ಅಪ್ಪು ರವರ ಡೈಲಾಗು ಹೇಳು ಅಂದಾಗ ವಾಂಶಿಕ ಹೇಳಿದ ಮಸ್ತ್ ಡೈಲಾಗ್ ಯಾವುದು ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ.

44

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮಕ್ಕಳ ಕುರಿತಂತೆ ಮೂಡಿಬರುತ್ತಿರುವ ಹಲವಾರು ಕಾರ್ಯಕ್ರಮಗಳ ಮೂಲಕ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಇಡೀ ಕರ್ನಾಟಕಕ್ಕೆ ಕಿರುತೆರೆಯ ಮೂಲಕ ತೋರಿಸಲು ಸಾಧ್ಯವಾಗುತ್ತದೆ. ಅವುಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮ ಕೂಡ ಒಂದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೂಪರ್ಸ್ಟಾರ್ ಕಾರ್ಯಕ್ರಮದ ಮೂಲಕ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವುದು ಎಂದರೆ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ.

ಮಾಸ್ಟರ್ ಆನಂದ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಚಿಕ್ಕವಯಸ್ಸಿನಲ್ಲಿಯೇ ಸಾಕಷ್ಟು ಪ್ರಖ್ಯಾತಿಯನ್ನು ಪಡೆದವರು. ಆ ಸಮಯದಲ್ಲೇ ಸ್ಟಾರ್ ನಟರಿಗೆ ಇರುವಷ್ಟು ಜನಪ್ರಿಯತೆ ಮಾಸ್ಟರ್ ಆನಂದ್ ರವರಿಗೆ ಇತ್ತು. ಅದೇ ರೀತಿ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ ತಮ್ಮ ಚಟಪಟ ಮಾತಿನಿಂದಾಗಿ ಎಲ್ಲರ ಮನಸ್ಸನ್ನು ಗೆಲ್ಲಲು ಆರಂಭಿಸಿದ್ದಾಳೆ.

ಈಗಾಗಲೇ ಅವಳ ಚೂಟಿತನಕ್ಕೆ ಎಲ್ಲರೂ ಕೂಡ ಮಾರು ಹೋಗಿದ್ದು ಈಗಾಗಲೇ ಅವಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವೇ ಇದೆ. ಈ ಕುರಿತಂತೆ ಕಳೆದ ಬಾರಿ ಮಾಸ್ಟರ್ ಆನಂದ್ ರವರು ಕೂಡ ಅವಳ ತಂದೆ ಆಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಪ್ರತಿಕ್ರಿಯಿಸಿದ್ದರು. ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಂಶಿಕ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ನಟರ ಡೈಲಾಗನ್ನು ಹೇಳಿದ್ದು ಇದರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಡೈಲಾಗ್ ಅನ್ನು ಕೂಡ ಹೇಳಿದ್ದಾಳೆ. ಹೌದು ಜಾಕಿ ಸಿನಿಮಾದ ಡೈಲಾಗನ್ನು ತೊದಲು ನುಡಿಯಲ್ಲಿ ಹೇಳುತ್ತಾ ಪಟಾಕಿ ಯಾವಂದೇ ಆಗಿರಲಿ ಅಂಟಿಸುವರು ನಾವಾಗಿರಬೇಕು ಎನ್ನುತ್ತಾಳೆ. ಈ ವಿಡಿಯೋ ಈಗಾಗಲೇ ಸಾಕಷ್ಟು ವೈರಲ್ ಕೂಡ ಆಗಿದೆ.