ಮೊದಲ ಬಾರಿಗೆ ಯಶ್ ಮುಂದೆ ಹೊಸದೊಂದು ಮನವಿ ಮಾಡಿದ ಅಪ್ಪು ಫ್ಯಾನ್ಸ್, ಕೆಜಿಎಫ್ ತಂಡ ಸೈಲೆಂಟ್ ಆಗಿರಬೇಕು ಎಂದದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ರಾಜ್ಯಾದ್ಯಂತ ಹಾಗೂ ದೇಶ-ವಿದೇಶಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಆರು ತಿಂಗಳುಗಳು ಕಳೆದು ಹೋಗಿದೆ. ಅವರು ಇಲ್ಲ ಎನ್ನುವ ನೋ’ವನ್ನು ಮರೆಸಲು ಜೇಮ್ಸ್ ಚಿತ್ರ ಅಪ್ಪು ರವರ ಜನುಮದಿನದ ವಿಶೇಷವಾಗಿ ಜೇಮ್ಸ್ ಚಿತ್ರವನ್ನು ಬಿಡುಗಡೆ ಮಾಡಿತ್ತು.
ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಬಾಕ್ಸಾಫೀಸ್ ನಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಎರಡು ದಿನದ ಒಳಗೆ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಪವರ್ ಸ್ಟಾರ್ ರವರ ಪವರ್ಫುಲ್ ಪರ್ಫಾರ್ಮೆನ್ಸ್ ಹೊಂದಿರುವ ಜೇಮ್ಸ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಮೊದಲ ದಿನವೇ ಅತ್ಯಂತ ಹೆಚ್ಚು ಜನರು ವೀಕ್ಷಿಸಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಒಳಗಾಗಿದೆ. ಇದು 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ ಎಂಬುದು ಕೂಡ ತಿಳಿದುಬಂದಿದೆ. ಈ ಸಾಧನೆಯನ್ನು ಕನ್ನಡದ ಯಾವುದೇ ಚಿತ್ರವು ಕೂಡ ಇದುವರೆಗೂ ಮಾಡಿಲ್ಲ ಎಂಬುದು ಮತ್ತೊಂದು ವಿಶೇಷವಾದ ವಿಚಾರ.

ಈ ಮಧ್ಯದಲ್ಲಿ ಅಪ್ಪು ಅವರ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ರವರ ಮೇಲೆ ಕೋಪಗೊಂಡಿದ್ದಾರೆ. ಅರೆ ಇದೇನಪ್ಪ ಅಪ್ಪು ಹಾಗೂ ರಾಕಿಂಗ್ ಸ್ಟಾರ್ ಯಶ್ ರವರು ಅಷ್ಟೊಂದು ಒಳ್ಳೆಯ ಸಂಬಂಧವನ್ನು ಹೊಂದಿದ್ದರು ಕೂಡ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ರವರ ಮೇಲೆ ಕೋಪ ಗೊಳ್ಳುತ್ತಿರುವುದು ಯಾಕೆ ಎನ್ನುವುದಾಗಿ ನೀವು ಕೇಳಬಹುದು. ಅದಕ್ಕೂ ಒಂದು ಮುಖ್ಯವಾದ ಕಾರಣವಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ರವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಮರಣಹೊಂದಿದ್ದಾರೆ ಎಷ್ಟೊಂದು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದು ನಿಮಗೆ ಗೊತ್ತಿದೆ.
ಅಭಿಮಾನಿಗಳು ಬೇಸರ ಗೊಂಡಿರುವುದಕ್ಕೂ ಕೂಡ ಕಾರಣವಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2ರ ಮೊದಲ ಹಾಡಾಗಿರುವ ತೂಫಾನ್ ಇದೇ ಮಾರ್ಚ್ 21ರಂದು ಬಿಡುಗಡೆ ಆಗುತ್ತಿದೆ. ಜೇಮ್ಸ್ ಚಿತ್ರವು ಬಿಡುಗಡೆ ಮಾಡಿರುವ ಈ ಹೊತ್ತಿನಲ್ಲಿ ಕೆಜಿಎಫ್ ಚಿತ್ರ ತಂಡ ಹಾಡನ್ನು ಬಿಡುಗಡೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದಾಗಿ ಅಪ್ಪು ಅಭಿಮಾನಿಗಳು ಕೆಜಿಎಫ್ ಚಿತ್ರತಂಡದ ವಿರುದ್ಧ ಹರಿಹಾಯ್ದಿದ್ದಾರೆ.

ಖಂಡಿತವಾಗಿ ಜೇಮ್ಸ್ ಚಿತ್ರ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡುವ ಸಾಧ್ಯತೆಯಿದ್ದು ಈ ನಡುವೆ ಕೆಜಿಎಫ್ ಚಿತ್ರದ ಹಾಡು ಬಿಡುಗಡೆಯಾದರೆ ಎಲ್ಲರ ಗಮನ ಕೂಡ ಕೆಜಿಎಫ್ ಚಿತ್ರದ ಕಡೆಗೆ ಡೈವರ್ಟ್ ಆಗುತ್ತದೆ. ಈ ಕಾರಣದಿಂದಾಗಿ ಅಪ್ಪು ಅಭಿಮಾನಿಗಳು ಕೆಜಿಎಫ್ ಚಿತ್ರತಂಡದ ವಿರುದ್ಧ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ವಿರುದ್ಧ ಮುನಿಸನ್ನು ಹೊಂದಿದ್ದಾರೆ. ಕೆಜಿಎಫ್ ಚಾಪ್ಟರ್ 2 ಕೂಡ ಇದೇ ಏಪ್ರಿಲ್ 14ರಂದು ಬಿಡುಗಡೆಯಾಗಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಕಾರಣದಿಂದಾಗಿಯೇ ಚಿತ್ರತಂಡ ಈಗ ಮೊದಲ ಹಾಡಿನ ಬಿಡುಗಡೆ ಸಿದ್ಧತೆಯಲ್ಲಿದೆ. ಆದರೂ ಕೂಡ ಕೆಜಿಎಫ್ ಚಿತ್ರದ ಪ್ರಮೋಷನ್ ನಿಂದಾಗಿ ಜೇಮ್ಸ್ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದಾಗಿ ಅಪ್ಪು ಅಭಿಮಾನಿಗಳು ಕೆಜಿಎಫ್ ಚಿತ್ರ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.