ಕೊನೆಗೂ ಬಯಲಾಯಿತು ಮುಚ್ಚಿಟ್ಟ ಸತ್ಯ, ಅದ್ದೂರಿ ಸೆಟ್ ನಲ್ಲಿ ನಡೆಯೋದು ಯಾರ ಮದುವೆ ಗೊತ್ತೇ?? ಮುಂದೆ ನಡೆಯೋದು ಏನು ಗೊತ್ತೇ??

15,717

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಿನಿಮಾಗಳಂತೆ ಹೆಚ್ಚು ಬಜೆಟ್ ಹಾಕಿ ಧಾರಾವಾಹಿಗಳನ್ನು ನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈವರೆಗೆ ಪರಭಾಷೆಯಲ್ಲಿ ಮಾತ್ರ ಧಾರವಾಹಿಗಳಲ್ಲಿ ಖರ್ಚು ಮಾಡಲಾಗುತ್ತಿತ್ತು. ಆದರೆ ಇದೀಗ ಕನ್ನಡದ ಧಾರವಾಹಿಗಳು ಕೂಡ ಈ ಸಾಲಿಗೆ ಸೇರಿವೆ. ಅಧಿಕ ಬಜೆಟ್ ನಲ್ಲಿ ಧಾರಾವಾಹಿಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಜ್ವಲಂತ ಸಾಕ್ಷಿ ಎಂದರೆ ಲಕ್ಷಣ ಧಾರವಾಹಿಯಲ್ಲಿ ನಡೆಯುತ್ತಿರುವ ಮದುವೆಯ ಸನ್ನಿವೇಶಗಳು!

ಹೌದು, ಲಕ್ಷಣ ಧಾರವಾಹಿಯ ಸೆಟ್ ಸದ್ಯ ಗೋವಾದಲ್ಲಿ ಚಿತ್ರೀಕರಣ ಮುಗಿಸಿದೆ. ಲಕ್ಷಣ ಧಾರಾವಾಹಿಗೆ ಬಂಡವಾಳವನ್ನು ಹೂಡಿದವರು ಇದೆ ಧಾರಾವಾಹಿಯ ನಾಯಕನಟರಾದ ಜಗನ್ ಅವರು. ವಿಮಾನದಲ್ಲಿ ಮದುವೆ ಸೆಟ್ಟಿಗೆ ಬರುವ ನಾಯಕ ಭೂಪತಿ, ಅಚ್ಚುಕಟ್ಟಾಗಿ ರೆಡಿಯಾದ ನಾಯಕಿ ಶ್ವೇತಾ ಹಾಗೂ ಇವರಿಬ್ಬರ ನಡುವೆ ತನ್ನ ಪ್ರೀತಿಯನ್ನು ಮುಚ್ಚಿಟ್ಟುಕೊಂಡು ನಗುನಗುತ್ತಾ ಎಲ್ಲಾ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿರುವ ನಕ್ಷತ್ರ ಈ ಮದುವೆ ಸನ್ನಿವೇಶದ ಹೈಲೈಟ್ಸ್.

ಭೂಪತಿಯ ತಾಯಿಗೆ ಎಲ್ಲಿ ನಕ್ಷತ್ರ ತನ್ನ ಮಗನ ಮದುವೆಗೆ ಅಡ್ದಿಪಡಿಸುತ್ತಾಳೆ ಎಂಬ ಭಯ, ಚಡಪಡಿಕೆಯ ಹಿನ್ನೆಲೆಯಲ್ಲಿ ಭೂಪತಿಗೆ ನಕ್ಷತ್ರ ಪ್ರೀತಿಸುತ್ತಿರುವ ಹುಡುಗ ತಾನೇ ಎಂಬ ಸತ್ಯದ ಅರಿವಾಗಿದೆ. ಅಷ್ಟೇ ಅಲ್ಲದೆ ತನ್ನ ಮಗಳು ಕಪ್ಪು ಎಂಬ ಕಾರಣಕ್ಕೆ ತಿರಸ್ಕರಿಸಿದ್ದ ಮನೆಯವರ ಎದುರು ನಿಜವಾಗಿ ನಕ್ಷತ್ರ ಯಾರು ಎಂಬುದರ ಅರಿವು ಕೂಡ ಆಗಲಿದೆ. ಒಟ್ಟಾರೆಯಾಗಿ ಲಕ್ಷಣ ಧಾರವಾಹಿಯಲ್ಲಿ ಮುಚ್ಚಿಟ್ಟ ಹಲವಾರು ಸತ್ಯಗಳು ಮದುವೆಯ ಸನ್ನಿವೇಶದಲ್ಲಿ ಬಹಿರಂಗವಾಗುವ ಸಾಧ್ಯತೆಗಳಿವೆ. ಈಗಾಗಲೇ ಮುಂಬರುವ ಎಪಿಸೋಡ್ ಗಳ ಪ್ರೋಮೋಗಳಲ್ಲಿ ಕುತೂಹಲಕಾರಿ ಅಂಶಗಳನ್ನು ತೋರಿಸಲಾಗಿದೆ. ಹಾಗಾಗಿ ಲಕ್ಷಣ ಅಭಿಮಾನಿಗಳು ಸಹ ಕಾತುರದಿಂದ ಮುಂದಿನ ಎಪಿಸೋಡ್ ಗಳಿಗಾಗಿ ಕಾಯುತ್ತಿದ್ದಾರೆ. ಇದೀಗ ಡೆಸ್ಟಿನೇಶನ್ ವೆಡ್ಡಿಂಗ್ ನಲ್ಲಿ ಭೂಪತಿಯ ಜೊತೆ ಯಾರು ವಧುವಾಗಿ ಹಸೆಮಣೆ ಏರುತ್ತಾರೆ ಎನ್ನುವುದು ಕುತೂಹಲಕಾರಿ ವಿಷಯ