ಮತ್ತೊಮ್ಮೆ ಜಮೀನನ್ನು ಮಾರಾಟ ಮಾಡಿದ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್; ಕಾರಣ ಕೇಳಿದರೆ ನೀವು ಕೂಡ ನಿಂತು ಸಲ್ಯೂಟ್ ಮಾಡುತ್ತೀರಿ. ಯಾಕೆ ಗೊತ್ತೇ??

222

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಟಿಸಿ ನಂತರ ಅವಕಾಶಗಳಿಲ್ಲದೆ ಸುಮ್ಮನೆ ಮನೆಯಲ್ಲಿ ಕುಳಿತವರು ಎಷ್ಟೋ ಜನ ಇದ್ದಾರೆ. ಆದರೆ ಚಿತ್ರರಂಗದ ಸಹವಾಸವೇ ಬೇಡ ಎಂಬುದಾಗಿ ಚಿತ್ರರಂಗದಿಂದ ದೂರ ಉಳಿದು ಜನರಿಗೆ ಸಹಾಯ ಮಾಡುತ್ತಿರುವಂತಹ ಕಲಾವಿದರನ್ನು ಬೆರಳೆಣಿಕೆಯಷ್ಟು ಮಂದಿ ನೋಡಿರುತ್ತೀರಿ. ಅಂಥವರಲ್ಲಿ ಇಂದು ನಾವು ಹೇಳುತ್ತಿರುವುದು ಕನ್ನಡ ಚಿತ್ರರಂಗ ಸದಾಕಾಲ ನೆನಪಿಟ್ಟುಕೊಳ್ಳುವಂತಹ ಕಲಾವಿದರ ಕುರಿತಂತೆ.

ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿಯವರ ಪುತ್ರನಾಗಿರುವ ವಿನೋದ್ ರಾಜ್ ಅವರ ಕುರಿತಂತೆ. ಒಂದು ಕಾಲದಲ್ಲಿ ಲೀಲಾವತಿ ಅಮ್ಮನವರು ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ನಾಯಕಿಯಾಗಿ ಅವರ ಸಿನಿಮಾಗಳಲ್ಲಿ ಹಾಗೂ ನಂತರದ ದಿನಗಳಲ್ಲಿ ಬಹುಬೇಡಿಕೆಯ ಪೋಷಕ ನಟಿಯಾಗಿ ಕೂಡ ಕಾಣಿಸಿಕೊಂಡವರು. ಇನ್ನು ವಿನೋದ್ ರಾಜ್ ರವರ ವಿಚಾರಕ್ಕೆ ಬಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಮೈಕಲ್ ಜಾಕ್ಸನ್ ಎನ್ನುವುದಾಗಿ ಕನ್ನಡ ಸಿನಿಮಾ ರಸಿಕರಿಂದ ಕರೆಸಿಕೊಂಡವರು. ಆದರೆ ನಂತರದ ದಿನಗಳಲ್ಲಿ ಇವರಿಬ್ಬರೂ ಕೂಡ ಚಿತ್ರರಂಗದಿಂದ ದೂರವಾಗುತ್ತದೆ.

ನಂತರ ನೆಲಮಂಗಲದಲ್ಲಿ ಕೃಷಿ ಜಮೀನನ್ನು ಖರೀದಿಸಿ ಕೃಷಿ ಮಾಡುತ್ತಾ ನೆಮ್ಮದಿಯಿಂದ ಕಾಲ ಕಳೆಯುತ್ತಾರೆ. ಚಿತ್ರರಂಗದಲ್ಲಿರುವ ಹಲವಾರು ಕಿಡಿಗೇಡಿಗಳಿಂದ ಹಲವಾರು ಅಪಮಾನ ಅವಮಾನಗಳನ್ನು ಕೇಳಿಸಿಕೊಂಡರು ಕೂಡ ಅವುಗಳಿಗೆ ಯಾವುದು ಕೂಡ ತಲೆಕೆಡಿಸಿಕೊಳ್ಳದೆ ಇಬ್ಬರು ತಾಯಿ-ಮಗ ಕೃಷಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವಿನೋದ್ ರಾಜ್ ರವರನ್ನು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಲವಾರು ಡ್ಯಾನ್ಸಿಂಗ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರನ್ನಾಗಿ ಕರೆತರಬೇಕು ಎನ್ನುವುದಾಗಿ ಆಗ್ರಹಗಳು ಕೂಡ ಕೇಳಿಬಂದಿದ್ದವು.

ಆದರೆ ವಿನೋದ್ ರಾಜ್ ಇವುಗಳೆಲ್ಲದರಿಂದ ವಿಮುಖರಾಗಿ ತಮ್ಮದೇ ಆದಂತಹ ಜೀವನದಲ್ಲಿ ಮಗ್ನರಾಗಿದ್ದರು. ಇತ್ತೀಚಿಗಷ್ಟೇ ಮಹಾಮಾರಿ ಕಾರಣದಿಂದಾಗಿ ಲಾಕ್ಡೌನ್ ಬಂದಾಗಲೂ ಕೂಡ ತಮ್ಮ ಆಸ್ತಿಯನ್ನು ಮಾರಿ ಅದರಿಂದ ಬಂದಂತಹ ಹಣದಲ್ಲಿ ಲೀಲಾವತಿ ಅಮ್ಮನವರು ಹಾಗೂ ವಿನೋದ್ ರಾಜ್ ಇಬ್ಬರೂ ಕೂಡ ಬಡಜನರಿಗೆ ಔಷಧಿ ಆಹಾರ ಹಾಗೂ ಆರ್ಥಿಕವಾಗಿ ಸಹಾಯವನ್ನು ಮಾಡಿರುವುದನ್ನು ಕೂಡ ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈಗ ಮತ್ತೊಮ್ಮೆ ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರು ಆಸ್ತಿ ಮಾರಾಟ ಮಾಡಿರುವುದಕ್ಕೆ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ ಮತ್ತೆ ಆಸ್ತಿ ಮಾರಾಟ ಮಾಡಿರುವುದಕ್ಕೆ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಿಮಗೆ ಗೊತ್ತಿರಬಹುದು 10 ವರ್ಷಗಳ ಹಿಂದೆ ತಾವು ನೆಲೆಸಿರುವ ನೆಲಮಂಗಲ ಪ್ರದೇಶದ ಹಳ್ಳಿಯೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಮ್ಮದೇ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದರು. ಈಗ ಮತ್ತೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಡಲು ತಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ.

ಈ ಕೆಲಸವನ್ನು ನಿಜವಾಗಿ ಹೇಳಬೇಕೆಂದರೆ ಸರ್ಕಾರ ಮಾಡಬೇಕು. ಸರ್ಕಾರವೂ ಕೂಡ ಹಿಂದೆ ಮುಂದೆ ನೋಡುವಂತಹ ಕೆಲಸವನ್ನು ಚೆನ್ನೈನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಾಟ ಮಾಡಿ ಬಂದಿರುವ 50 ಲಕ್ಷ ರೂಪಾಯಿ ಹಣದಲ್ಲಿ ನೆಲಮಂಗಲದಲ್ಲಿ ಮತ್ತೊಮ್ಮೆ ಈಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಡಲು ಪ್ರಾರಂಭಿಸಿದ್ದಾರೆ. ಅಮ್ಮ ಮಗನ ಈ ಕಾರ್ಯಕ್ಕೆ ಕನ್ನಡಿಗರು ವ್ಯಾಪಕವಾಗಿ ಮೆಚ್ಚುಗೆಯನ್ನು ಸಲ್ಲಿಸಿದ್ದಾರೆ. ಶಾಸಕ ಶ್ರೀನಿವಾಸ್ ರವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದಕ್ಕೆ ಬೇಕಾಗುವಂತಹ ಎಲ್ಲ ಸಹಾಯಗಳನ್ನು ನಾವು ನೀಡುವುದಾಗಿ ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಇಬ್ಬರು ಕೂಡ ಮಾಡುತ್ತಿರುವಂತಹ ಇಂಥ ಜನ ಸೇವಾಕಾರ್ಯಕ್ಕೆ ಉತ್ತಮ ಮನ್ನಣ ಸಿಕ್ಕಿ ಇಂತಹ ಕಾರ್ಯಗಳಿಗೆ ಸರ್ಕಾರ ಇನ್ನಷ್ಟು ಅವರಿಗೆ ಪ್ರೋತ್ಸಾಹ ನೀಡುವಂತೆ ಆಗಲಿ ಎಂಬುದೇ ನಮ್ಮೆಲ್ಲರ ಆಸೆ. ಈ ವಿಚಾರದ ಕುರಿತಂತೆ ನಿಮ್ಮೆಲ್ಲರ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.