ನಂದಗೋಕುಲದಿಂದ ಚಂದನವನದೆಡೆಗೆ ಬರುತ್ತಿದ್ದರೆ ಕರಾವಳಿ ಪ್ರತಿಭೆ, ಹೊಸ ಪ್ರತಿಭೆ ಶ್ವೇತಾ ಅರೆಹೊಳೆ ರವರ ಹಿನ್ನೆಲೆಯೇನು ಗೊತ್ತೇ??

65

ನಮಸ್ಕಾರ ಸ್ನೇಹಿತರೇ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಹಲವಾರು ಕಲಾ ಪ್ರತಿಭೆಗಳು ಇಂದು ಸಿನಿಮಾ ನಟನೆಯತ್ತ ಮುಖ ಮಾಡಿವೆ. ಅದರಲ್ಲೂ ರಂಗಭೂಮಿಯ ಕಲಾವಿದರಾಗಿ, ನಟನೆಯಲ್ಲಿ ಪ್ರಬುದ್ಧತೆಯನ್ನು ಪಡೆದು ಚದನವನಕ್ಕೆ ಕಾಲಿದುತ್ತಿದ್ದಾರೆ. ಇಂಥ ಒಂದು ಕರಾವಳಿ ಪ್ರತಿಭೆ ಶ್ವೇತಾ ಅರೆಹೊಳೆ.

ತಮ್ಮ ತಂದೆ ಅರೆಹೊಳೆ ಸದಾಶಿವ ರಾವ್ ಮತ್ತು ತಾಯಿ ಗೀತ ಅರೆಹೊಳೆಯವರೊಡನೆ ರಂಗಾಯಣ, ನೀನಾಸಂರಂತಹ ಜನಪ್ರಿಯ ತಂಡಗಳ ನಾಟಕ ಪ್ರದರ್ಶನಗಳನ್ನು ನೋಡತ್ತಲೇ ಬೆಳೆದವರು ಶ್ವೇತಾ. ತಮ್ಮ ಶಿಕ್ಷಣವನ್ನು ಮಂಗಳೂರಿನ ಉರ್ವದ ಕೆನರಾ ಕಾಲೇಜಿನಲ್ಲಿ ಪೂರೈಸಿ, ನಂತರ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಹಾಗೂ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಶ್ವೇತಾ ಅವರಿಗೆ ನಟನೆ, ನೃತ್ಯ ಇವುಗಳ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ಹೆಚ್ಚಿನ ಆಸಕ್ತಿ.

ತನ್ನ 5ನೇ ತರಗತಿಯಲ್ಲೇ ಭರತನಾಟ್ಯದ ಅಭ್ಯಾಸ ಮಾಡಿ ಅದ್ಭುತ ಭರತನಾಟ್ಯ ಕಲಾವಿದೆ ಎನಿಸಿದ್ದಾರೆ. ಅಷ್ಟೇ ಅಲ್ಲ, ಬಾಲ್ಯದಿಂದಲೇ ನಾಟಕ ,ರಂಗ ಭೂಮಿಯ ಕಡೆಗೆ ಆಸಕ್ತಿ ಬೆಳೆಸಿಕೊಂಡು ಶಾಲ ದಿನಗಳಲ್ಲಿ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು ಶ್ವೇತಾ. ನಂದ ಗೋಕುಲ ನಾಟಕ ತಂಡದ ಮೂಲಕ ಕಲಾ ಲೋಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಇನ್ನೂ ಕಲವು ಪ್ರತಿಭೆಗಳು ಬೆಳೆಯಲು ಸಹಕಾರಿಯಾದರು.

ನಂದ ಗೋಕುಲ ತಂಡದ ಆಶ್ರಯದಲ್ಲಿ ಹಲವು ನಿರ್ದೇಶಕರಿಂದ ತರಬೇತಿ ಪಡೆದು, ಹತ್ತಾಋ ನಾಟಕ ಪಾತ್ರಗಳಿಗೆ ಜೀವತುಂಬಿ ಇದೀಗ ಸಿನಿಮಾ ರಂಗದತ್ತ ಹೆಜ್ಜೆ ಇರಿಸುತ್ತಿದ್ದಾರೆ ಕಲಾವಿದೆ ಶ್ವೇತಾ ಅರೆಹೊಳೆ. ಚಿಕ್ಕ ವಯಸ್ಸಿನಲ್ಲಿಯೇ ಹಲವು ಸಾಧನೆಗಳನ್ನು ಮಾಡಿರುವ ಶ್ವೇತಾ ಅವರಿಗೆ ಹಲವು ಪ್ರಶಸ್ತಿ ಸನ್ಮಾನಗಳು ಅರಸಿಬಂದಿವೆ. ರಾಜ್ಯ ಚುಟುಕು ಸಾಹಿತ್ಯ ಪರಿಷತ್ ನಿಂದ ನಾಟ್ಯ ಕಿಶೋರಿ ಪುರಸ್ಕಾರ, ಶಿರಸಿಯ ವಿಶ್ವ ಶಾಂತಿ ಪ್ರತಿಷ್ಠಾನದಿಂದ ಆಯೋಜಿಸಲಾದ ನಮ್ಮನೆ ಹಬ್ಬದಲ್ಲಿ ನಮ್ಮನೆ ಪುರಸ್ಕಾರ, ಪ್ರಜಾವಾಣಿಯವರ ಯಂಗ್ ಅಚಿವರ್ ಆಫ್ 2020 ಮೊದಲಾದ ಪುರಸ್ಕಾರಗಳಿಗೆ ಭಾಜನವಾಗಿದ್ದಾರೆ ಕುಂದಾಪುರದ ಹೆಮ್ಮೆಯ ಕಲಾವಿದೆ ಶ್ವೇತ ಅರೆಹೊಳೆ.

ಮಾರ್ಚ್ 11ರಂದು ರಾಜ್ಯದಾದ್ಯಂತ ಬಿಡುಗಡೆಗೆಯಾಗಲಿರುವ, ಗುರು ಅವರ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಹರೀಶ ವಯಸ್ಸು 36 ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರ ತಂಡ ತಾನು ನಟಿಸುವುದಕ್ಕೆ ನೀಡಿದ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಬಗ್ಗೆ ಖುಷಿಯಿಂದ ಹೇಳಿಕೊಳ್ಳುತ್ತಾರೆ ಶ್ವೇತಾ.

ವೀರೇಂದ್ರ ಶೆಟ್ಟಿ ಅವರ ನಿರ್ದೇಶನದ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಮೂಡಿಬರಲಿರುವ ‘ಮಗನೇ ಮಹಿಷಾ’ ಎಂಬ ಚಿತ್ರದ ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಹೆಗ್ಗಳಿಕೆಯೂ ಇವರದ್ದು, ಹೀಗೆ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಇದೀಗ ಬೆಳ್ಳಿತೆರೆಯ ಮೇಲೂ ಸೈ ಎನಿಸಿಕೊಳ್ಳಲು ಮುದಾಗಿರುವ ಕರಾವಳಿ ಪ್ರತಿಭೆ ಶ್ವೇತಾ ಅರೆಹೊಳೆಯವರಿಗೆ ನಮ್ಮೆಲ್ಲರ ಬೆಸ್ಟ್ ವಿಶಸ್!