ಮತ್ತಷ್ಟು ಕುತೂಹಲ ಮೂಡಿಸಿದ ಕಿರುತೆರೆಯ ಗಿಣಿರಾಮ,ಹೊಸ ಪಾತ್ರದ ಮೂಲಕ ಮತ್ತೊಂದು ಟ್ವಿಸ್ಟ್ ಕೊಟ್ಟು ಮಾಡಲು ಹೊರಟಿರುವುದು ಏನು ಗೊತ್ತೇ??

843

ನಮಸ್ಕಾರ ಸ್ನೇಹಿತರೇ, ಸದ್ಯ ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾದ ಕಥೆಗಳನ್ನು ಹೊಂದಿರುವ ಬೇರೆ ಬೇರೆ ರೀತಿಯ ಧಾರವಾಹಿಗಳು ಮೂಡಿ ಬರುತ್ತಿದ್ದು, ಒಂದಕ್ಕಿಂತ ಒಂದು ಫೇಮಸ್ ಆಗುತ್ತಿವೆ. ಅದರಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ಗಿಣಿರಾಮ ಧಾರಾವಾಹಿ ಕೂಡ ತನ್ನದೇ ಆದ ಬಹು ದೊಡ್ಡ ಅಭಿಮಾನಿ ಬಳಗ ವನ್ನು ಹೊಂದಿದೆ.

ಕೇವಲ ಉತ್ತರ ಕರ್ನಾಟಕದ ಮಂದಿ ಮಾತ್ರವಲ್ಲ ಕರ್ನಾಟಕದಾದ್ಯಂತ ಎಲ್ಲರೂ ಗಿಣಿರಾಮ ಧಾರವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಬರುವ ಶಿವರಾಮ್ ಹಾಗೂ ಮಹತಿ ಪಾತ್ರಗಳು ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿವೆ. ಇತ್ತೀಚಿಗೆ ಹಲವು ತಿರುವುಗಳನ್ನು ಕಂಡಂತಹ ಧಾರವಾಹಿಯಲ್ಲಿ, ಈಗ ಅಭಿಮಾನಿಗಳನ್ನು ಥ್ರೀಲ್ ಆಗಿಸುವಂಥ ಹೊಸ ಟ್ವಿಸ್ಟ್ ಒಂದು ಪ್ರಸಾರವಾಗಲಿದೆ. ಅದೇನು ಅಂತೀರಾ ಮುಂದೆ ಓದಿ..

ಹೌದು. ಮಹತಿ, ಶಿವರಾಮನನ್ನು ಮದುವೆ ಆಗುವುದಕ್ಕಿಂತ ಮೊದಲು ಒಬ್ಬ ಹುಡುಗನನ್ನು ಪ್ರೀತಿಸಿರುತ್ತಾಳೆ. ಮಹತಿ ಹಾಗೂ ಶಿವರಾಮ ಈ ಬಗ್ಗೆಯೇ ದೇವಸ್ಥಾನವೊಂದರಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಹೊಸದೊಂದು ಪಾತ್ರದ ಎಂಟ್ರಿಯಾಗಿದೆ. ಅದು ಮತ್ಯಾವುದೂ ಅಲ್ಲ ಮಹತಿಯ ಹಳೆ ಗೆಳೆಯನ ಪಾತ್ರ. ಹೌದು, ಮಹತಿಯ ಮೊದಲ ಬಾಯ್ ಫ್ರೆಂಡ್ ಗೌರವ್ ಬೇರೆಯದೆ ಗೆಟಪ್ ನಲ್ಲಿ ಈ ಧಾರಾವಾಹಿಯಲ್ಲಿ ಎಂಟ್ರಿಕೊಟ್ಟಿದ್ದಾರೆ. ಗೌರವವನ್ನು ನೋಡಿ ಮಹತಿ ದಂಗಾಗಿದ್ದಾಳೆ.

ಮಹತಿಯ ಬಾಯ್ ಫ್ರೆಂಡ್ ಗೌರವ್ ಪಾತ್ರದಲ್ಲಿ ನಟ ರಾಕಿ ಗೌಡ ಕಾಣಿಸಿಕೊಂಡಿದ್ದಾರೆ. ರಾಕಿ ಈಗಾಗಲೇ ಬೇರೆ ಬೇರೆ ಧಾರವಾಹಿಗಳಲ್ಲಿ ನಟಿಸಿದ್ದು ಅನುಭವಿ ನಟ ಎನಿಸಿಕೊಂಡಿದ್ದಾರೆ. ಹಾಗಾಗಿ ಗೌರವ್ ಪಾತ್ರವನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಎನ್ನುವುದು ವೀಕ್ಷಕರ ನಿರೀಕ್ಷೆ. ಇನ್ನು ಮುಂದೆ ಮಹತಿಯ ಜೀವನದಲ್ಲಿ ಆಗಬಹುದಾದ ಬದಲಾವಣೆಗಳನ್ನು ತಿಳಿದುಕೊಳ್ಳಲು ಮುಂದಿನ ಎಪಿಸೋಡ್ ಗಳನ್ನು ತಪ್ಪದೆ ನೋಡಿ.