ಕೊನೆಗೂ ಬಯಲಾಯಿತು ಅಸಲಿ ಸಂಭಾವನೆ, ಅಪ್ಪು ಸೇರಿದಂತೆ ಜೇಮ್ಸ್ ಚಿತ್ರಕ್ಕೆ ನಟ-ನಟಿಯರು ತೆಗೆದುಕೊಂಡಂತಹ ಸಂಭಾವನೆ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇಡೀ ಕರುನಾಡೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಜೇಮ್ಸ್ ಚಿತ್ರದ ಮೂಲಕ ದೊಡ್ಡ ಪರದೆ ಮೇಲೆ ಕೊನೆಯ ಬಾರಿಗೆ ನೋಡುತ್ತಿದೆ. ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಪರ ರಾಜ್ಯಗಳಲ್ಲಿಯೂ ಕೂಡ ಜೇಮ್ಸ್ ಚಿತ್ರದ ಹವಾ ಎನ್ನುವುದು ದೊಡ್ಡಮಟ್ಟದಲ್ಲಿ ಬೀಸುತ್ತಿದೆ. ಒಂದರಮೇಲೊಂದರಂತೆ ಎಲ್ಲಾ ದಾಖಲೆಗಳನ್ನು ಕೂಡ ಅಳಿಸಿಹಾಕಿ ಹೊಸ ದಾಖಲೆಯನ್ನು ಜೇಮ್ಸ್ ಚಿತ್ರ ನಿರ್ಮಿಸುತ್ತಿದೆ.

ಮತ್ತೊಂದು ಪ್ರಮುಖ ವಿಚಾರವೇನೆಂದರೆ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ದೊಡ್ಡಮನೆಯ ಮೂರು ಮಕ್ಕಳು ಕೂಡ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಮತ್ತೊಂದು ಬೇಸರ ತರಿಸುವ ವಿಚಾರವೇನೆಂದರೆ ಮೂವರು ಕೂಡ ಒಟ್ಟಾಗಿ ಒಂದೇ ಫ್ರೇಮಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು. ಇನ್ನು ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಪ್ರಾರಂಭದಿಂದ ಕೊನೆಯವರೆಗೂ ಕೂಡ ಶಿವಣ್ಣನವರೇ ವಾಯ್ಸ್ ಆಗಿದ್ದಾರೆ. ಸಿನಿಮಾ ಪ್ರತಿಯೊಂದು ಫ್ರೇಮ್ ನಲ್ಲಿ ಕೂಡ ಶ್ರೀಮಂತವಾಗಿ ಮೂಡಿಬಂದಿದೆ. ಪ್ರತಿಯೊಬ್ಬ ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಜೇಮ್ಸ್ ಚಿತ್ರದಲ್ಲಿ ಬಹು ತಾರಾಗಣವಿತ್ತು ಎನ್ನುವುದು ಚಿತ್ರವನ್ನು ನೋಡಿದವರಿಗೆ ಗೊತ್ತಾಗುತ್ತದೆ. ತಮಿಳು ಚಿತ್ರರಂಗದ ಖ್ಯಾತ ನಟ ಶರತ್ ಕುಮಾರ್ ಅವಿನಾಶ್ ರಂಗಾಯಣ ರಘು ಶ್ರೀಕಾಂತ್ ಮೇಕ ಹೀಗೆ ಹತ್ತು ಹಲವಾರು ಖ್ಯಾತನಾಮರು ಜೇಮ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಯಾವೆಲ್ಲ ನಟ-ನಟಿಯರು ಎಷ್ಟು ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಜೇಮ್ಸ್ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿರುವ ಹಿರಿಯ ನಟ ಅವಿನಾಶ್ ರವರು ಹದಿನೈದು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಜಿಲ್ಲಾಧಿಕಾರಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು 5 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಸಾಧು ಮಹಾರಾಜ್ ಅವರು ಕೂಡ ತಮ್ಮ ಕಾಮಿಡಿ ಕಚಗುಳಿಯನ್ನು ಈ ಚಿತ್ರದಲ್ಲಿ ನೀಡಿದ್ದಾರೆ ಇವರು ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.
ಸದ್ಯದ ಕಾಮಿಡಿ ಕಿಂಗ್ ಆಗಿರುವ ಚಿಕ್ಕಣ್ಣನವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ನೇಹಿತನ ಪಾತ್ರದಲ್ಲಿ ಹಾಗೂ ಪತ್ರಿಕಾ ಸಂಪಾದಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬರೋಬ್ಬರಿ 25 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ರಂಗಾಯಣ ರಘು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ನೇಹಿತನ ಪಾತ್ರದಲ್ಲಿ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಕೂಡ ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಬಹುಭಾಷಾ ತಾರೆ ಆದಿತ್ಯ ಮೆನನ್ ಕೂಡ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇದಕ್ಕಾಗಿ ಅವರು 25 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಮುಖೇಶ್ ರಿಷಿ ರವರು ಹದಿನೈದು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ತಿಲಕ್ ಅವರು ಕೂಡ ಅಪ್ಪು ಅವರ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಹತ್ತು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ತಮಿಳು ಚಿತ್ರರಂಗದ ಬಹುಭಾಷಾ ತಾರೆ ಆಗಿರುವ ಶರತ್ ಕುಮಾರ್ ಅವರು ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 35 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.
ಕರ್ನಾಟಕ ಮೂಲದ ತೆಲುಗಿನ ಖ್ಯಾತನಟ ಆಗಿರುವ ಶ್ರೀಕಾಂತ್ ಮೇಕ ಅವರು ಬರೋಬ್ಬರಿ 30 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ನಟಿ ಅನು ಪ್ರಭಾಕರ್ ರವರು ಕೂಡ ಜೇಮ್ಸ್ ಚಿತ್ರದಲ್ಲಿ ನಟಿಸಿದ್ದು ಇವರು 10 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರಾಗಿರುವ ಚರಣರಾಜ್ ರವರು ಬರೋಬ್ಬರಿ 40 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ನಿರ್ದೇಶಕರಾಗಿರುವ ಚೇತನ್ ಕುಮಾರ್ ಅವರು ಬರೋಬ್ಬರಿ 50 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ಚಿತ್ರದ ನಾಯಕಿಯಾಗಿರುವ ಪ್ರಿಯ ಆನಂದರವರು 1 ರಿಂದ 1.5 ಕೋಟಿ ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂಬುದಾಗಿ ಮೂಲಗಳು ಹೇಳುತ್ತಿವೆ. ಚಿತ್ರದ ನಾಯಕ ನಟನಾಗಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಜೇಮ್ಸ್ ಚಿತ್ರಕ್ಕಾಗಿ ಬರೋಬ್ಬರಿ ಎಂಟರಿಂದ ಹತ್ತು ಕೋಟಿ ರೂಪಾಯಿ ಸಂಭಾವನೆ ಆಗಿ ಪಡೆದುಕೊಂಡಿದ್ದಾರೆ ಎಂದು ಕೇಳಿಬರುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ಜೇಮ್ಸ್ ಚಿತ್ರವನ್ನು ಒಂದು ವೇಳೆ ನೀವು ಕೂಡ ನೋಡಿದ್ದರೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.