ಹೊಸ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡ ನಿಮ್ಮ ನೆಚ್ಚಿನ ನಟಿ ಅನು ಪ್ರಭಾಕರ್, ಹತ್ತಾರು ವರ್ಷಗಳ ಬಳಿಕ ಮೊದಲ ಫೋಟೋಶೂಟ್. ಹೇಗಿದೆ ಗೊತ್ತೇ??

2,535

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ನಟನೆ ಹಾಗೂ ಸೌಂದರ್ಯಕ್ಕೆ ಎರಡಕ್ಕೂ ಕೂಡ ಹೆಸರು ಆಗಿರುವಂತಹ ಹಲವಾರು ನಟಿಯರು ಇದ್ದಾರೆ. ಅವರಲ್ಲಿ ಇಂದು ಒಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಒಂದು ಕಾಲದ ಬಹುಬೇಡಿಕೆಯ ನಟಿಯಾಗಿರುವ ಅನುಪ್ರಭಾಕರ್ ಅವರ ಕುರಿತಂತೆ. ನಟಿ ಅನು ಪ್ರಭಾಕರ್ ರವರು ಸಿನಿಮಾ ಹಿನ್ನೆಲೆ ಉಳ್ಳಂತಹ ಫ್ಯಾಮಿಲಿಯಿಂದ ಬಂದಿದ್ದರು ಕೂಡ ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಸಂಪಾದಿಸಿಕೊಂಡಿದ್ದು.

ಒಂದು ಕಾಲದಲ್ಲಿ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಅನುಪ್ರಭಾಕರ್ ರವರು ನಾಯಕಿಯಾಗಿ ಬೇಕೇಬೇಕು ಎನ್ನುವುದಾಗಿ ನಿರ್ಮಾಪಕ ಹಾಗೂ ನಿರ್ದೇಶಕರು ಅವರ ಕಾಲ್ ಶೀಟ್ ಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಇಂದಿಗೂ ಕೂಡ ನಟಿ ಅನು ಪ್ರಭಾಕರ್ ಅವರು ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೇ ಮಾರ್ಚ್ 17ರಂದು ಬಿಡುಗಡೆಯಾಗಿರುವ ಅಪ್ಪು ಅಭಿನಯದ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರದಲ್ಲಿ ಕೂಡ ಅನುಪ್ರಭಾಕರ್ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಚಿತ್ರರಂಗದ ಖ್ಯಾತ ನಟ ಹಾಗೂ ಮಾಡಲ್ ಆಗಿರುವ ರಘು ಮುಖರ್ಜಿ ರವರನ್ನು ಅನುಪ್ರಭಾಕರ್ ಅವರು ಎರಡನೇ ಮದುವೆಯಾಗಿದ್ದಾರೆ. ಇನ್ನು ಇವರಿಬ್ಬರು ದಂಪತಿಗಳಿಗೆ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ. ಇತ್ತೀಚಿಗಷ್ಟೇ ನಟಿ ಅನು ಪ್ರಭಾಕರ್ ರವರು ಫೋಟೋಶೂಟ್ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಈ ಫೋಟೋಶೂಟ್ ಅನ್ನು ನೋಡಿ ಇಷ್ಟಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಯಸ್ಸು 41 ಆಗಿದ್ದರೂ ಕೂಡ ಅನುಪ್ರಭಾಕರ್ ರವರು 25ರ ಹರೆಯದ ಯುವತಿಯಂತೆ ಸೌಂದರ್ಯವತಿ ಯಾಗಿ ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೀವು ಕೂಡ ಈ ಫೋಟೋ ಶೂಟ್ ಅನ್ನು ಕೆಳಗಡೆ ನೋಡಬಹುದಾಗಿದೆ. ತಪ್ಪದೇ ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ.