ನಮ್ಮಲ್ಲಿ ಮಾತ್ರ: ಜೇಮ್ಸ್ ಸಿನಿಮಾ ಕೇವಲ ಒಂದು ಸಿನೆಮಾವಲ್ಲ, ಜೇಮ್ಸ್ ಚಿತ್ರದ ಕಂಪ್ಲೀಟ್ ರಿವ್ಯೂ ಮೊದಲ ಬಾರಿಗೆ ತೋರಿಸ್ತೇವೆ ನೋಡಿ,

683

ನಮಸ್ಕಾರ ಸ್ನೇಹಿತರೇ ಜೇಮ್ಸ್ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆ ಪ್ರದರ್ಶನ ಕಾಣುತ್ತಿರುವ ಹೆಮ್ಮೆಯ ಕನ್ನಡದ ಸಿನಿಮಾ. ಈ ಸಿನಿಮಾವನ್ನು ವಿಮರ್ಶೆ ಮಾಡುವ ಅಗತ್ಯ ಇಲ್ಲವೇ ಇಲ್ಲ. ಯಾಕೆಂದರೆ ಇದು ಕೇವಲ ಸಿನಿಮಾ ಅಲ್ಲ ಅಪ್ಪು ಅವರನ್ನು ಕಳೆದುಕೊಂಡು ದುಃಖ ಪಡುತ್ತಿರುವ ಅದೆಷ್ಟೋ ಜನರಿಗೆ ಅಪ್ಪು ರವರನ್ನು ಮತ್ತೊಮ್ಮೆ ಎರಡುವರೆ ಗಂಟೆಗಳ ಕಾಲ ಜೀವಂತವಾಗಿ ನೋಡುವ ಅದೃಷ್ಟ ಎಂದು ಹೇಳಬಹುದಾಗಿದೆ.

ಜೇಮ್ಸ್ ಚಿತ್ರ ಎನ್ನುವುದು ಅಭಿಮಾನಿಗಳಲ್ಲಿ ಸಂಭ್ರಮದ ಮನೆ ಮಾಡಿರುವಂತಹ ಸಿನಿಮಾ ವಾಗಿದ್ದರೂ ಕೂಡ ಅದನ್ನು ನೋಡುವಾಗ ಅವರನ್ನು ತೆರೆಯ ಮೇಲೆ ನೋಡುವಾಗ ಎಲ್ಲರ ಕಣ್ಣಂಚಿನಲ್ಲಿ ನೀರು ಹರಿಯುತ್ತಿತ್ತು. ಎಲ್ಲದಕ್ಕಿಂತ ಪ್ರಮುಖವಾಗಿ ಜೇಮ್ಸ್ ಚಿತ್ರದ ಚಿತ್ರೀಕರಣ ಸಂಪೂರ್ಣ ವಾಗುವ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿದ್ದರು.

ಆದರೂ ಕೂಡ ಜೇಮ್ಸ್ ಚಿತ್ರತಂಡ ತಮ್ಮ ಪ್ರಯತ್ನಕ್ಕೂ ಮೀರಿ ಪ್ರಯತ್ನವನ್ನು ಪಟ್ಟು ಈ ಚಿತ್ರಕ್ಕೆ ಸಂಪೂರ್ಣ ರೂಪವನ್ನು ನೀಡುವ ಪ್ರಯತ್ನ ಮಾಡಿತ್ತು. ಆ ಪ್ರಯತ್ನಕ್ಕೆ ಖಂಡಿತವಾಗಿ ನಾವು ಸಲಾಂ ಹೇಳಲೇಬೇಕು. ಹೀಗಾಗಿ ಸಿನಿಮಾದಲ್ಲಿ ಇರುವಂತಹ ವಿಎಫ್ಎಕ್ಸ್ ಶಿವಣ್ಣನವರ ವಾಯ್ಸ್ ಕುರಿತಂತೆ ಪರ-ವಿರೋಧಗಳ ಚರ್ಚೆಯನ್ನು ಮಾಡುವುದನ್ನು ನಾವು ನಿಲ್ಲಿಸಬೇಕು.

ಸಿನಿಮಾದಲ್ಲಿ ಕಥೆ ಚೆನ್ನಾಗಿಲ್ಲ ಅದು ಚೆನ್ನಾಗಿಲ್ಲ ಇದು ಚೆನ್ನಾಗಿಲ್ಲ ಎಂದು ಹೇಳುವ ಬದಲು ಅದರಲ್ಲಿ ನಮ್ಮೆಲ್ಲರ ನೆಚ್ಚಿನ ಅವರನ್ನು ಕೊನೆಯ ಬಾರಿಗೆ ನೋಡಲು ಸಾಧ್ಯವಾಗುತ್ತದೆ ಎನ್ನುವ ಅಂಶವನ್ನು ನಾವು ಮನದಲ್ಲಿ ಮೊದಲು ಇಟ್ಟುಕೊಳ್ಳಬೇಕು. ಈ ಸಿನಿಮಾವನ್ನು ವಿಮರ್ಶನ ದೃಷ್ಟಿಯಲ್ಲಿ ನೋಡುವ ಬದಲು ಭಾವನಾತ್ಮಕ ದೃಷ್ಟಿಯಲ್ಲಿ ನೋಡಿದಾಗ ಈ ಸಿನಿಮಾ ಕೋಟ್ಯಾಂತರ ಕನ್ನಡಿಗರ ಪಾಲಿನ ಕನಸಿನ ಸಿನಿಮಾ ಎಂದರೆ ತಪ್ಪಾಗಲಾರದು.

ಇನ್ನು ಜೇಮ್ಸ್ ಸಿನಿಮಾವನ್ನು ನೋಡಿದವರಿಗೆ ಜ್ಞಾಪಕ ಇರಬಹುದು ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರು ಸಂತೋಷ ಎನ್ನುವ ಪಾತ್ರವನ್ನು ನಿರ್ವಹಿಸಿದ್ದಾರೆ. ಆಸ್ಪತ್ರೆ ದೃಶ್ಯದಲ್ಲಿ ಡಾಕ್ಟರ್ ಬಂದು ಸಂತೋಷ್ ರವರಿಗೆ ಪ್ರಜ್ಞೆ ಬಂದಿದೆ ಎಂದು ಹೇಳುವಾಗ ಎಲ್ಲರ ಕಣ್ಣಿನಲ್ಲಿ ನೀರು ಬಂದಿದ್ದು ಗ್ಯಾರಂಟಿ. ಯಾಕೆಂದರೆ ಇದೇ ಮಾತನ್ನು ಒಂದು ಅಪ್ಪು ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಯಾಕೆ ವೈದ್ಯರು ಹೇಳಲಿಲ್ಲ ಎನ್ನುವುದು ಅವರೆಲ್ಲರ ದುಃಖಕ್ಕೆ ಕಾರಣವಾಗಿತ್ತು.

ನಿಜಕ್ಕೂ ಕೂಡ ಜೇಮ್ಸ್ ಚಿತ್ರವನ್ನು ಯಾವುದೇ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹೋಗುವುದಕ್ಕಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರನ್ನು ಕೊನೆಪಕ್ಷ ಕೊನೆಯ ಬಾರಿಗೆ ಅವರ ಮುಖವನ್ನಾದರೂ ನೋಡಲು ಅವಕಾಶ ಸಿಗುತ್ತದೆಂಬ ಕೃತಜ್ಞತಾಭಾವದಿಂದ ನೋಡಲು ಹೋಗುವುದು ಉತ್ತಮ. ಈಗಾಗಲೇ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ಅತ್ಯುತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಒಂದು ವೇಳೆ ನೀವು ಇನ್ನೂ ಕೂಡ ಚಿತ್ರವನ್ನು ವೀಕ್ಷಿಸಿ ಇಲ್ಲವೆಂದರೆ ತಪ್ಪದೆ ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಕುಟುಂಬಸಮೇತರಾಗಿ ವೀಕ್ಷಿಸುವುದನ್ನು ಮಾತ್ರ ಮರೆಯಬೇಡಿ.

ಬದುಕನ್ನು ಹೇಗೆ ಬದುಕಬೇಕೆಂಬುದನ್ನು ನಮ್ಮೆಲ್ಲರಿಗೂ ತಿಳಿಸಿ ಕೊಟ್ಟಂತಹ ಮಹತ್ವ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾವನ್ನು ಮಾಮೂಲಿ ಸಿನಿಮಾದಂತೆ ಅಲ್ಲದೆ ಬದಲಾಗಿ ವಿಶೇಷ ಭಾವನೆಯೊಂದಿಗೆ ನೋಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ತಪ್ಪದೇ ಜೇಮ್ಸ್ ಚಿತ್ರವನ್ನು ವೀಕ್ಷಿಸುವುದನ್ನು ಮಾತ್ರ ಮರೆಯಬೇಡಿ. ಜೇಮ್ಸ್ ಚಿತ್ರವನ್ನು ವೀಕ್ಷಿಸಿದ ನಂತರ ಅದರ ಕುರಿತಂತೆ ವಿಮರ್ಶೆ ಮಾಡುವುದನ್ನು ಬಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಬಳಗದವರಿಗೆ ಸಿನಿಮಾವನ್ನು ನೋಡಲು ಪ್ರಮೋಟ್ ಮಾಡಿ. ಈ ಮೂಲಕ ನಮ್ಮೆಲ್ಲರ ನೆಚ್ಚಿನ ನಟನಿಗೆ ಒಂದೊಳ್ಳೆ ಉಡುಗೊರೆಯನ್ನು ನೀಡೋಣ. ಅವರ ಕೊನೆಯ ಸಿನಿಮಾವನ್ನು ನ ಭೂತೋ ನ ಭವಿಷ್ಯತಿ ಎನ್ನುವಂತೆ ಸಂಭ್ರಮಿಸೋಣ.