾಗಿರುವುದು ತಮ್ಮ ಬಹುಕಾಲದ ಗೆಳೆಯ ಫಲಿ ವರ್ಮಾ ನದೀಮ್‌ಪಳ್ಳಿ ರವರನ್ನು. ತೇಜಸ್ವಿನಿ ಪ್ರಕಾಶ್ ಅವರ ಮದುವೆಯ ವಿಹಂಗಮ ನೋಟ ವಿಡಿಯೋದಲ್ಲಿ ಸರಿಯಾಗಿದ್ದು ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರೂ ಕೂಡ ಅದರಲ್ಲೂ ವಿಶೇಷವಾಗಿ ತೇಜಸ್ವಿನಿ ಪ್ರಕಾಶ್ ಅವರ ಅಭಿಮಾನಿಗಳು ಸಂತೋಷವಾಗಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಕಾಮೆಂಟ್ ಬಾಕ್ಸ್ನಲ್ಲಿ ನವ ವಧು ವರರಿಗೆ ಶುಭಾಶಯಗಳನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯಬೇಡಿ.