ಬಹುತೇಕ ನಟರು ಅಪ್ಪು ರವರಿಗೆ ವಿಶ್ ಮಾಡದೆ ಇದ್ದರೂ ಕೂಡ ಹುಟ್ಟು ಹಬ್ಬದ ದಿನದಂದು ದರ್ಶನ್ ಹೇಳಿದ್ದೇನು ಗೊತ್ತೇ??

435

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಜನುಮದಿನದ ಶುಭಾಶಯಗಳು ಅವರೇ ಇಲ್ಲದಿರುವುದು ಕೋಟ್ಯಾಂತರ ಕನ್ನಡಿಗರಿಗೆ ದುಃಖವನ್ನು ತರಿಸಿದೆ. ಮೊದಲ ಬಾರಿಗೆ ಅಪ್ಪು ಇಲ್ಲದೆ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಆಚರಿಸುವಂತಾಗಿದೆ. ಅದರಲ್ಲೂ ಜೇಮ್ಸ್ ಚಿತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ವಿಶೇಷವಾಗಿ ದೇಶವಿದೇಶಗಳಲ್ಲಿ ಚಿತ್ರಮಂದಿರದ ದೊಡ್ಡ ಪರದೆಗಳ ಮೇಲೆ ಅದ್ದೂರಿಯಾಗಿ ತೆರೆಕಂಡಿದೆ.

ಪ್ರೇಕ್ಷಕರು ಕೊನೆಪಕ್ಷ ಅಪ್ಪು ಅವರನ್ನ ಆದರೂ ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡಬಹುದಲ್ಲ ಎಂಬ ನಿಟ್ಟಿಸಿರು ಬಿಟ್ಟಿದ್ದಾರೆ. ಅಪ್ಪು ಹಾಗೂ ದಚ್ಚು ರವರ ಸ್ನೇಹವನ್ನು ಈಗಾಗಲೆ ನೀವು ಹಲವಾರು ಬಾರಿ ನೋಡಿರುತ್ತೀರಿ. ಇಬ್ಬರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರ ಮಕ್ಕಳಾದರೂ ಪರಸ್ಪರ ಸಿನಿಮಾದಲ್ಲಿ ಕಷ್ಟಪಟ್ಟೇ ಮೇಲೆ ಬಂದವರು. ಮೊದಲಿನಿಂದಲೂ ಕೂಡ ಇಬ್ಬರ ನಡುವೆ ಪರಸ್ಪರ ಪ್ರೀತಿ ಗೌರವ ಗಳು ಇದ್ದವು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲ ವಾದರು ಎಂಬ ಸುದ್ದಿ ಕೇಳಿದಾಗ ಕ್ರಾಂತಿ ಸಿನಿಮಾದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದನ್ನು ನೀವು ಈ ಹಿಂದೆ ನೋಡಿರಬಹುದು. ಇನ್ನು ಅಪ್ಪು ರವರ ಜನ್ಮ ದಿನದ ವಿಶೇಷವಾಗಿ ದರ್ಶನ್ ರವರು ಎಂದು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ ಬನ್ನಿ ತಿಳಿದುಕೊಳ್ಳೋಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಶುಭದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ದೈಹಿಕವಾಗಿ ಇಂದು ನಮ್ಮೊಡನೆ ಇರದಿದ್ದರೂ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ನೆಲೆಮಾಡಿರುವ ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ. ಜೇಮ್ಸ್ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ ಎಂಬುದಾಗಿ ಬರೆದುಕೊಂಡಿದ್ದಾರೆ. ನಿಜಕ್ಕೂ ಕೂಡ ಇದು ಅವರಿಗೆ ಭಾವನಾತ್ಮಕ ಕ್ಷಣಗಳ ಆಗಿದ್ದು ತಮ್ಮ ಭಾವನೆಯನ್ನು ಬರಹದ ಮೂಲಕ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಅಭಿಮಾನಿಗಳಿಗೆ ಇವರನ್ನು ಒಂದೇ ಸಿನಿಮಾದಲ್ಲಿ ಜೊತೆಯಾಗಿ ನೋಡಬೇಕೆಂದು ಆಸೆ ಹಲವಾರು ಬಾರಿ ವ್ಯಕ್ತಪಡಿಸಿದ್ದರು. ಕೊನೆಗೂ ಆ ಆಸೆಯನ್ನು ವುದು ಕನಸಾಗಿಯೇ ಉಳಿತು ಎನ್ನುವುದು ವಿಷಾದನೀಯ ವಿಚಾರ.