ಕರೀನಾ ಕಪೂರ್ ಹೊಸ ಫೋಟೋದಲ್ಲಿ ಧರಿಸಿರುವ ಬಟ್ಟೆಯ ಬೆಲೆ ಎಷ್ಟು ಗೊತ್ತೇ, ಇದನ್ನು ಕೇಳಿ ಫ್ಯಾನ್ಸ್ ಏನಂದ್ರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ಯುವ ಉದಯೋನ್ಮುಖ ನಟಿಯರು ಇದ್ದಾರೆ. ಆದರೆ ಅವರೆಲ್ಲರನ್ನೂ ಮೀರಿಸುವಂತೆ ಹಲವಾರು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಕರೀನಾ ಕಪೂರ್ ಅವರು ಇಂದಿಗೂ ಕೂಡ ಯಾವ ನಟಿಗೂ ಕಡಿಮೆ ಇಲ್ಲದಂತೆ ಸ್ಟೈಲಿಶ್ ಆಗಿರುತ್ತಾರೆ. ನಿಜಕ್ಕೂ ಕೂಡ ಕರೀನಾ ಕಪೂರ್ ಅವರನ್ನು ನೋಡಿದರೆ ಎರಡು ಮಕ್ಕಳ ತಾಯಿ ಎಂದು ಲೆಕ್ಕ ಹಾಕುವುದು ಕೂಡ ಕಷ್ಟವಾಗಿರುತ್ತದೆ. ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರತಿಯೊಂದು ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಿರ್ದೇಶಕ ಹಾಗೂ ನಿರ್ಮಾಪಕರು ಕರೀನಾ ಕಪೂರ್ ಅವರನ್ನು ಆಯ್ಕೆ ಮಾಡುತ್ತಿದ್ದರು.
2015 ರ ನಂತರ ಕ್ರಮೇಣವಾಗಿ ಚಿತ್ರರಂಗದಿಂದ ವಿರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಸಿನಿಮಾ ಚಿತ್ರೀಕರಣ ಜಾಹಿರಾತು ಚಿತ್ರೀಕರಣ ಮಾತ್ರವಲ್ಲದೆ ತಾಯಿಯಾಗಿ ತಮ್ಮ ಮಕ್ಕಳು ಹಾಗೂ ಫ್ಯಾಮಿಲಿಗೆ ಸಮಯ ನೀಡುವುದು ಕೂಡ ಕರೀನಾ ಕಪೂರ್ ಅವರಿಗೆ ಪ್ರಮುಖವಾದಂತಹ ವಿಚಾರವಾಗಿದೆ. ಆದರೂ ಕೂಡ ಆಗೊಮ್ಮೆ-ಈಗೊಮ್ಮೆ ಹೊರದೇಶಗಳಿಗೆ ಪ್ರವಾಸಕ್ಕೆ ಹೋಗಿ ಬರುವುದು ಕರೀನಾ ಕಪೂರ್ ಅವರಿಗೆ ಇಷ್ಟ ವಾಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಕರೀನಾ ಕಪೂರ್ ಅವರು ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚಿಗಷ್ಟೇ ಅವರು ಧರಿಸಿರುವ ಬಟ್ಟೆಯ ಬೆಲೆಯನ್ನು ಕೇಳಿ ಅಭಿಮಾನಿಗಳು ಏನು ಹೇಳಿದ್ದಾರೆ ಗೊತ್ತಾ ಬನ್ನಿ ತಿಳಿಯೋಣ.

ಹೌದು ಇತ್ತೀಚಿಗಷ್ಟೇ ಕರೀನಾ ಕಪೂರ್ ಅವರು ಹಳದಿ ಬಣ್ಣದ 2 ಪೀಸ್ ಬಟ್ಟೆಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಈ ಫೋಟೋವನ್ನು ಅವರ ಸ್ಟೈಲಿಸ್ಟ್ ಆಗಿರುವ ಲಕ್ಷ್ಮಿ ಲೆಹ್ರ್ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನೋಡೋಕೆ ಸಿಂಪಲ್ ಆಗಿದ್ದರೂ ಕೂಡ ಈ ಬಟ್ಟೆಯ ಬೆಲೆ ಕೇಳಿದರೆ ನೀವು ಕೂಡ ತಲೆತಿರುಗಿ ಬೀಳ್ತಿರಾ. ಹೌದು ಈ ಬಟ್ಟೆಯ ಬೆಲೆ ಬರೋಬ್ಬರಿ 1.20 ಲಕ್ಷ ರೂಪಾಯಿ. ಇಷ್ಟಕ್ಕೂ ಇದನ್ನು ನೋಡಿರುವ ಅಭಿಮಾನಿಗಳು ಇದಕ್ಕೆ ಆಕೆ ಅಷ್ಟೊಂದು ಬೆಲೆ ನೋಡೋಕೆ ಚೆನ್ನಾಗಿ ಕೂಡ ಇಲ್ಲ ಎನ್ನುವುದಾಗಿ ಟೀಕಿಸಿದ್ದಾರೆ. ಆದರೆ ಸೆಲೆಬ್ರಿಟಿಗಳಿಗೆ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುವುದು ಪ್ರೆಸ್ಟೀಜ್ ವಿಚಾರವಾಗಿದ್ದು ಇದು ಕೂಡ ಇಲ್ಲಿ ಎದ್ದು ಕಾಣುತ್ತಿದೆ.