ಸಮಂತಾ ತೊಟ್ಟ ಈ ಹಸಿರು ಬಣ್ಣದ ಗೌನ್ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಒಂದು ಫೋಟೋಗೆ ಇಷ್ಟೊಂದು ಖರ್ಚು ಮಾಡೋದ?? ಕೊನೆಗೂ ಸಿಕ್ತು ಮಾಹಿತಿ.

332

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಮಂತ ಅವರು ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಕೂಡ ಅವರು ನಟ ನಾಗಚೈತನ್ಯ ರವರ ಜೊತೆಗಿನ ವೈವಾಹಿಕ ಸಂಬಂಧವನ್ನು ಮುರಿದು ಹೊರಬಂದ ನಂತರವೇ ದೊಡ್ಡಮಟ್ಟದಲ್ಲಿ ಜನಪ್ರಿಯರಾಗಿ ಸುದ್ದಿಯಾಗಿದ್ದು ಅಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ರವರು ಸಿನಿಮಾರಂಗದಲ್ಲಿ ಕೂಡ ಸಾಕಷ್ಟು ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರ ಮುಂದಿನ ಸಿನಿಮಾಗಳ ಆಗಿರುವ ಯಶೋಧ ಹಾಗೂ ಶಾಕುಂತಲ ಸಾಕಷ್ಟು ಸುದ್ದಿಯಲ್ಲಿವೆ.

ಮುಂದಿನ ದಿನಗಳಲ್ಲಿ ಹಿಂದಿಯಲ್ಲಿ ಮತ್ತೊಂದು ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ನಟಿ ಸಮಂತಾ ರವರ ಹವಾ ಜೋರಾಗಿದೆ. ಆಗಾಗ ವೈವಿಧ್ಯಮಯ ಬಟ್ಟೆಗಳನ್ನು ಹಾಕಿಕೊಂಡು ಗ್ಲಾಮರಸ್ ಆಗಿ ಫೋಟೋಗೆ ಪೋಸ್ ನೀಡುತ್ತಾ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ. ಅಭಿಮಾನಿಗಳು ಕೂಡ ಅವರ ಫೋಟೋ ಪೋಸ್ಟ್ ಆಗುವುದನ್ನೇ ಕಾಯುತ್ತಿರುತ್ತಾರೆ. ಇತ್ತೀಚಿಗಷ್ಟೇ ನಟಿ ಸಮಂತಾ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಧರಿಸಿದ್ದ ಹಸಿರು ಬಣ್ಣದ ಗ್ಲಾಮರಸ್ ಗೌನ್ ನಲ್ಲಿ ತೆಗೆಸಿಕೊಂಡು ಅಂತಹ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದು,

ಈಗಾಗಲೇ 20 ಲಕ್ಷಕ್ಕೂ ಅಧಿಕ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈಗ ಇದು ಸುದ್ದಿಯಾಗುತ್ತಿರುವುದು ಇದರ ಬೆಲೆಯಿಂದಾಗಿ. ಸಮಂತ ರವರ ವೈಯಕ್ತಿಕ ಫ್ಯಾಶನ್ ಡಿಸೈನರ್ ಆಗಿರುವ ಪ್ರೀತಮ್ ರವರ ಕೈಚಳಕದಲ್ಲಿ ಮೂಡಿಬಂದಿದೆ ಈ ಹಸಿರು ಗೌನ್. ಈ ಬಿಕಿನಿ ಕಟ್ ಬಾಟಲ್ ಗ್ರೀನ್ ಗೌನ್ ನಲ್ಲಿ ಸಮಂತಾ ರವರು ಸಾಕಷ್ಟು ಸುಂದರ ಹಾಗೂ ಸ್ಟೈಲಿಶ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆಲೆಯು ಕೂಡ ಈಗಾಗಲೇ ದುಬಾರಿ ಅನ್ನುವುದನ್ನು ನೀವು ಅಂದಾಜು ಹಾಕಿರಬಹುದು. ನೀವು ಕರೆಕ್ಟಾಗಿ ಗೆಸ್ ಮಾಡಿದ್ದೀರಾ ಹಸಿರು ಗೌನ್ ನ ಬೆಲೆ ಬರೋಬ್ಬರಿ 1.80 ಲಕ್ಷ ರೂಪಾಯಿ. ಇದನ್ನು ಕೇಳಿದವರಿಗೆ ತಲೆತಿರುಗಿ ಬೀಳದಿರಲಿ ಎಂದು ನೀರು ಕೊಡಬೇಕಾಗಿರುವುದಂತೂ ಸತ್ಯ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.