ಬಿಡುಗಡೆಗೂ ಮುನ್ನವೇ ಯಶ್ ಕೆಜಿಎಫ್ 2 ಹಾಗೂ ವಿಜಯ್ ಸಿನೆಮಾಗೆ ಶಾಕ್ ನೀಡಿದ ಪುನೀತ್ ಜೇಮ್ಸ್, ಅಪ್ಪು ಬಿರುಗಾಳಿಗೆ ದೂಳೀಪಟ. ನಡೆದ್ದದೇನು ಗೊತ್ತೇ?

371

ನಮಸ್ಕಾರ ಸ್ನೇಹಿತರೇ ನಾಳೆ ಅಂದರೆ ಮಾರ್ಚ್ 17ರಂದು ಹಲವಾರು ದಿನಗಳಿಂದ ಕಾಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ನಿಜಕ್ಕೂ ಕೂಡ ಕೋಟ್ಯಂತರ ಅಭಿಮಾನಿಗಳಿಗೆ ಈ ದಿನ ಪುಣ್ಯದಿನ ಎಂದರೆ ತಪ್ಪಾಗಲಾರದು. ಅಪ್ಪು ಅವರ ಕೊನೆಯ ಸಿನಿಮಾವನ್ನು ಹಬ್ಬದಂತೆ ಅಭಿಮಾನಿಗಳು ಸಲಬ್ರೇಶನ್ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಜನಪ್ರಿಯತೆಯನ್ನು ವುದು ಸಾಗರದಾಚೆಗೂ ಕೂಡ ಜನರಲ್ಲಿ ಪಸರಿಸಿದೆ.

ನಿಜಕ್ಕೂ ಕೂಡ ಕನ್ನಡ ಚಿತ್ರವೊಂದು ಎಷ್ಟು ಮಟ್ಟಿಗೆ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಬಹುದಾಗಿದೆ. ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾದಲ್ಲಿ ಅವರನ್ನು ಕೊನೆಯ ಬಾರಿಗೆ ನೋಡುವ ಅವಕಾಶವನ್ನು ಯಾರು ಕೂಡ ತಪ್ಪಿಸಿಕೊಳ್ಳಲು ಬಯಸುತ್ತಿಲ್ಲ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಭರ್ತಿಯಾಗುತ್ತಿವೆ. ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಕೂಡ ದೊಡ್ಡ ಮಟ್ಟದಲ್ಲಿ ಕಂಡು ಬರಲಿದೆ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರ ತಮಿಳಿನ ತಳಪತಿ ವಿಜಯ್ ನಟನೆಯ ಬೀಸ್ಟ್ ಹಾಗೂ ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2ನ್ನು ಕೂಡ ಹಿಂದಿಕ್ಕಿ ಮಿಂಚುತ್ತಿದೆ.

ಹಾಗಿದ್ದರೆ ಇದು ನಡೆದಿರುವುದು ಯಾವ ವಿಭಾಗದಲ್ಲಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಐಎಂಡಿಬಿ ನಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಬೀಸ್ಟ್ ಹಾಗೂ ಕೆಜಿಎಫ್ ಚಾಪ್ಟರ್ 2 ಅನ್ನು ಹಿಂದಿಕ್ಕಿ ಜೇಮ್ಸ್ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಅಧಿಕೃತ ವೆಬ್ ಸೈಟಿನ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಜೇಮ್ಸ್ ಚಿತ್ರ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ, ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಚಿತ್ರ 5ನೇ ಸ್ಥಾನ ಪಡೆದುಕೊಂಡಿದ್ದರೆ ಈ ಕಡೆ ಬೀಸ್ಟ್ ಚಿತ್ರ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಬಿಡುಗಡೆಗೆ ಮುನ್ನವೇ ಇಷ್ಟೊಂದು ಕ್ರೇಜ್ ಅನ್ನು ಹೊಂದಿದೆ ಎಂದರೆ ಬಿಡುಗಡೆ ನಂತರ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆಯನ್ನು ಬರೆಯುವುದಂತೂ ನಿಶ್ಚಿತ.