ಪುಟ್ಟಕ್ಕನ ಅಸಲಿ ಕಥೆ ಈಗ ಶುರು, ಟಾಪ್ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್, ಅಭಿಮಾನಿಗಳಿಗೆ ಮನರಂಜನೆಯ ರಸದೌತಣ, ನಡೆಯುತ್ತಿರುವುದಾದರೂ ಏನು ಗೊತ್ತೇ??

604

ನಮಸ್ಕಾರ ಸ್ನೇಹಿತರೇ ನಿರ್ದೇಶಕ ಆರೂರು ಜಗದೀಶ್ ಅವರ ನಿರ್ದೇಶನದ ಧಾರಾವಾಹಿ ಎಂದರೆ ಒಂದು ರೇಂಜಿಗೆ ನಿರೀಕ್ಷೆಯನ್ನು ಇದುವರೆಗೂ ನಿರ್ದೇಶಕ ಆರೂರು ಜಗದೀಶ್ ಅವರು ಧಾರಾವಾಹಿಯಲ್ಲಿಯೂ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಯಾವುದೇ ಧಾರಾವಾಹಿಗಳನ್ನು ನೋಡಿ ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲದ ರೀತಿಯಲ್ಲಿ ಚಿತ್ರೀಕರಣ ನಡೆಸುತ್ತಾರೆ. ಮನೆಯಲ್ಲಿ ನಡೆಯುವ ಶುಭಸಮಾರಂಭಗಳು ಇರಬಹುದು, ಮದುವೆ ಇರಬಹುದು ಅಥವಾ ಇನ್ಯಾವುದೇ ವಿಶೇಷ ಇವೆಂಟ್ ಇರಬಹುದು ಅವುಗಳನ್ನು ಅತ್ಯಂತ ಅದ್ದೂರಿಯಾಗಿ ಚಿತ್ರೀಕರಿಸಿ ವೀಕ್ಷಕರ ಮುಂದೆ ಇಡಲಾಗುತ್ತದೆ. ಹಾಗೆ ಹೊಸದಾದ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರತಿದಿನ ಹೊಸ ಹೊಸ ತಿರುವುಗಳನ್ನು ನೀಡುತ್ತಿದ್ದು, ಇದೀಗ ತನ್ನ ಮನೆ ಹಾಗೂ ಮೆಸ್ ನ್ನು ಪುಟ್ಟಕ್ಕ ಹೇಗೆ ಉಳಿಸಿಕೊಳ್ಳುತ್ತಾರೆ ಎನ್ನುವುದು ಜನರಿಗೆ ಕುತೂಹಲ ಹುಟ್ಟುಹಾಕಿದೆ. ಹೌದು ರಾಜೇಶ್ವರಿ ಪುಟ್ಟಕ್ಕನ ಮೆಸ್ ಹಾಗೂ ಮನೆಯನ್ನು ವಶಪಡಿಸಿಕೊಳ್ಳಲು ಬಂಗಾರಮ್ಮ ನ ಮೊರೆಹೋಗಿದ್ದು ಗೊತ್ತೆಇದೆ. ಇದೀಗ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಂಗಾರಮ್ಮ ಪಂಚಾಯಿತಿಯನ್ನು ಕರೆದಿದ್ದಾರೆ.

ಪಂಚಾಯಿತಿಯಲ್ಲಿ ಎಲ್ಲಿ ತನ್ನ ಮನೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುವುದೋ ಇಂದು ಪುಟ್ಟಕ್ಕ ತನ್ನ ಪತಿಯ ಬಳಿ ಇಂತಹ ಮೋಸವನ್ನು ಮಾಡಬೇಡಿ ಈ ಮನೆ ನಮಗೆ ಸೇರಬೇಕಾಗಿತ್ತು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾರೆ. ಈ ನಡುವೆ ಹಣವನ್ನು ಕದ್ದಿರುವ ಕಳ್ಳನನ್ನು ಕಂಡು ಪುಟ್ಟಕ್ಕ ಆತನ ಹಿಂದೆ ಓಡುವಾಗ ಅಪಘಾತವಾಗಿ, ಆಕೆಯನ್ನು ಮುರಳಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಮುರುಳಿ ಸಹನಾಳನ್ನು ಪ್ರೀತಿಸುತ್ತಿದ್ದರು ಹೇಳಿಕೊಳ್ಳುವ ಧೈರ್ಯವಿಲ್ಲದೆ ಒಳಗೊಳಗೆ ಕೊರಗುತ್ತಿದ್ದಾನೆ. ಇನ್ನು ಬಂಗಾರಮ್ಮ ನ ಪಂಚಾಯಿತಿ ತೀರ್ಪು ಹಾಗೂ ಈ ಸಂದರ್ಭದಲ್ಲಿ ಪುಟ್ಟನಿಗೆ ಅಗತ್ಯವಿರುವ ಹಣವನ್ನು ಕಂಠಿ ತಂದುಕೊಡುತ್ತಾನಾ ಎಂಬುದನ್ನು ತಿಳಿದುಕೊಳ್ಳಲು ನೀವು ನಾಳಿನ ಎಪಿಸೋಡನ್ನೇ ನೋಡಬೇಕು.