ಆರ್ ಆರ್ ಆರ್ ವೇದಿಕೆ ಮೇಲೆ ಶಿವಣ್ಣ ರಾಜಮೌಳಿಗೆ ಹೇಳಿದ್ದೇನು ಗೊತ್ತಾ?? ಹೊಸದೊಂದು ಮನವಿ ಮುಂದಿಟ್ಟ ಶಿವಣ್ಣ, ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ??

62

ನಮಸ್ಕಾರ ಸ್ನೇಹಿತರೇ ಜೇಮ್ಸ್ ಚಿತ್ರ ಬಿಡುಗಡೆಯಾಗಿ ಇನ್ನು ಒಂದು ವಾರ ಕೂಡ ಆಗಿಲ್ಲ ಅದಾಗಲೇ ಇನ್ನೊಂದು ಚಿತ್ರ ದೇಶ ವಿದೇಶಗಳಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ಹೌದು ನಾವು ಮಾತನಾಡುತ್ತಿರುವುದು ಆರ್ ಆರ್ ಆರ್ ಎನ್ನುವ ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆಯ ಚಿತ್ರದ ಕುರಿತಂತೆ ಸವಿವರವಾಗಿ ಹೇಳಲು ಹೊರಟಿದ್ದೇವೆ.

ಅಂದಾಜು 350ರಿಂದ 500 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿಬಂದಿರುವ ಆರ್ ಆರ್ ಆರ್ ಚಿತ್ರ ಇದೇ ಮಾರ್ಚ್ 25ರಂದು ಪಂಚ ಭಾಷೆಗಳಲ್ಲಿ ದೇಶವಿದೇಶಗಳಲ್ಲಿ ಅದ್ದೂರಿಯಾಗಿ ಅಬ್ಬರಿಸಲು ಸಜ್ಜಾಗಿ ನಿಂತಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಎಂದರೆ ಯಾವ ಭಾಷೆಯ ಪ್ರೇಕ್ಷಕನು ಕೂಡ ಕಣ್ಣು ಮುಚ್ಚಿಕೊಂಡು ಚಿತ್ರಮಂದಿರಗಳಿಗೆ ಹೋಗಿ ಚಿತ್ರವನ್ನು ವೀಕ್ಷಿಸಿ ಕೊಂಡು ಬರುತ್ತಾನೆ. ರಾಜಮೌಳಿಯವರ ನಿರ್ದೇಶನಕ್ಕೆ ಇರುವಂತಹ ಮೋಡಿಯೇ ಅಂತದ್ದು. ಇನ್ನು ಅವರ ನಮ್ಮ ಕರ್ನಾಟಕದ ಮೂಲದವರು ಎನ್ನುವುದು ನಮಗೂ ಕೂಡ ಹೆಮ್ಮೆಯ ವಿಚಾರ.

ಯಾವಾಗ ಅವರು ಬಾಹುಬಲಿ ಎನ್ನುವ ಭಾರತದ ಹೆಮ್ಮೆಯ ಮನಮೋಹಕ ಚಿತ್ರವನ್ನು ನಿರ್ದೇಶಿಸಿದರೋ ಅಂದಿನಿಂದ ಅವರ ಸಿನಿಮಾಗಳಿಗೆ ಸ್ಟಾರ್ ಹೀರೋ ಬೇಕೆನ್ನುವ ಯಾವುದೇ ಬೇಡಿಕೆ ಇಲ್ಲ. ಯಾಕೆಂದರೆ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಅದೇ ದೊಡ್ಡ ಪ್ರಚಾರ. ಇನ್ನು ಕಲಾವಿದರ ಆಯ್ಕೆಯಲ್ಲಿ ಆಗಲಿ ಅಥವಾ ಸಿನಿಮಾದ ಮೇಕಿಂಗ್ ನಲ್ಲಾಗಲಿ ರಾಜಮೌಳಿ ಅವರು ಎಲ್ಲೂ ಕೂಡ ಕಾಂಪ್ರಮೈಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅದಕ್ಕಾಗಿ ಅವರ ಸಿನಿಮಾಗಳು ಪರದೆ ಮೇಲೆ ಶ್ರೀಮಂತವಾಗಿ ಮೂಡಿಬರುತ್ತದೆ. ಯಾವೊಬ್ಬ ವ್ಯಕ್ತಿಯೂ ಕೂಡ ಅವರ ನಿರ್ದೇಶನದ ಸಿನಿಮಾಗಳಲ್ಲಿ ತಪ್ಪುಗಳನ್ನು ಹುಡುಕಿ ಅದನ್ನು ಸಾಬೀತುಪಡಿಸುವುದು ಕಷ್ಟ ಸಾಧ್ಯವಾಗಿರುತ್ತದೆ.

ಸದ್ಯಕ್ಕೆ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ರವರನ್ನು ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಎನ್ನುವ ಸ್ವಾತಂತ್ರ್ಯ ಹೋರಾಟಗಾರರ ರೂಪಿನಲ್ಲಿ ಪ್ರೇಕ್ಷಕರ ಮುಂದೆ ಆರ್ ಆರ್ ಆರ್ ಸಿನಿಮಾದ ಮೂಲಕ ತೋರಿಸಲು ಇದೇ ಮಾರ್ಚ್ 25ರಂದು ಸಜ್ಜಾಗಿದ್ದಾರೆ. ಚಿತ್ರತಂಡ ಈಗಾಗಲೇ ದೇಶದಾದ್ಯಂತ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇನ್ನು ಕರ್ನಾಟಕದಲ್ಲಿ ಕೂಡ ಇತ್ತೀಚಿಗಷ್ಟೆ ಚಿಕ್ಕಬಳ್ಳಾಪುರದಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮವನ್ನು ನೋಡಲು ಚಿಕ್ಕಬಳ್ಳಾಪುರದಲ್ಲಿ ಸೇರಿದ್ದರು.

ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿಗಳಾಗಿ ಇರುವ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾಗಿರುವ ಸುಧಾಕರ್ ಮತ್ತು ಕನ್ನಡ ಚಿತ್ರರಂಗದಲ್ಲಿ ಲೀಡರ್ ಆಗಿರುವ ಕರುನಾಡ ಚಕ್ರವರ್ತಿ ಶಿವಣ್ಣನವರು ಕೂಡ ಬಂದಿದ್ದರು. ರಾಜಮೌಳಿ ಅವರ ಸಿನಿಮಾಗಳ ದೊಡ್ಡ ಅಭಿಮಾನಿ ಆಗಿರುವುದನ್ನು ಕೂಡ ಈ ವೇದಿಕೆ ಮೇಲೆ ಶಿವಣ್ಣನವರು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಿವಣ್ಣ ರಾಜಮೌಳಿ ಅವರಲ್ಲಿ ಒಂದು ವಿನಂತಿಯನ್ನು ಕೂಡ ಮಾಡಿಕೊಂಡಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವಂತೆ ಪರಭಾಷೆ ಚಿತ್ರಗಳು ಕನ್ನಡ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ಕೆಲಸವೇನೋ ಮಾಡುತ್ತಿವೆ. ಆದರೆ ಕನ್ನಡದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿಲ್ಲ. ಇದಕ್ಕೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಪುಷ್ಪ ಹಾಗೂ ರಾಧೇಶ್ಯಾಮ್ ಚಿತ್ರಗಳು ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು. ಇದಕ್ಕಾಗಿಯೇ ವೇದಿಕೆಯ ಮೇಲೆ ಶಿವಣ್ಣ ರಾಜಮೌಳಿ ಅವರ ಬಳಿ ಕರ್ನಾಟಕದಲ್ಲಿ ಆದಷ್ಟು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿ ಎಂಬುದಾಗಿ ನಿವೇದನೆಯನ್ನು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಪ್ಪು ಅವರನ್ನು ನೆನೆದುಕೊಂಡು ಕೂಡ ಶಿವಣ್ಣ ಗದ್ಗದಿತರಾದರು.

ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗಿರುವ ಇನ್ನು 5 ದಿನಗಳಿಗಿಂತ ಕಡಿಮೆ ಸಮಯವಿದೆ ಈ ಚಿತ್ರದ ಕುರಿತಂತೆ ನಿಮ್ಮ ನಿರೀಕ್ಷೆಗಳು ಏನು ಹಾಗೂ ಈ ಚಿತ್ರವನ್ನು ನೋಡಲು ನೀವು ಚಿತ್ರಮಂದಿರಗಳಿಗೆ ಹೋಗುತ್ತಿದ್ದೀರಾ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.