ಕನ್ನಡದ ಕೆಲವು ನಟಿಯರು ಅಪ್ಪು ರವರನ್ನು ಮರೆತಿರುವಾಗ ಜೇಮ್ಸ್ ಚಿತ್ರವನ್ನು ನೋಡಿದ ಸಮಂತಾ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಕನ್ನಡ ಸಿನಿಮಾ ಅಭಿಮಾನಿಗೆ ಮಾರ್ಚ್ 17ರಂದು ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಚಿತ್ರವನ್ನು ನೋಡುವುದೇ ಸೌಭಾಗ್ಯ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಒಬ್ಬರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕಾಲದಲ್ಲಿ ನಾವು ಕೂಡ ಬದುಕಿದ್ದೆವು ಎಂದು ಹೇಳುವುದಕ್ಕೆ ಎಲ್ಲರಿಗೂ ಹೆಮ್ಮೆಯಾಗುತ್ತದೆ.
ಇನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆಯ ಸ್ಟಾರ್ ನಟ ಹಾಗೂ ನಟಿಯರು ಜಯಂತ್ ಚಿತ್ರವನ್ನು ಅವರವರ ಭಾಷೆಗಳಲ್ಲಿ ಮೊದಲ ದಿನವೇ ನೋಡಿ ಭಾವುಕರಾಗಿ ಚಿತ್ರಮಂದಿರಗಳಿಂದ ಹೊರಬಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಇಷ್ಟಪಡುವಂತಹ ಸೆಲೆಬ್ರಿಟಿಗಳು ಇದ್ದರು. ಇನ್ನು ತೆಲುಗು ಚಿತ್ರರಂಗದ ಖ್ಯಾತ ಜನಪ್ರಿಯ ನಟಿಯಾಗಿರುವ ಸಮಂತ ಅವರು ಕೂಡ ಜೇಮ್ಸ್ ಚಿತ್ರವನ್ನು ನೋಡಿದ್ದಾರೆ.

ಇನ್ನು ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೂ ಕೂಡ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸ್ಟಾರ್ ನಟರ ಸ್ನೇಹವಿದೆ. ಉದಾಹರಣೆಗೆ ಜೂನಿಯರ್ ಎನ್ಟಿಆರ್ ರಾಮಚರಣ್ ಅಲ್ಲು ಅರ್ಜುನ್ ಮೆಗಾ ಫ್ಯಾಮಿಲಿ ನಟರಾಜ ಕೂಡ ಮೊದಲಿನಿಂದಲೂ ಸ್ನೇಹವಿದೆ. ಬಾಲಯ್ಯ ಕೂಡ ಬೆಂಗಳೂರಿಗೆ ಬಂದಾಗ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗದೆ ಹೋಗಿದ್ದಿಲ್ಲ. ಇನ್ನು ನಟಿ ಸಮಂತಾ ರವರ ಪರಿಚಯ ಕೂಡ ಮೊದಲಿನಿಂದ ಇದೆ. ಇನ್ನು ನಟಿ ಸಮಂತಾ ರವರು ಕೂಡ ತೆಲುಗು ಭಾಷೆಯಲ್ಲಿ ಜೇಮ್ಸ್ ಚಿತ್ರವನ್ನು ಹೈದರಾಬಾದ್ನಲ್ಲಿ ವೀಕ್ಷಿಸಿ ಮಾಧ್ಯಮದವರ ಎದುರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಅಪ್ಪು ಸರ್ ಅವರನ್ನು ನಾನು ಮೊದಲಿನಿಂದಲೂ ಬಲ್ಲೆ. ಅವರೊಬ್ಬ ಸರಳ ಹಾಗೂ ವಿನಮ್ರ ವ್ಯಕ್ತಿತ್ವವುಳ್ಳ ವ್ಯಕ್ತಿ. ನಿಜಕ್ಕೂ ಕೂಡ ಅವರನ್ನು ನಾನು ಬಲ್ಲೆ ಎನ್ನುವುದಕ್ಕೆ ಹೆಮ್ಮೆಪಡುತ್ತೇನೆ. ಈ ಹಿಂದೆ ಅವರ ಮಿಲನಾ ಚಿತ್ರವನ್ನು ನೋಡಿ ಅವರನ್ನು ಇಷ್ಟಪಟ್ಟಿದ್ದೆ. ಈಗ ಜೇಮ್ಸ್ ಚಿತ್ರದಲ್ಲಿ ಕೂಡ ಅವರ ಆಕ್ಷನ್ ಹಾಗೂ ನಟನೆ ನನಗೆ ತುಂಬಾ ಇಷ್ಟವಾಯಿತು ವಿ ಮಿಸ್ ಯು ಅಪ್ಪು ಸರ್ ಎಂಬುದಾಗಿ ಹೇಳಿದ್ದಾರೆ.
ಕೇವಲ ನಟಿ ಸಮಂತ ಮಾತ್ರವಲ್ಲದೆ ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ ರವರು ಕೂಡ ಚೆನ್ನೈನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ವಾಗಿರುವ ಜೇಮ್ಸ ಚಿತ್ರವನ್ನು ವೀಕ್ಷಿಸಿ ಭಾವುಕರಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್ನು ಕಲೆಕ್ಷನ್ ವಿಚಾರದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಆಗಿರುವ ಕಾರಣಕ್ಕಾಗಿ ಜೀನ್ಸ್ ಚಿತ್ರ ಈಗಾಗಲೇ ಕೆಜಿಎಫ್ ಹಾಗೂ ರಾಬರ್ಟ್ ಸಿನಿಮಾಗಳ ದಾಖಲೆಯನ್ನು ಪುಡಿ ಮಾಡಿದೆ.

ಜೇಮ್ಸ್ ಚಿತ್ರವನ್ನು ನೋಡುವಾಗ ಎಲ್ಲರನ್ನೂ ಕಾಡಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಧ್ವನಿಯನ್ನು ಅವರಣ್ಣ ಆಗಿರುವ ಶಿವಣ್ಣನವರು ಡಬ್ಬಿಂಗ್ ಮಾಡಿದ್ದು ಹಾಗೂ ಕೊನೆಯ ಸಿನಿಮಾದಲ್ಲಿ ಅವರ ಇಬ್ಬರು ಸಹೋದರರಾದ ರಾಘಣ್ಣ ಹಾಗೂ ಶಿವಣ್ಣ ಇಬ್ಬರು ಕೂಡ ಆ ಸಿನಿಮಾದಲ್ಲಿ ನಟಿಸಿದ್ದು. ಈಗಾಗಲೇ ಕಲೆಕ್ಷನ್ ವಿಚಾರದಲ್ಲಿ ನೂರು ಕೋಟಿ ದಾಖಲೆಯನ್ನು ಮೀರಿಸುವ ಚಿತ್ರ ಬಾಕ್ಸಾಫೀಸ್ ನಲ್ಲಿ ದಾಪುಗಾಲಿಟ್ಟಿದೆ. ತಪ್ಪದೆ ನಿಮ್ಮ ಕುಟುಂಬದವರೊಡನೆ ಈ ವಾರಾಂತ್ಯದಲ್ಲಿ ಚಿತ್ರಮಂದಿರಕ್ಕೆ ಹೋಗಿ ಜೇಮ್ಸ್ ಚಿತ್ರವನ್ನು ನೋಡುವುದನ್ನು ಮಾತ್ರ ಮರೆಯಬೇಡಿ.