ಸುಖ ಸುಮ್ಮನೆ ಗಾಳಿ ಸುದ್ದಿ ಬೇಡವೇ ಬೇಡ, ನಿಜವಾಗಿಯೂ ಅಪ್ಪು ಜೇಮ್ಸ್ ಕಲೆಕ್ಷನ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ??

197

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಈಗಾಗಲೇ ರಾಜ್ಯಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹಿಂದೆಂದೂ ಕಂಡು ಕೇಳರಿಯದಂತಹ ದೊಡ್ಡ ಮಟ್ಟದಲ್ಲಿ ಜೇಮ್ಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ರಾಜ್ಯಾದ್ಯಂತ ಜೇಮ್ಸ ಚಿತ್ರದ ಬೇಡಿಕೆಯನ್ನು ಹೆಚ್ಚಾಗಿದ್ದು ದಾಖಲೆಯ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಕೂಡ ದಾಖಲೆಯ ಮಟ್ಟದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಎನ್ನುವ ಕಾರಣಕ್ಕಾಗಿ ಪ್ರೇಕ್ಷಕರು ಮೊದಲ ದಿನವೇ ಚಿತ್ರಮಂದಿರಗಳಿಗೆ ಮುನ್ನುಗ್ಗಿದ್ದಾರೆ. ಈಗಾಗಲೇ ಸಿನಿಮಾ ಪಂಡಿತರ ಲೆಕ್ಕಾಚಾರದ ಪ್ರಕಾರ ಚಿತ್ರ ಎಷ್ಟು ಗಳಿಸಲಿದೆ ಎಂಬ ಲೆಕ್ಕಾಚಾರವೂ ಕೂಡ ಹೊರಬಿದ್ದಿದೆ. ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಜೇಮ್ಸ್ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೆಯನ್ನು ಮಾಡಲಿದೆ ಎಂಬುದಾಗಿ ಕೂಡಾ ಅವರು ಭವಿಷ್ಯ ನುಡಿದಿದ್ದಾರೆ. ಯಾಕೆಂದರೆ ಅಡ್ವಾನ್ಸ್ ಬುಕಿಂಗ್ ಕೂಡ ಕನ್ನಡದ ಯಾವುದೇ ಚಿತ್ರಕ್ಕೂ ಕೂಡ ಅಷ್ಟರಮಟ್ಟಿಗೆ ಆಗಿರಲಿಲ್ಲ ಎಂಬುದನ್ನು ಸಾಬೀತುಪಡಿಸಿತ್ತು. ರಾಜ್ಯಾದ್ಯಂತ ವಿಶ್ವಾದ್ಯಂತ ಅಪ್ಪು ರವರನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬಿದ್ದಿದ್ದಾರೆ.

ಹಾಗಿದ್ದರೆ ಜೇಮ್ಸ್ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಗೊಂದಲಕ್ಕೆ ಸೂಕ್ತ ಪರಿಹಾರವನ್ನು ನೀಡುತ್ತೇವೆ ಬನ್ನಿ. ಬೆಂಗಳೂರಿನಲ್ಲಿ ನೂರಕ್ಕೂ ಅಧಿಕ ಥಿಯೇಟರ್ಗಳಲ್ಲಿ ದಿನಕ್ಕೆ ಆರು ಶೋನಂತೆ, ಮಾಲ್ಗಳಲ್ಲಿ 416 ಕ್ಕೂ ಅಧಿಕ ಪ್ರದರ್ಶನಗಳಿವೆ. ಮಾಲ್ನಲ್ಲಿ ಕೂಡ ಟಿಕೆಟ್ ಬೆಲೆಗಳಲ್ಲಿ ಹಲವಾರು ವಿಭಿನ್ನ ಪ್ರಕಾರಗಳಿವೆ. ಇನ್ನು ವಿದೇಶದಲ್ಲಿ ಕೂಡ ಜೇಮ್ಸ್ ಚಿತ್ರದ ಬೇಡಿಕೆಯನ್ನು ಇದು ಗಮನಾರ್ಹವಾಗಿ ಹೆಚ್ಚಾಗುತ್ತಲೇ ಇವೆ. ಕರ್ನಾಟಕ ಸೇರಿದಂತೆ ವಿಶ್ವಾದ್ಯಂತ ಜೇಮ್ಸ್ ಚಿತ್ರ ಮೊದಲ ದಿನಕ್ಕೆ 25 ರಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದಾದ ಸಾಧ್ಯತೆ ಇದೆ. ಒಟ್ಟಾರೆ ಈ ವಾರಂತ್ಯಕ್ಕೆ ಅಂದರೆ ಭಾನುವಾರದ ವೇಳೆಗೆ 75 ರಿಂದ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರು ನಮ್ಮ ಮನಸ್ಸಿನಲ್ಲಿ ಸದಾ ಅಮರ.