ಹತ್ತಾರು ವರ್ಷಗಳಿಂದ ನಟನೆ ಮಾಡುತ್ತಿದ್ದರೂ ಜೇಮ್ಸ್ ನಲ್ಲಿ ನಟಿಯಾಗಿರುವ ಪ್ರಿಯಾ ಆನಂದ್ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ.

61,650

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶವಿದೇಶಗಳಲ್ಲಿ ನಮ್ಮ ನೆಚ್ಚಿನ ಹಾಗೂ ಹೆಮ್ಮೆಯ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದ್ದು ಗೆಲುವಿನ ಕೇಕೆಯನ್ನು ಹಾಕುತ್ತಿದೆ. ಇನ್ನು ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡವರು ನಟಿ ಪ್ರಿಯಾ ಆನಂದ್. ಹಿಂದಿ ಮೂಲದವರಾಗಿದ್ದ ರು ಕೂಡ ಪ್ರಿಯ ಆನಂದ್ ರವರು ಕನ್ನಡ ಚಿತ್ರರಂಗದ ಮೂಲಕವೇ ಜನಪ್ರಿಯತೆ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ಕನ್ನಡ ಚಿತ್ರರಂಗದ ಇಂಡಸ್ಟ್ರಿ ಹಿಟ್ ಸಿನಿಮಾ ವಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಚಿತ್ರದ ಮೂಲಕ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇದಾದ ನಂತರ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಆರೆಂಜ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಮಿಸ್ಟರ್ ಪರ್ಫೆಕ್ಟ್ ಪುನೀತ್ ರಾಜಕುಮಾರ್ ರವರ ಜೋಡಿಯಾಗಿ ಜೇಮ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಿಯಾ ಆನಂದ್ ಅವರ ನಟನೆ ಜೇಮ್ಸ್ ಚಿತ್ರದಲ್ಲಿ ಎಲ್ಲಾ ಪ್ರೇಕ್ಷಕರಿಂದಲೂ ಕೂಡ ಮೆಚ್ಚುಗೆಗೆ ಒಳಗಾಗಿದೆ. ಅಪ್ಪು ಅವರ ಜೋಡಿಯಾಗಿ ಪರದೆಯಮೇಲೆ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ನಟಿ ಪ್ರಿಯ ಆನಂದ್ ರವರ ವಯಸ್ಸಿನ ಕುರಿತಂತೆ ಸಾಕಷ್ಟು ಗೊಂದಲಗಳಿವೆ.

ಜೇಮ್ಸ್ ಚಿತ್ರದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಪ್ರಿಯಾ ಆನಂದ್ ರವರ ವಯಸ್ಸಿನ ಕುರಿತಂತೆ ಈಗಾಗಲೇ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ಪ್ರೇಕ್ಷಕರ ಕುತೂಹಲ ಹಾಗೂ ಗೊಂದಲ ಎರಡನೆ ಕೂಡ ನಿವಾರಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಹೌದು ಪ್ರಿಯಾ ಆನಂದ್ ರವರ ವಯಸ್ಸು 35 ಆದರೆ ನೋಡಲು ಮಾತ್ರ 20ರ ಹರೆಯದ ಯುವತಿಯಂತೆ ಕಾಣುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಗೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಈ ಜೋಡಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ನೀವು ಕೂಡ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುವುದನ್ನು ಮಾತ್ರ ಮರೆಯಬೇಡಿ.