ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಜೇಮ್ಸ್ ಚಿತ್ರದಲ್ಲಿರುವ ಪ್ಲಸ್ ಹಾಗೂ ಮೈನಸ್ ಪಾಯಿಂಟ್ಸ್ ಗಳು ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಜೇಮ್ಸ್ ಚಿತ್ರ ಎನ್ನುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಕನ್ನಡಿಗರಿಗೆ ಒಂದು ಭಾವನಾತ್ಮಕ ಚಿತ್ರವಾಗಿತ್ತು. ಇದರ ಕುರಿತಂತೆ ವಿಮರ್ಶಣೆ ಮಾಡುವ ಧೈರ್ಯವಾಗಿ ಕೂಡ ಬರೋದಕ್ಕೆ ತುಂಬಾನೇ ಕಷ್ಟ ಇತ್ತು. ಯಾಕೆಂದರೆ ಪ್ರತಿಯೊಂದು ದೃಶ್ಯದಲ್ಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನೋಡುವಾಗ ಭಾವುಕತೆ ಎನ್ನುವುದು ಉಮ್ಮಳಿಸಿ ಬರುತ್ತಿತ್ತು. ಜೇಮ್ಸ್ ಚಿತ್ರ ಅದ್ದೂರಿಯಾಗಿ 4 ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಮೊದಲ ದಿನವೇ ಬಿಡುಗಡೆಯಾಗಿತ್ತು.
ಕನ್ನಡದ ಮಟ್ಟಿಗೆ ಜೇಮ್ಸ್ ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ದೊಡ್ಡಮಟ್ಟದ ದಾಖಲೆಯನ್ನು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಮೊದಲ ದಿನವೇ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಖ್ಯಾತಿಗೆ ಒಳಗಾಗಿದೆ. ಚಿತ್ರದ ವಿಮರ್ಶೆ ಮಾಡಲು ಹೊರಟಿರುವ ನಾವು ಚಿತ್ರದ ಪ್ಲಸ್ ಹಾಗೂ ಮೈನಸ್ ಅಂಶಗಳನ್ನು ನಿಮ್ಮ ಮುಂದೆ ಇಡಲು ಹೊರಟಿದ್ದೇವೆ. ಆದರೂ ಕೂಡ ನಾವು ಜೀವನ ಚಿತ್ರವನ್ನು ಆಧಾರದ ಮೇಲೆ ನೋಡಲು ಹೋಗದೆ ಅವರ ಕೊನೆಯ ಚಿತ್ರ ಎಂಬ ಕಾರಣಕ್ಕಾಗಿ ಎಲ್ಲರೂ ನೋಡಲೇಬೇಕು.

ರಂಗಾಯಣ ರಘು ರವರು ಅವರು ರೇಸ್ ಗೆ ಇಳಿದರೆ ಅದು ರೇಸೇ ಅಲ್ಲ ಒನ್ ಮ್ಯಾನ್ ಶೋ ಎನ್ನುವುದಾಗಿ ಡೈಲಾಗ್ ಹೇಳಿದಾಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಎಂಟ್ರಿ ಆಗುತ್ತದೆ. ಚಿತ್ರದಲ್ಲಿ ಪುನೀತ್ ರಾಜಕುಮಾರ್ ರವರು ಮೊದಲಾರ್ಧದಲ್ಲಿ ಸೆಕ್ಯುರಿಟಿ ಏಜೆನ್ಸಿಯ ಹೆಡ್ ಆಗಿರುತ್ತಾರೆ ಆದರೆ ಅವರು ನಿಜವಾಗಿ ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊದಲಿಗೆ ವೈರಿಗಳಿಗೆ ಸಹಾಯವನ್ನು ಮಾಡುವ ಮೇಜರ್ ಸಂತೋಷ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪುನೀತ್ ರಾಜಕುಮಾರ್ ಅವರು ಕೊನೆಯಲ್ಲಿ ವೈರಿಗಳಿಗೆ ದುಸ್ವಪ್ನವಾಗಿ ಕಾಡುತ್ತಾರೆ.

ಅಷ್ಟಕ್ಕೂ ಮೊದಲ ಭಾಗದಲ್ಲಿ ವೈರಿಗಳಿಗೆ ಎಷ್ಟೊಂದು ಸಹಾಯ ಮಾಡಲು ಕಾರಣವಾದರೂ ಏನು ಎನ್ನುವುದು ನಿಮ್ಮಲ್ಲಿ ಪ್ರಾರಂಭದಿಂದ ಕಾಡುವಂತಹ ಅಂಶವಾಗಿರುತ್ತದೆ. ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೀವು ದೊಡ್ಡ ಪರದೆ ಮೇಲೆ ಖಂಡಿತ ಇಷ್ಟಪಡುತ್ತೀರಿ. ಇದು ಅವರ ಕೊನೆಯ ಸಿನಿಮಾ ವಾಗಿರುವುದರಿಂದ ಆಗಿ ಅವರ ಆಕ್ಷನ್ ಸೀನ್ ಗಳನ್ನು ಖಂಡಿತವಾಗಿ ನೀವು ಮಿಸ್ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಕ್ಷನ್ ಹಾಗೂ ಚೇಸಿಂಗ್ ದೃಶ್ಯಗಳು ಸೊಗಸಾಗಿ ಮೂಡಿಬಂದಿವೆ. ಹಿನ್ನೆಲೆ ಸಂಗೀತ ಕೂಡ ಚರಣ್ ರಾಜ್ ರವರ ಕೈಚಳಕದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಕೆಲವೊಂದು ದೃಶ್ಯಗಳಲ್ಲಿ ಪುನೀತ್ ರಾಜಕುಮಾರ್ ರವರು ಇಲ್ಲದಿದ್ದರೂ ಕೂಡ ಅವರನ್ನು ಕಾಣುವಂತೆ ಮಾಡಿರುವ ನಿರ್ದೇಶಕ ಚೇತನ್ ಕುಮಾರ್ ಅವರ ಪ್ರಯತ್ನಕ್ಕೆ ಸಲಾಂ.
ಸಿನಿಮಾದಲ್ಲಿ ಸ್ನೇಹಿತರಿಗಾಗಿ ಮೇಜರ್ ಸಂತೋಷ್ ಏನು ಬೇಕಾದರೂ ಕೂಡ ಮಾಡುತ್ತಾನೆ ಎನ್ನುವ ಒಂದು ಥೀಮ್ ಹಲವಾರು ವಿಷಯಗಳನ್ನು ಅದರಲ್ಲೂ ಕೂಡ ಕೆಲವನ್ನು ಸಾಮಾಜಿಕ ಸಂದೇಶಗಳನ್ನು ಪ್ರೇಕ್ಷಕರಿಗೆ ಬಿಚ್ಚಿಡುತ್ತದೆ. ಸಿನಿಮಾದಲ್ಲಿ ಶ್ರೀಕಾಂತ್ ಶರತ್ ಕುಮಾರ್ ಆದಿತ್ಯ ಮೆನನ್ ರಂಗಾಯಣ ರಘು ಚಿಕ್ಕಣ್ಣ ಶೈನ್ ಶೆಟ್ಟಿ ತಿಲಕ್ ಪ್ರಿಯಾ ಆನಂದ್ ಹೀಗೆ ಹಲವಾರು ನಟರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಶಿವಣ್ಣ ಹಾಗೂ ರಾಘಣ್ಣ ಪ್ರೇಕ್ಷಕರ ಮನಸ್ಸಿನಲ್ಲಿ ಸಂತೋಷವನ್ನು ಉಂಟು ಮಾಡುತ್ತಾರೆ.

ಇದರಲ್ಲಿ ಮೈನಸ್ ಪಾಯಿಂಟ್ ಗಳು ಏನೇ ಇರಲಿ ಆದರೆ ಅದನ್ನು ಹುಡುಕಿ ಅಭಿಮಾನಿಗಳ ಮನಸ್ಸಿಗೆ ದುಃಖವನ್ನು ಉಂಟು ಮಾಡುವುದು ತಪ್ಪು. ಹೀಗಾಗಿ ಚಿತ್ರದಲ್ಲಿ ತಪ್ಪನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ಎಂಬ ಕಾರಣಕ್ಕಾಗಿ ಅದನ್ನು ಎಂಜಾಯ್ ಮಾಡುವುದನ್ನು ಮೊದಲು ನಾವು ಕಲಿತುಕೊಳ್ಳಬೇಕು. ಜೇಮ್ಸ್ ಚಿತ್ರವನ್ನು ದೊಡ್ಡಮಟ್ಟದ ಸೂಪರ್ ಹಿಟ್ ಸಿನಿಮಾವಾಗಿ ಮಾಡುವುದರ ಮೂಲಕ ಕನ್ನಡ ಚಿತ್ರರಂಗದ ನಗುವಿನ ರಾಜಕುಮಾರ ನಾಗಿರುವ ಪುನೀತ್ ರಾಜಕುಮಾರ್ ರವರಿಗೆ ಅರ್ಥಪೂರ್ಣ ಹಾಗೂ ಭಾವಪೂರ್ಣ ವಿದಾಯ ವನ್ನು ಸಲ್ಲಿಸೋಣ.