ಅಪ್ಪು ನಮ್ಮ ಜೊತೆ ಇಲ್ಲ, ಆದರೆ ಅಪ್ಪು ಸ್ಥಾನವನ್ನು ತುಂಬುವವರು ನೀವೇ ಎಂದಿದ್ದಕ್ಕೆ, ಯುವರಾಜ್ ಹೇಳಿದ್ದೇನು ಗೊತ್ತೇ?? ಕೊನೆಗೂ ಸಿಕ್ಕರೆ ಮತ್ತೊಬ್ಬ ಪುನೀತ್??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ಸ್ವರ್ಗದಲ್ಲಿ ನಿಂತುಕೊಂಡು ಜೇಮ್ಸ್ ಚಿತ್ರವನ್ನು ಜನರು ಆಧರಿಸಿರುವ ರೀತಿಯನ್ನು ನೋಡಿ ಖಂಡಿತವಾಗಿ ಖುಷಿಪಟ್ಟುಕೊಂಡಿರುತ್ತಾರೆ. ರಾಜ್ಯಾದ್ಯಂತ ದೇಶಾದ್ಯಂತ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರದ ಹಬ್ಬದ ಎಗ್ಗಿಲ್ಲದಂತೆ ಮುಂದೆ ಸಾಗಿದೆ. ಕನ್ನಡ ಚಿತ್ರರಂಗದ ನಿಜವಾದ ಮಾರುಕಟ್ಟೆಯನ್ನು ಜಾಗತಿಕವಾಗಿ ಪರಿಚಯಿಸಿದೆ ಜೇಮ್ಸ್ ಚಿತ್ರ ಎಂದರೆ ತಪ್ಪಾಗಲಾರದು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಕನ್ನಡ ಚಿತ್ರರಂಗಕ್ಕೆ ತೋರಿಸಿರುವ ಪಾಠವನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಮೊದಲ ದಿನದಿಂದ ಪ್ರಾರಂಭವಾಗಿ ಇಂದಿನವರೆಗೂ ಕೂಡ ಜೇಮ್ಸ್ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಎಲ್ಲೂ ಕೂಡ ತನ್ನ ವೇಗವನ್ನು ತಗ್ಗಿಸಿಲ್ಲ. ಈಗಾಗಲೇ 100 ಕೋಟಿ ಗಡಿಯನ್ನು ಚಿತ್ರ ಪೂರೈಸಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ವೀಕ್ಷಕ ಹಾಗೂ ಪ್ರತಿಯೊಬ್ಬ ಕನ್ನಡಿಗನು ಕೂಡ ಹೆಮ್ಮೆಪಡಬೇಕಾದ ಅಂತಹ ವಿಚಾರ.

ಮೊದಲಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ತಮ್ಮ ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ಜಾಗತಿಕವಾಗಿ ತೋರಿಸುವ ಉತ್ಸಾಹವನ್ನು ಹೊಂದಿದಂತಹ ವ್ಯಕ್ತಿಯಾಗಿದ್ದರು. ಅದಕ್ಕಾಗಿ ತಮ್ಮ ಪ್ರೊಡಕ್ಷನ್ ಸಂಸ್ಥೆ ಮೂಲಕ ಹಲವಾರು ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಅವರ ಪ್ರತಿಭೆಯನ್ನು ದೊಡ್ಡಮಟ್ಟದಲ್ಲಿ ಪ್ರದರ್ಶಿಸುವ ವೇದಿಕೆಯನ್ನು ಮಾಡಿಕೊಟ್ಟಿದ್ದರು. ಇಂದು ತಮ್ಮ ಕೊನೆಯ ಚಿತ್ರದ ಮೂಲಕ ಪ್ರತಿಯೊಬ್ಬ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಕೂಡ ದೊಡ್ಡಮಟ್ಟದ ಕನಸನ್ನು ಕಾಣುವಂತಹ ಸ್ಪೂರ್ತಿಯನ್ನು ನೀಡಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೇಮ್ಸ್ ಚಿತ್ರದ ಮೊದಲ ದಿನದಿಂದ ಪ್ರಾರಂಭವಾಗಿ ಇಂದಿನವರೆಗೂ ಕೂಡ ಅಭಿಮಾನಿಗಳು ಹಲವಾರು ವಿವಿಧ ಬಗೆಯಲ್ಲಿ ಚಿತ್ರವನ್ನು ಸಂಭ್ರಮಿಸಿ ಆಚರಿಸಿದ್ದಾರೆ. ಇನ್ನು ಮಾರ್ಚ್ 20ರಂದು ಕೂಡ ಮೆರವಣಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ರಾಘವೇಂದ್ರ ರಾಜಕುಮಾರ್ ಅವರ ಎರಡನೇ ಪುತ್ರನಾಗಿರುವ ಯುವರಾಜಕುಮಾರ್ ಕೂಡ ಇದ್ದರು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಂತರ ಅವರ ಸ್ಥಾನವನ್ನು ತುಂಬಬಲ್ಲಂತಹ ಸಮರ್ಥ ವ್ಯಕ್ತಿಯೆಂದರೆ ಅದು ಯುವರಾಜಕುಮಾರ್ ಎನ್ನುವುದಾಗಿ ಅವರ ಅಭಿಮಾನಿಗಳೆಲ್ಲರೂ ಕೂಡ ತಮ್ಮ ಆರಾಧ್ಯ ದೈವ ಅಪ್ಪು ಅವರನ್ನು ಯುವರಾಜ್ ಕುಮಾರ್ ಅವರಲ್ಲಿ ಕಾಣುತ್ತಿದ್ದರು. ಇದಕ್ಕೆ ಪ್ರಮುಖವಾಗಿರುವ ಅಂಶವೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ ಯುವರಾಜಕುಮಾರ್ ಕೂಡ ಡ್ಯಾನ್ಸ್ ಸಾಹಸ ದೃಶ್ಯಗಳಲ್ಲಿ ತಮ್ಮ ಚಿಕ್ಕಪ್ಪನನ್ನು ಹೋಲುತ್ತಾರೆ ಎಂಬುದನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ಮೊದಲ ಚಿತ್ರದ ಟೀಸರ್ ಗಳಲ್ಲಿ ನಾವು ನೋಡಿದ್ದೇವೆ.

ಚಿತ್ರರಂಗದಲ್ಲಿ ಬೆಳಗು ವಂತಹ ಎಲ್ಲಾ ಸಾಮರ್ಥ್ಯವು ಕೂಡ ಯುವರಾಜಕುಮಾರ್ ಅವರಲ್ಲಿ ಅಗಾಧವಾಗಿ ತುಂಬಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಮಾಧ್ಯಮದವರು ಕೂಡ ಯುವ ರಾಜಕುಮಾರ್ ರವರಿಗೆ ಇದನ್ನು ಹೇಳಿದಾಗ ಅವರು ನೀಡಿರುವ ಉತ್ತರ ನಿಜಕ್ಕೂ ಕೂಡ ಅರ್ಥಪೂರ್ಣವಾಗಿತ್ತು. ಹೌದು ಮಾಧ್ಯಮದವರು ಅಪ್ಪು ರವರನ್ನು ನಿಮ್ಮಲ್ಲಿ ಎಲ್ಲರೂ ಕಾಣುತ್ತಿದ್ದಾರೆ ಎಂಬುದಾಗಿ ಹೇಳಿದಾಗ ಯುವರಾಜ್ ಕುಮಾರ್ ರವರು ಚಿಕ್ಕಪ್ಪನನ್ನು ನಾನು ಎಲ್ಲಾ ಅವರ ಅಭಿಮಾನಿಗಳಲ್ಲಿ ಕಾಣುತ್ತಿದ್ದೇನೆ ಎಂಬುದಾಗಿ ಭಾವನಾತ್ಮಕವಾಗಿ ಹೇಳಿದ್ದಾರೆ. ಸದ್ಯಕ್ಕೆ ರಾಜ್ ಕುಟುಂಬದಿಂದ ಚಿತ್ರರಂಗಕ್ಕೆ ಬರಲು ಸಜ್ಜಾಗಿರುವ ಯುವರಾಜಕುಮಾರ್ ಅಪ್ಪು ಅವರ್ ಬಿಟ್ಟು ಹೋಗಿರುವಂತಹ ಸ್ಥಾನವನ್ನು ಹೇಗೆ ತುಂಬುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.