ಕೊನೆಗೂ ಸಿಕ್ತು ಕಾರಣ, ಅಂದು ಅಪ್ಪು ತಿಥಿಯಂದು ತರ್ಪಣವನ್ನು ಬೇರೆ ಕಡೆ ಮಾಡಿದ್ದು ವಿನೋದ್ ರಾಜ್, ಯಾಕಂತೆ ಗೊತ್ತೇ?? ವಿನೋದ್ ರಾಜ್ ರವರು ಹೇಳಿದ್ದೇನು ಗೊತ್ತೇ??

8,694

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನು ದೈಹಿಕವಾಗಿ ಆಗಲಿ ಈಗಾಗಲೇ ಹಲವಾರು ತಿಂಗಳುಗಳೇ ಕಳೆದುಹೋಗಿವೆ. ನಿಜಕ್ಕೂ ಕೂಡ ಅಂತಹ ಲವಲವಿಕೆಯನ್ನು ಓಡಾಡಿಕೊಂಡಿದ್ದ ಆರೋಗ್ಯವಂತ ಮನುಷ್ಯ ನಮ್ಮನ್ನು ಅಗಲಿ ಕವಾಗಿ ಬಿಟ್ಟು ಬಾರದ ಲೋಕಕ್ಕೆ ಹೋಗುತ್ತಾರೆ ಎಂಬುದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.

ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣದ ನಂತರ ಮೊದಲ ಜನುಮದಿನ ಎನ್ನುವುದು ಅಭಿಮಾನಿಗಳಿಂದ ವಿಶೇಷವಾಗಿ ಆಚರಣೆ ಗೊಂಡಿದೆ. ಅವರ ಸಮಾಧಿಯ ಬಳಿಬಂದು ಅಪ್ಪು ಅವರ ಅಭಿಮಾನಿಗಳು ಸೇರಿದಂತೆ ರಾಜ್ ಕುಟುಂಬದವರು ಅವರ ಸಮಾಧಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಜನ್ಮ ದಿನವನ್ನು ಆಚರಿಸಿ ಕೊಂಡಿರುವುದು ನಿಮಗೆಲ್ಲಾ ಗೊತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಮರಣ ಹೊಂದಿದಾಗ ಲಕ್ಷಾಂತರ ಅಭಿಮಾನಿಗಳು ಕಂಠೀರವ ಸ್ಟೇಡಿಯಂನಲ್ಲಿ ಅವರ ಕೊನೆಯ ದರ್ಶನಕ್ಕಾಗಿ ಬಂದಿರುವುದು ಯಾವ ಮಟ್ಟಿಗೆ ಸುದ್ದಿಯಾಗಿತ್ತು ಎನ್ನುವುದು ನಿಮಗೆ ಗೊತ್ತಿದೆ. ಒಬ್ಬ ವ್ಯಕ್ತಿಯ ಅಂತಿಮದರ್ಶನಕ್ಕೆ ಇಷ್ಟೊಂದು ಲಕ್ಷ ಜನರು ಬರುತ್ತಾರೆ ಎನ್ನುವುದನ್ನು ಇಡೀ ಇತಿಹಾಸ ಎನ್ನುವುದು ಅವತ್ತು ಸಾಕ್ಷಿಯಾಗಿ ನೋಡಿತ್ತು. ಇನ್ನು ಇದೇ ಸಂದರ್ಭದಲ್ಲಿ ಒಂದು ವಿಚಾರವು ನಡೆದಿತ್ತು ಆದರೆ ಅದರ ಕುರಿತಂತೆ ಹೆಚ್ಚು ಸುದ್ದಿಯಾಗಿರಲಿಲ್ಲ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣದ ವಿಚಾರದ ಹಿನ್ನೆಲೆಯಲ್ಲಿ ಇಂದು ನಾವು ಹೇಳಲು ಹೊರಟಿರುವ ವಿಚಾರ ಆ ಸಮಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿರಲಿಲ್ಲ. ಆದರೆ ಇಂದು ಆ ಕುರಿತಂತೆ ದೊಡ್ಡಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಅದಕ್ಕೆ ಸ್ವತಃ ಆ ವಿಚಾರಕ್ಕೆ ಸಂಬಂಧಪಟ್ಟವರೇ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ತಿಥಿಯ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಸಮಾಧಿ ಬಳಿ ಪೂಜೆ ನಿರ್ವಹಿಸುತ್ತಿದ್ದಾರೆ ಈ ಕಡೆ ಶ್ರೀರಂಗಪಟ್ಟಣದ ಸಂಗಮದಲ್ಲಿ ವಿನೋದ್ ರಾಜ್ ತಮ್ಮ ತಾಯಿ ಲೀಲಾವತಿ ಅವರ ಜೊತೆಗೆ ಊರವರಿಗೆ ತರ್ಪಣವನ್ನು ಅರ್ಪಿಸುತ್ತಿದ್ದರು. ಈ ಕುರಿತಂತೆ ಆ ಸಮಯದಲ್ಲಿ ಸುದ್ದಿ ಆಗಿದ್ದರೂ ಕೂಡ ಅಷ್ಟೊಂದು ಚರ್ಚೆಗೆ ಒಳಗಾಗಿರಲಿಲ್ಲ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿನೋದ್ ರಾಜ್ ರವರು ಯಾಕೆ ಅಪ್ಪೂರ್ ಅವರಿಗೆ ಬೇರೆ ಸ್ಥಳದಲ್ಲಿ ತರ್ಪಣ ನೀಡಿದ್ದಾರೆ ಎಂಬುದಾಗಿ ಚರ್ಚೆಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿವೆ. ಅದಕ್ಕೆ ಸ್ವತಹಾ ನಟ ವಿನೋದ್ ರಾಜ್ ಅವರೇ ಉತ್ತರವನ್ನು ನೀಡಿದ್ದಾರೆ.

ಹೌದು ನಟ ವಿನೋದ್ ರಾಜ್ ರವರು ತಮ್ಮ ತಾಯಿಯೊಂದಿಗೆ ಶ್ರೀರಂಗಪಟ್ಟಣದ ಸಂಗಮದಲ್ಲಿ ತರ್ಪಣೆ ಬಿಡಲು ಮುಖ್ಯ ಕಾರಣ ಏನೆಂದರೆ ಮೊದಲಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ವಿನೋದ್ ರಾಜ್ ರವರು ತಮ್ಮ ಸಹೋದರನಂತೆ ಭಾವಿಸಿದ್ದರು. ಅಷ್ಟೊಂದು ಸಹೋದರತ್ವದ ಬಾಂಧವ್ಯವನ್ನು ಇಬ್ಬರು ಕೂಡ ಹೊಂದಿದ್ದರು. ಇದೇ ಕಾರಣಕ್ಕಾಗಿ ಅಪ್ಪು ಅವರ ನಿಧನದ ನಂತರ ಇಬ್ಬರೂ ಈ ಕಾರ್ಯವನ್ನು ಮಾಡಲು ನಿರ್ಧರಿಸಿದ್ದರು.

ಅಪ್ಪು ಅವರ ಮರಣದ ನಂತರ ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮ ಇಬ್ಬರೂ ಕೂಡ ಆ ದೇವರಿಗೆ ಶಪಿಸಿದ್ದನ್ನು ನೀವು ಹಲವಾರು ವಿಡಿಯೋಗಳು ನೋಡಬಹುದಾಗಿದೆ. ಪುನೀತ್ ರಾಜಕುಮಾರ್ ಅವರ ಮರಣ ಎನ್ನುವುದು ಅವರಲ್ಲಿ ಕೂಡ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತಹ ದುಃಖವನ್ನು ಮೂಡಿಸಿತ್ತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.