‘ಅಪ್ಪು’ ಮೊದಲ ಸಿನಿಮಾ ಕಥೆ ಬಂದಿದ್ದು ಅಪ್ಪುಗೆ ಅಲ್ಲ ಮತ್ತೊಬ್ಬ ನಟನಿಗೆ, ಆದರೆ ಅಪ್ಪು ನಿಗೆ ಚಾನ್ಸ್ ಮಾಡಿಕೊಟ್ಟ ಮಹಾನಟ ಯಾರು ಗೊತ್ತೇ??

16,943

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಎಂದೂ ಮರೆಯಲಾಗದ ಮಾಣಿಕ್ಯಗಳಲ್ಲಿ ಒಬ್ಬರಾಗಿದ್ದಾರೆ. ಯಾರೇನೇ ಹೇಳಲಿ ಅವರಂತಹ ಇನ್ನೊಬ್ಬ ಆಲ್-ರೌಂಡರ್ ನಟ ಕನ್ನಡ ಚಿತ್ರರಂಗ ಪಡೆಯುವುದು ಅನುಮಾನವೇ ಸರಿ. ಇದನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದವರು ಕೂಡ ಇದನ್ನೇ ಹೇಳುತ್ತಾರೆ. ಪುನೀತ್ ರಾಜಕುಮಾರ್ ಅವರು ಮಾಡುವಷ್ಟು ಸಾಹಸ ದೃಶ್ಯಗಳನ್ನು ಹಾಗೂ ನೃತ್ಯ ದೃಶ್ಯಗಳನ್ನು ನಮ್ಮಿಂದ ಮಾಡಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಸ್ವತಃ ಜೂನಿಯರ್ ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ರವರೇ ಹೇಳಿಕೊಳ್ಳುತ್ತಾರೆ.

ಇದು ಬಿಡಿ ನಾವು ಈಗ ಮಾತನಾಡಲು ಹೊರಟಿರುವುದು ಅಪ್ಪು ಅವರ ಪಾದಾರ್ಪಣ ಸಿನಿಮಾದ ಕುರಿತಂತೆ. ಅಪ್ಪು ಅವರು ಮೊದಲ ಬಾರಿಗೆ ನಟಿಸಿದ್ದು ಅಪ್ಪು ಸಿನಿಮಾದ ಮೂಲಕ ಅದು ಕೂಡ ನಿರ್ದೇಶಿಸಿದ್ದು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ನಾಗಿರುವ ಪುರಿ ಜಗನ್ನಾಥ್. ಇನ್ನು ಈ ಸಿನಿಮಾ ಅಪ್ಪು ಅವರಿಗಿಂತ ಮುಂಚೆ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರಿಗೆ ಬಂದಿತ್ತು ಎನ್ನುವುದು ಯಾರಿಗೂ ತಿಳಿಯದಂತಹ ವಿಚಾರ. ಹಾಗಿದ್ದರೆ ಅದು ಯಾರು ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಈ ಸಿನಿಮಾ ಮೊದಲು ಬಂದಿದ್ದು ಶಿವಣ್ಣನವರಿಗೆ. ವರದಣ್ಣ ಪಾರ್ವತಮ್ಮ ಹಾಗೂ ಅಣ್ಣಾವ್ರು ಅಪ್ಪು ರವರನ್ನು ಒಳ್ಳೆಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಲಾಂಚ್ ಮಾಡಬೇಕೆಂಬ ಪ್ರಯತ್ನ ಪಡುತ್ತಿದ್ದರು. ಈ ಸಂದರ್ಭದಲ್ಲಿ ಶಿವಣ್ಣ ಯುವರಾಜ ಎನ್ನುವ ಸಿನಿಮಾದ ಮೂಲಕ ದೊಡ್ಡ ಮಟ್ಟದ ಗೆಲುವನ್ನು ಪಡೆದುಕೊಂಡಿದ್ದರು. ಈ ಚಿತ್ರ ಪುರಿ ಜಗನ್ನಾಥ್ ತೆಲುಗಿನಲ್ಲಿ ನಿರ್ದೇಶಿಸಿರುವ ಸಿನಿಮಾದ ರಿಮೇಕ್ ಆಗಿದೆ. ಈ ಸಂದರ್ಭದಲ್ಲೇ ಪುರಿ ಜಗನ್ನಾಥ್ ಶಿವಣ್ಣನವರಿಗೆ ಸಿನಿಮಾ ಮಾಡಲು ಮೂರು ಕಥೆಗಳನ್ನು ಹೇಳಿದ್ದರು. ಅದರಲ್ಲಿ ಒಂದು ಕಥೆ ಅಪ್ಪು ಚಿತ್ರದ ಕಥೆ. ಆಗ ಶಿವಣ್ಣ ಇದು ನನಗೆ ಸರಿಹೊಂದುವುದಿಲ್ಲ ನನ್ನ ತಮ್ಮನಿಗೆ ಸರಿಹೊಂದುತ್ತದೆ ಅವನನ್ನು ಲಾಂಚ್ ಮಾಡಬೇಕು ಎಂಬುದಾಗಿ ಅಂದುಕೊಂಡಿದ್ದೇವೆ ಎಂದು ಹೇಳಿ ಪುರಿಜಗನ್ನಾಥ ರವರನ್ನು ತಮ್ಮ ತಂದೆ ತಾಯಿಯ ಬಳಿ ಕರೆದುಕೊಂಡು ಹೋಗಿ ಕಥೆಯನ್ನು ಕೇಳಿಸುತ್ತಾರೆ. ಆಗ ಪ್ರಾರಂಭವಾಗಿ ಬಿಡುಗಡೆಯಾಗಿದ್ದೆ ಅಪ್ಪು ಚಿತ್ರ. ಈ ಕಥೆಯನ್ನು ಈಗ ಕೇಳಿದರೆ ನಿಜಕ್ಕೂ ಕೂಡ ರೋಮಾಂಚನವಾಗುತ್ತದೆ.