ನೋವಿನಲ್ಲಿ ಇದ್ದರೂ ಅದ್ದು ಮೀರುತ್ತಿರುವ ಮಾಧ್ಯಮಗಳು, ಮೊದಲ ಬಾರಿಗೆ ಮಾಧ್ಯಮಗಳಿಗೆ ತಕ್ಕ ಉತ್ತರ ನೀಡಿದ ಅಶ್ವಿನಿ ಪುನೀತ್, ಹೇಳಿದ್ದೇನು ಗೊತ್ತೇ??

263

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ವಾಗಿರುವ ಚಿತ್ರ ಮೊನ್ನೆ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆಯಾಗಿ ಈಗಾಗಲೇ ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಬಾಚುತ್ತಿದೆ. ಅಭಿಮಾನಿಗಳೊಂದಿಗೆ ಶಿವಣ್ಣ ಗೀತಕ್ಕ ದಂಪತಿಗಳು ಸೇರಿದಂತೆ ರಾಘಣ್ಣ ದಂಪತಿಗಳು ಹಾಗೂ ಮಕ್ಕಳು ಕೂಡ ಸಿನಿಮಾವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿದ್ದಾರೆ.

ಇದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲದೆ ಚಿತ್ರರಂಗದ ಪುನೀತ್ ರಾಜಕುಮಾರ್ ಅವರ ಗೆಳೆಯ ರಾಗಿರುವ ದರ್ಶನ್ ಸುದೀಪ್ ಗಣೇಶ್ ಯಶ್ ಹೀಗೆ ಹಲವಾರು ಸ್ಟಾರ್ ನಟರಿಗೆ ಕೂಡ ಭಾವನಾತ್ಮಕ ಚಿತ್ರವಾಗಿದೆ. ಅವರೆಲ್ಲರೂ ಕೂಡ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿದ ತಮ್ಮ ಗೆಳೆಯನನ್ನು ಭಾವುಕರಾಗಿ ನೆನಸಿ ಕೊಂಡಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ಮಕ್ಕಳಾಗಿರುವ ವಂದಿತ ಹಾಗೂ ದೃತಿ ಕೂಡ ತಮ್ಮ ತಂದೆಯ ಕೊನೆಯ ಸಿನಿಮಾವನ್ನು ದೊಡ್ಡ ಪರದೆ ಮೇಲೆ ವೀಕ್ಷಿಸಿದ್ದಾರೆ.

ಇನ್ನು 20ವರ್ಷಗಳ ಕಾಲ ಪುನೀತ್ ರಾಜಕುಮಾರ್ ಅವರೊಂದಿಗೆ ಸಂಸಾರ ನಡೆಸಿರುವ ಅವರ ಧರ್ಮಪತ್ನಿ ಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮೊದಲ ದಿನವೇ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುತ್ತಾರೆ ಎನ್ನುವುದಾಗಿ ಭಾವಿಸಲಾಗಿತ್ತು. ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಜೇಮ್ಸ ಚಿತ್ರವನ್ನು ವೀಕ್ಷಿಸದೆ ಅಪ್ಪು ಅವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಬಂದು ಪೂಜೆ ಸಲ್ಲಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಯಾಕೆ ಜೇಮ್ಸ್ ಚಿತ್ರವನ್ನು ನೋಡಿಲ್ಲ ಎಂಬುದಾಗಿ ಅಭಿಮಾನಿಗಳು ಸೇರಿದಂತೆ ಮಾಧ್ಯಮದವರಿಗೂ ಕೂಡ ದೊಡ್ಡ ಪ್ರಶ್ನೆಯಾಗಿತ್ತು. ಇದಕ್ಕಾಗಿಯೇ ಸಂದರ್ಶನಕ್ಕೆ ಬಂದಿದ್ದ ಸಂದರ್ಭದಲ್ಲಿ ಮಾಧ್ಯಮದವರು ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಯಾಕೆ ಸಿನಿಮಾವನ್ನು ನೋಡಿಲ್ಲ ಎಂಬುದಾಗಿ ಪ್ರಶ್ನೆ ಹಾಕಿದ್ದಾರೆ.

ಇದಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಸರಿಯಾಗಿ ಉತ್ತರ ನೀಡಿದ್ದಾರೆ. ಸರ್ ಪದೇ ಪದೇ ಇದೆ ಕುರಿತಂತೆ ನನ್ನ ಬಳಿ ಪ್ರಶ್ನೆಯನ್ನು ಕೇಳಬೇಡಿ. ಜೇಮ್ಸ್ ಚಿತ್ರವನ್ನು ನೋಡುವಷ್ಟು ಶಕ್ತಿ ನನ್ನ ಬಳಿ ಇಲ್ಲ. ನೀವು ಅವರ ಅಭಿಮಾನಿಯಾಗಿ ಈ ಪ್ರಶ್ನೆಯನ್ನು ಕೇಳಬಹುದು ಆದರೆ ನಾನು ಅವರ ಧರ್ಮಪತ್ನಿ. ಅವರ ಪತ್ನಿಯಾಗಿ ಅವರ ಕೊನೆಯ ಸಿನಿಮಾವನ್ನು ನೋಡುವ ಶಕ್ತಿ ನನ್ನ ಬಳಿ ಇಲ್ಲ ಇದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಬೇಡಿ ಎಂಬುದಾಗಿ ಹೇಳಿಕೊಂಡಿದ್ದಾರೆ.

ಕೇವಲ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಮಾತ್ರವಲ್ಲದೆ ಇದೇ ತರಹದ ಮನಸ್ಸಿಗೆ ಬೇಸರ ತರಿಸುವಂತಹ ಹಲವಾರು ಪ್ರಶ್ನೆಗಳನ್ನು ಮಾಧ್ಯಮದವರು ಶಿವಣ್ಣ ಸೇರಿದಂತೆ ರಾಘಣ್ಣನವರ ಬಳಿಯು ಕೂಡ ಪದೇಪದೇ ಕೇಳುತ್ತಿದ್ದಾರೆ. ನಿಜಕ್ಕೂ ಕೂಡ ಮಾಧ್ಯಮದವರು ಇದರ ಕುರಿತಂತೆ ಪ್ರಜ್ಞಾವಂತರಾಗಿ ಅರಿತುಕೊಳ್ಳಬೇಕು. ಪದೇ ಪದೇ ಇದೇ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ಆಗಿ ಅವರ ಮನಸ್ಸಿಗೆ ಎಷ್ಟು ಬೇಸರ ಆಗಬೇಡ ನೀವೇ ಯೋಚಿಸಿ.

ಇನ್ನು ಜೇಮ್ಸ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ ಮೊದಲವಾರದಲ್ಲಿ 110 ಕೋಟಿ ರೂಪಾಯಿ ಗಳಿಸಿರುವ ಜಯಂತ್ ಚಿತ್ರ ಅತಿಶೀಘ್ರದಲ್ಲಿ 150 ಕೋಟಿ ಕಲೆಕ್ಷನ್ ದಾಟುವ ಯೋಜನೆಯಲ್ಲಿದೆ. ಈಗಾಗಲೇ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿಯೂ ಕೂಡ ಜೇಮ್ಸ್ ಚಿತ್ರ ದಾಖಲೆ ಬೆಲೆಗೆ ಮಾರಾಟವಾಗಿದ್ದು ಮುಂದಿನ ತಿಂಗಳು ಅದರಲ್ಲಿ ಕೂಡ ಪ್ರಸಾರ ಆರಂಭವಾಗಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಹೀಗಾಗಿ ಇದಕ್ಕೂ ಮುಂಚೆ ಜೇಮ್ಸ್ ಚಿತ್ರವನ್ನು ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾದ ನಟನೆಯನ್ನು ದೊಡ್ಡ ಪರದೆ ಮೇಲೆ ನೋಡಿ ಕುಟುಂಬದವರೊಂದಿಗೆ ಆನಂದಿಸಿ ಎಂಬುದಾಗಿ ಕೇಳಿಕೊಳ್ಳುತ್ತಿದ್ದೇವೆ. ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.