ರಾಮಾಚಾರಿ ಧಾರವಾಹಿಯ ನಟಿ ಚಾರು ರವರ ತಮ್ಮನ್ನ ಪಾತ್ರದಾರಿಯ ಚಿಂಟು ನಿಜಕ್ಕೂ ಯಾರು ಗೊತ್ತೇ?? ಈತನೇ ಹಿನ್ನೆಲೆಯೇನು ಗೊತ್ತೇ??

705

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ಸಿಕ್ಕಷ್ಟೇ ಪ್ರೀತಿ ಹಾಗೂ ಅಭಿಮಾನಿಗಳು ಕನ್ನಡ ಕಿರುತೆರೆಯಲ್ಲಿ ಪ್ರಸಾರ ವಾಗುವಂತಹ ಧಾರಾವಾಹಿಗಳಿಗೂ ಕೂಡ ಇವೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅಂಶವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಆರಂಭವಾಗಿರುವ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿ ಎಲ್ಲಾ ಧಾರವಾಹಿ ಪ್ರಿಯರಿಗೂ ಕೂಡ ಇಷ್ಟವಾಗುತ್ತಿದೆ. ಕೇವಲ ರಾಮಾಚಾರಿ ಪಾತ್ರ ಮಾತ್ರವಲ್ಲದೆ ಧಾರವಾಹಿಯಲ್ಲಿ ಇರುವಂತಹ ಇನ್ನೂ ಅನೇಕ ಪಾತ್ರಗಳು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನದಾಗಿವೆ. ಅವುಗಳಲ್ಲಿ ಜಾರು ಪಾತ್ರ ಕೂಡ ಪ್ರಮುಖವಾಗಿದೆ.

ರಾಮಾಚಾರಿ ಧಾರವಾಹಿಯಲ್ಲಿ ಬಹುತೇಕ ಎಲ್ಲಾ ಪಾತ್ರಗಳು ಕೂಡ ಪ್ರಾಮುಖ್ಯತೆಯನ್ನು ವಹಿಸಿದೆ. ಹೀಗಾಗಿ ಧಾರವಾಹಿಯ ಅಭಿಮಾನಿಗಳು ಎಲ್ಲಾ ಪಾತ್ರಗಳನ್ನು ಕೂಡ ಮೆಚ್ಚಿಕೊಳ್ಳುತ್ತಾರೆ. ರಾಮಾಚಾರ್ಯ ತಂದೆಯಾಗಿ ಶಂಕರ್ ಅಶ್ವಥ್ ಹಾಗೂ ಚಾರುವಿನ ತಂದೆಯಾಗಿ ಗುರುದತ್ ತಾಯಿಯಾಗಿ ಭಾವನಾ ಹೀಗೆ ದಾರವಾಹಿ ಹತ್ತು ಹಲವಾರು ಪಾತ್ರಗಳು ಪ್ರೇಕ್ಷಕರು ಸಂಜೆ ಆಯ್ತೆಂದರೆ ಸಾಕು ಗುಣಗಾನ ಮಾಡಲು ಆರಂಭಿಸುತ್ತಾರೆ. ಇನ್ನು ಇವರೆಲ್ಲರಲ್ಲಿ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಎಂದು ಅನಿಸಿಕೊಂಡಿದ್ದು ಚಾರು ತಮ್ಮನ ಪಾತ್ರವನ್ನು ವಹಿಸಿರುವ ಚಿಂಟು ಎನ್ನುವ ಹುಡುಗ. ಅನಾಥ ಮಗುವನ್ನು ತನ್ನ ಸ್ವಂತ ತಮ್ಮನ ಸಾಕಿರುವ ಚಾರುವನ್ನು ನೋಡಿ ಪ್ರತಿಯೊಬ್ಬ ವೀಕ್ಷಕರು ಕೂಡ ಗ್ರೇಟ್ ಎಂದು ಅನಿಸಿಕೊಂಡಿದ್ದಂತೂ ಸುಳ್ಳಲ್ಲ.

ನೀವು ಸರಿಯಾಗಿ ಗಮನಿಸಿದರೆ ನಮ್ಮ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಕಾಲದಲ್ಲಿ ಬಾಲನಟರು ಎಂದರೆ ಎಲ್ಲಿಲ್ಲದ ಜನಪ್ರಿಯತೆ ಇತ್ತು. ಉದಾಹರಣೆಗೆ ಮಾಸ್ಟರ್ ಆನಂದ್ ಮಾಸ್ಟರ್ ಮಂಜುನಾಥ್ ಹೀಗೆ ಹಲವಾರು ಕಲಾವಿದರು ಸಿಗುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ರಾಮಾಚಾರಿ ಧಾರವಾಹಿಯ ಚಿಂಟು ವಿನ ನಟನೆಗೆ ಎಲ್ಲಾ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಚಿಂಟು ಪಾತ್ರದ ಮನೋಜ್ಞ ನಟನೆಗೆ ಎಲ್ಲರೂ ಕೂಡ ಮಾರುಹೋಗಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹಾಗಿದ್ದರೆ ಈ ಹುಡುಗ ಯಾರು ಎನ್ನುವುದರ ಕುರಿತಂತೆ ಎಲ್ಲರಲ್ಲೂ ಕುತೂಹಲ ಮೂಡುವುದಂತೂ ಸರ್ವೇಸಾಮಾನ್ಯವಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಬಾಲನಟರು ಒಂದೆರಡು ಸಿನಿಮಾಗಳಿಗೆ ಸೀಮಿತವಾಗಿ ಬಿಡುತ್ತಿದ್ದಾರೆ. ಮೊದಲಿನ ಕಾಲದ ಹಾಗೆಯೇ ಯಾರು ಕೂಡ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುತ್ತಿಲ್ಲ. ಮೊದಲಿನ ಕಾಲದಲ್ಲಿ ತೆಗೆದುಕೊಂಡರೆ ಬೇಬಿ ಶ್ಯಾಮಿಲಿ ಸ್ಟಾರ್ ನಟರಿಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯಾವಸ್ಥೆಯ ಪಾತ್ರವನ್ನು ನಟಿಸಿರುವ ಬಾಲನಟ ಕೂಡ ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದನ್ನು ನಾವು ಇಲ್ಲಿ ನೋಡಬಹುದಾಗಿದೆ.

ಇದೇ ರೀತಿ ಇಂದು ನಾವು ಮಾತನಾಡಲು ಹೊರಟಿರುವ ಚಿಂಟು ಪಾತ್ರಧಾರಿಯೂ ಕೂಡ ಹಲವಾರು ಸಿನಿಮಾಗಳಲ್ಲಿ ಮತ್ತು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು ಈತನ ನಿಜವಾದ ಹೆಸರು ಆರ್ಯ ವಿನೋದ್ ಎನ್ನುವುದಾಗಿ. ಈತ ಈಗಾಗಲೇ ಹತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ ಬಿಗಿಲ್ ನಲ್ಲಿ ಕೂಡ ಈತ ಕಾಣಿಸಿಕೊಂಡಿದ್ದಾನೆ. ಕಿರುತೆರೆಯ ಇನ್ನೊಂದು ಜನಪ್ರಿಯ ಧಾರವಾಹಿ ಆಗಿರುವ ಸತ್ಯ ಧಾರವಾಹಿಯಲ್ಲಿ ಕೂಡ ಈತ ಕಾಣಿಸಿಕೊಂಡಿದ್ದಾನೆ.

ಈತನ ಜನಪ್ರಿಯತೆ ಎನ್ನುವುದು ಎಷ್ಟರ ಮಟ್ಟಿಗೆ ಹರಡಿದೆ ಎಂದರೆ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್ ಚಾಪ್ಟರ್ 2ರಲ್ಲಿ ಕೂಡ ನಿರ್ದೇಶಕ ಪ್ರಶಾಂತ್ ನೀಲ್ ಇವನಿಗೆ ಅವಕಾಶವನ್ನು ನೀಡಿದ್ದಾರೆ. ಸದ್ಯಕ್ಕೆ ಆರ್ಯ ವಿನೋದ್ ರಾಮಾಚಾರಿ ಧಾರವಾಹಿಯ ಚಿಂಟು ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದು ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆಯುತ್ತಿದ್ದಾನೆ. ಇದೇ ರೀತಿ ಇವನ ಸಿನಿಮಾ ಹಾಗೂ ಕಿರುತೆರೆಯ ಜರ್ನಿ ಮುಂದುವರಿಯಲಿ ಹಾಗೂ ಉತ್ತಮ ಅವಕಾಶಗಳು ಈತನನ್ನು ಹುಡುಕಿಕೊಂಡು ಬರಲಿ ಎಂದು ಹಾರೈಸೋಣ. ಚಿಂಟು ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.