ನಿಜಕ್ಕೂ ಕಿಚ್ಚ ರವರು ಅಪ್ಪು ರವರಿಗೆ ವಿಶ್ ಮಾಡದೆ ಇದ್ದದ್ದು ಯಾಕೆ?? ದರ್ಶನ್ ಮಾಡಿದ ಒಂದು ಟ್ವೀಟ್ ನಲ್ಲಿ ಏನಿದೆ ಗೊತ್ತೇ??

203

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟ ಹಾಗೂ ಹಿರಿಯ ನಟರೊಂದಿಗೆ ಸ್ನೇಹವನ್ನು ಹೊಂದಿರುವಂತಹ ನಟ. ಇದಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಅವರನ್ನು ಅಜಾತಶತ್ರು ಎಂದು ಕರೆಯುತ್ತಿದ್ದರು. ಯಾರಿಗೂ ಎಂದು ಕೆಟ್ಟದ್ದನ್ನು ಬಯಸಿದವರಲ್ಲ ಹಾಗೂ ಯಾವುದೇ ವಿ’ವಾದಕ್ಕೆ ಕೂಡ ಸಿಲುಕಿದವರಲ್ಲ.

ಇದಕ್ಕಾಗಿ ಕನ್ನಡ ಚಿತ್ರರಂಗ ಅವರನ್ನು ರಾಜರತ್ನ ಎಂಬುದಾಗಿ ಪ್ರೀತಿಯಿಂದ ಕರೆಯುತ್ತಾರೆ. ಒಂದು ವೇಳೆ ಯಾರಿಗಾದರೂ ಕಷ್ಟ ಇದೆ ಎಂದು ಅಪ್ಪು ಅವರಿಗೆ ತಿಳಿದರೆ ಅವರು ತಮ್ಮ ಕೈಲಾದಷ್ಟು ಸಹಾಯ ಮಾಡಿ ಅವರ ಕಷ್ಟದಿಂದ ಅವರನ್ನು ಹೊರಬರುವಂತೆ ತಮಗೆ ತಿಳಿಯದಂತೆ ಮಾಡುತ್ತಾರೆ. ಅಂದರೆ ಯಾವುದೇ ಪ್ರಚಾರವನ್ನು ಕೂಡ ಅವರು ಪಡೆದುಕೊಳ್ಳುವುದಿಲ್ಲ ಎಂದರ್ಥ. ಇದಕ್ಕಾಗಿ ಪುನೀತ್ ರಾಜಕುಮಾರ್ ಅವರನ್ನು ಎಲ್ಲರೂ ಇಷ್ಟಪಡುವುದು.

ರಾಜಕುಮಾರ ಚಿತ್ರದಿಂದ ಅದೆಷ್ಟೋ ಜನರು ತಮ್ಮ ತಂದೆ-ತಾಯಿಯರನ್ನು ಅನಾಥಾಶ್ರಮದಿಂದ ಹಾಗು ವೃದ್ಧಾಶ್ರಮದ ವಾಪಸು ಕರೆತಂದಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡುವ ಕೆಲಸಗಳು ಹಾಗೂ ಸಿನಿಮಾಗಳು ನಿಜಜೀವನದಲ್ಲಿ ಕೂಡ ಒಳ್ಳೆಯ ರೀತಿಯ ಬದಲಾವಣೆಗಳನ್ನು ತರುತ್ತದೆ ಎಂಬುದಕ್ಕೆ ಇದೇ ದೊಡ್ಡ ಉದಾಹರಣೆ ಎಂದು ಹೇಳಬಹುದಾಗಿದೆ. ಸರ್ಕಾರಿ ಜಾಹೀರಾತುಗಳನ್ನು ಕೂಡ ಒಂದು ರೂಪಾಯಿ ಸಂಭಾವನೆ ಇಲ್ಲದಂತೆ ಉಚಿತವಾಗಿ ಮಾಡಿ ಸಾಮಾಜಿಕ ಕಳಕಳಿ ತರುವಂತೆ ಹಾಗೂ ಸಮಾಜದಲ್ಲಿ ಒಂದೊಳ್ಳೆ ಬದಲಾವಣೆ ಬರುವಂತೆ ಮಾಡಲು ಪ್ರಯತ್ನಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು ಕೂಡ ಹಲವಾರು ನಿರ್ಮಾಪಕರ ಬಳಿ ಕಡಿಮೆ ಹಣಕ್ಕಾಗಿ ಕೂಡ ಸಿನಿಮಾವನ್ನು ಮಾಡಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಹೊಸ ನಟರಿಗೆ ಅವಕಾಶವನ್ನು ನೀಡಿದ್ದಾರೆ. ಅವರು ಇನ್ನೂ ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದರೆ ಖಂಡಿತವಾಗಿ ಇನ್ನೂ ಹಲವಾರು ಪ್ರತಿಭೆಗಳು ಅವರ ಆಶ್ರಯದಲ್ಲಿ ಬೆಳಗುತ್ತಿದ್ದವು ಎಂದರೆ ತಪ್ಪಾಗಲಾರದು.

ಇನ್ನು ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕಾಲದಿಂದ ಪ್ರಾರಂಭವಾಗಿ ಇಂದಿನವರೆಗೂ ಕೂಡ ಅವರ ಜೊತೆಯಾಗಿ ಚಿತ್ರರಂಗದಲ್ಲಿ ಹೆಚ್ಚು ಎಂದರೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ತಪ್ಪಾಗಲಾರದು. ಮೂವರು ಕೂಡ ಒಂದೇ ಕಾಲಘಟ್ಟದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು. ಇಬ್ಬರಿಗೂ ಕೂಡ ತಮ್ಮ ಸ್ನೇಹಿತನನ್ನು ಮಾರ್ಗಮಧ್ಯದಲ್ಲಿ ಆಗಲಿ ದಂತಹ ದುಃಖ ಖಂಡಿತವಾಗಿ ಇದೆ.

ಅಕ್ಟೋಬರ್ 29ರಂದು ಇಬ್ಬರು ಕೂಡ ತಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ ಎಂದು ತಿಳಿದು ತಮ್ಮ ಚಿತ್ರದ ಚಿತ್ರೀಕರಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಆಸ್ಪತ್ರೆಗೆ ಓಡೋಡಿ ಬಂದವರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಅವರ ಕೊನೆಯ ಚಿತ್ರ ಜೇಮ್ಸ್ ಜನ್ಮದಿನದಂದು ಬಿಡುಗಡೆಯಾಗಿರುವ ನಿಮಗೆಲ್ಲ ಗೊತ್ತೇ ಇದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದರ್ಶನ್ ರವರು ಟ್ವಿಟರ್ನಲ್ಲಿ ಪುನೀತ್ ರಾಜಕುಮಾರ್ ರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿ ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಬಿಡುಗಡೆಗೆ ಶುಭವನ್ನು ಕೂಡ ಹಾರೈಸಿದ್ದಾರೆ. ಆದರೆ ಪುನೀತ್ ರಾಜಕುಮಾರ್ ಅವರ ಮತ್ತೊಬ್ಬ ನೆಚ್ಚಿನ ಗೆಳೆಯ ನಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಗೆಳೆಯನ ಜನುಮ ದಿನದಂದು ಯಾವುದೇ ಶುಭಾಶಯಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ.

ಇದರ ಕುರಿತಂತೆ ಯಾರೇನೇ ಮಾತನಾಡಿ ಕೊಳ್ಳಬಹುದು ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹಾಗೂ ಕಿಚ್ಚ ಸುದೀಪ್ ರವರ ಬಾಂಧವ್ಯವನ್ನು ನೋಡಿದವರಿಗೆ ಅವರ ಸ್ನೇಹದ ಕುರಿತಂತೆ ಗೊತ್ತಿರುತ್ತದೆ. ಬಹುಶಃ ಸ್ನೇಹಿತ ಇಲ್ಲದೆ ಇರುವ ಮೊದಲ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಶುಭಾಶಯವನ್ನು ಕೋರುವುದು ದುಃಖಕರವಾಗಿ ಪರಿಣಮಿಸಿತ್ತು ಎಂದು ಕಾಣುತ್ತದೆ. ಇದಕ್ಕಾಗಿಯೇ ಕಿಚ್ಚ ಸುದೀಪ್ ರವರು ತಮ್ಮ ಗೆಳೆಯನಿಗೆ ಜನ್ಮದಿನದ ವಿಶೇಷವಾಗಿ ಹಾಗೂ ಜೇಮ್ಸ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿಲ್ಲ ಎಂದು ಕಾಣುತ್ತದೆ.

ಅದೇನೇ ಇರಲಿ ಇಬ್ಬರೂ ಕೂಡ ಪುನೀತ್ ರಾಜಕುಮಾರ್ ರವರ ಸಿನಿಮಾರಂಗದ ಜರ್ನಿಯಲ್ಲಿ ಜೊತೆಯಾಗಿ ನಡೆದುಕೊಂಡು ಬಂದವರು ಎಂದರೆ ತಪ್ಪಾಗಲಾರದು. ಹೀಗಾಗಿ ಅದನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸದೆ ಇದ್ದರೂ ಕೂಡ ಅಪ್ಪುಗಾಗಿ ಪ್ರೀತಿ ಹಾಗು ಗೌರವಗಳು ಇಬ್ಬರ ಮನಸ್ಸಿನಲ್ಲಿ ಕೂಡ ಇದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಾಗೂ ಜೇಮ್ಸ್ ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸುವುದನ್ನು ಮಾತ್ರ ಮರೆಯಬೇಡಿ.