ಅಂದು ಶಕ್ತಿಧಾಮದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದ ವಿಶಾಲ್, ಈಗ ಅಪ್ಪು ಜನ್ಮ ದಿನಕ್ಕೆ ಮಾಡಿದ್ದೇನು ಗೊತ್ತೇ??

610

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಆರು ತಿಂಗಳಿಗೂ ಅಧಿಕ ಕಾಲ ಕಳೆದಿದೆ. ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಅವರ ಅಭಿಮಾನಿಗಳು ಕನ್ನಡಿಗರು ಹಾಗೂ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಎಂದಾಗ ಮೊದಲಿಗೆ ನೆನಪಾಗುವುದು ಅವರು ಮಾಡುತ್ತಿದ್ದ ಒಳ್ಳೆಯ ಸಾಮಾಜಿಕ ಕಾರ್ಯಗಳು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಮರಣಹೊಂದಿದಾಗ ನಿಮಗೆ ನೆನಪಿರಬಹುದು ತಮಿಳು ಚಿತ್ರರಂಗದ ಜಾತ ಚಿತ್ರನಟ ಆಗಿರುವ ವಿಶಾಲ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೋಡಿಕೊಳ್ಳುತ್ತಿರುವ ಅನಾಥ ಮಕ್ಕಳ ಶಿಕ್ಷಣವನ್ನು ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ಭರವಸೆಯನ್ನು ನೀಡಿದ್ದರು. ಈಗ ವಿಶಾಲ್ ರವರು ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಅವರ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ಕೂಡ ಅವರ ಜನ್ಮದಿನವನ್ನು ಅನ್ನದಾನ ಮಾಡುವುದರ ಮೂಲಕ ನೇತ್ರದಾನ ಮಾಡುವುದಕ್ಕೆ ಅರ್ಜಿ ಹಾಕುವುದರ ಮೂಲಕ ಹಾಗೂ ರಕ್ತದಾನ ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಜೀವಂತವಾಗಿ ಇಲ್ಲದಿದ್ದರೂ ಕೂಡ ಅವರ ಆದರ್ಶಗಳನ್ನು ಜೀವಂತವಾಗಿರಿಸುವ ಪ್ರಯತ್ನ ಮಾಡುತ್ತಿರುವ ಅವರ ಅಭಿಮಾನಿಗಳಿಗೆ ನಿಜಕ್ಕೂ ಕೂಡ ನಾವು ಸಲ್ಯೂಟ್ ಹೇಳಲೇಬೇಕು. ನಟನಂತೆ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ಹೊಂದಿದ ಸಂದರ್ಭದಲ್ಲಿ ವಿಶಾಲ್ ರವರು ಶಕ್ತಿ ದಾಮದ ಆಶ್ರಮವನ್ನು ಸಂಪೂರ್ಣವಾಗಿ ನಾನೇ ನೋಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದರು. ಈ ಕುರಿತಂತೆ ಮುಂದೆ ಬಂದಾಗ ಶಿವಣ್ಣನವರ ಸದ್ಯಕ್ಕೆ ಬೇಡ ಆಗುತ್ತಿದ್ದಾಗ ನಾನು ಹೇಳುತ್ತೇನೆ ಎಂಬುದಾಗಿ ಹೇಳಿದರು. ಸದ್ಯಕ್ಕೆ ಮೈಸೂರಿನಲ್ಲಿರುವ ಅನಾಥ ಹೆಣ್ಣುಮಕ್ಕಳ ಶಕ್ತಿದಾಮ ಆಶ್ರಮವನ್ನು ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅವರ ಪತ್ನಿ ಆಗಿರುವ ಗೀತಕ್ಕನವರೆ ನೋಡಿಕೊಳ್ಳುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟಿದ ಹಬ್ಬದ ದಿನದಂದು ನಟ ವಿಶಾಲ್ ರವರು ಮಾಡಿರುವ ಈಗ ಹೊಸ ಕೆಲಸವೊಂದು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಮೊದಲಿನಿಂದಲೂ ಕೂಡ ಪುನೀತ್ ರಾಜಕುಮಾರ್ ಅವರನ್ನು ತನ್ನ ಅಣ್ಣ ಎಂಬಂತೆ ಭಾವಿಸಿ ಅವರೊಂದಿಗೆ ಸಹೋದರತ್ವವನ್ನು ಹೊಂದಿದ್ದರು ನಟ ವಿಶಾಲ್. ಬೆಂಗಳೂರಿಗೆ ಬಂದಾಗ ಆಗಾಗ ಇಬ್ಬರು ಕೂಡ ಒಟ್ಟಿಗೆ ಸಿಗುತ್ತಿದ್ದರು. ಈಗ ಅಗಲಿರುವ ತಮ್ಮ ಸಹೋದರನ ನೆನಪಿಗಾಗಿ ಅವರ ಜನ್ಮದಿನದಂದು ವಿಶಾಲ್ ರವರು ಮಾಡಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು ತಮ್ಮ ಸಹೋದರ ಸಮಾನವಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ವಿಶೇಷ ದಂದು ಮಾರ್ಚ್ 17ರಂದು ಚೆನ್ನೈ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವೃದ್ಧಾಶ್ರಮದಲ್ಲಿ ಇನ್ನೂರಕ್ಕೂ ಅಧಿಕ ವೃದ್ಧರಿಗೆ ಅನ್ನಸಂತರ್ಪಣೆಯನ್ನು ಮಾಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ವಿಶಾಲ್ ರವರು ಮಾಡಿರುವ ಈ ಕೆಲಸ ಈಗಾಗಲೇ ದೊಡ್ಡಮಟ್ಟದಲ್ಲಿ ವೈರಲ್ ಆಗಿದ್ದು ಕನ್ನಡಿಗರು ಕೂಡ ವಿಶಾಲ್ ರವರು ಮಾಡಿರುವ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ವಿಶಾಲ್ ರವರು ಮಾಡಿರುವ ಈ ಕೆಲಸಕ್ಕೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಾಗೂ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ತಪ್ಪದೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಕುಟುಂಬಸಮೇತ ವೀಕ್ಷಿಸಿ.