ಮದುವೆಯಾಗುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೊಂದು ಶಾಕ್, ಕನ್ನಡತಿ ಯಲ್ಲಿ ಮತ್ತೊಂದು ಟ್ವಿಸ್ಟ್, ಅಸಲಿಗೆ ನಡೆದ್ದಡೇನು ಗೊತ್ತೇ??

382

ನಮಸ್ಕಾರ ಸ್ನೇಹಿತರೇ, ಕನ್ನಡದ ಧಾರಾವಾಹಿ ಪ್ರತಿ ಎಪಿಸೋಡ್ ನಲ್ಲಿ ಹೊಸ ಹೊಸ ತಿರುವುಗಳನ್ನು ಕೊಡುತ್ತಾ ಜನರನ್ನು ರಂಜಿಸುತ್ತಿದೆ. ಕನ್ನಡದ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುಂದಿನ ಕಥೆ ಏನು ಎಂಬುದನ್ನು ನೋಡುತ್ತಾರೆ. ಜನರ ನಿರೀಕ್ಷೆಯನ್ನು ಹುಸಿ ಮಾಡಿದಹಾಗೆ ಕನ್ನಡತಿ ಧಾರಾವಾಹಿಯಲ್ಲಿ ಪ್ರತಿಯೊಂದು ಸನ್ನಿವೇಶವನ್ನು ಅತ್ಯಂತ ನಾಜೂಕಾಗಿ ಹೆಣೆದಿದ್ದಾರೆ ನಿರ್ದೇಶಕರು.

ಇವರ ಕನ್ನಡತಿಯ ಕಥೆ ಬೆಂಗಳೂರಿನಲ್ಲಿಲ್ಲ ಬದಲಿಗೆ ಹಸಿರು ಪೇಟೆಯಲ್ಲಿದೆ. ಒಳ್ಳೆಯದು ಕೆಟ್ಟದ್ದು ಎಲ್ಲವೂ ಹಸಿರು ಪೇಟೆಯನ್ನು ಸೇರಿಕೊಂಡಿದೆ. ಹೌದು ಭೂಮಿ ಬಿಂದು ಮದುವೆ ಮಾಡಿಸಲು ಹೆಸರು ಪೇಟೆಗೆ ಬಂದಿದ್ದಾಳೆ. ಬಿಂದು ಮದುವೇನು ಸೆಟಲ್ ಆಯ್ತು. ಆದರೆ ಇದೀಗ ಭೂಮಿಯೆ ಪ್ರೀತಿಗೆ ಕಂಟಕ ಬಂದಿದೆ. ಕಜ್ಜಿ ಮಂಡಿ ಸಾಹುಕಾರನ ಜೊತೆ ಮದುವೆ ಮಾಡಿ ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಇಂದು ಪ್ಲಾನ್ ಮಾಡುತ್ತಿದ್ದರೆ, ಅತ್ತ ಭೂಮಿಯ ಮೇಲೆ ಇನ್ನಿಲ್ಲದಷ್ಟು ಸಿಟ್ಟನ್ನು ಹೊತ್ತ ವರುಧಿನಿ ಕೂಡ ಭೂಮಿಯ ಮನೆಗೆ ಬಂದಿದ್ದಾಳೆ.

ಈ ನಡುವೆ ಹರ್ಷ ಮತ್ತು ಅಮ್ಮಮ್ಮ ಕೂಡ ಹಸಿರುಪೇಟೆ ಗೆ ಬಂದಿದ್ದು ಇನ್ನೇನು ಮನೆಗೆ ಹೆಣ್ಣು ಕೇಳುಲು ಬರುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಭೂಮಿ ಮಾತ್ರ ವರುಧಿನಿಯ ವಿಚಿತ್ರ ಸ್ವಭಾವಕ್ಕೆ ತಲೆಕೆಡಿಸಿಕೊಂಡಿದ್ದಾಳೆ. ಇನ್ನು ಮುಂದಿನ ಸಂಚಿಕೆಯಲ್ಲಿ ಭೂಮಿಯನ್ನು ವರು ಪ್ರಶ್ನಿಸುವ, ವಿಚಿತ್ರವಾಗಿ ನಡೆದುಕೊಳ್ಳುವ ಸನ್ನಿವೇಶಗಳ ತುಣುಕುಗಳು ಈಗಾಗಲೇ ಟೀ ಟಿವಿಯಲ್ಲಿ ಪ್ರಸಾರವಾಗಿದ್ದು ಜನರು ಉಸಿರುಬಿಗಿಹಿಡಿದುಕೊಂಡು ಈ ಎಪಿಸೋಡ್ ಗಳಿಗಾಗಿ ಕಾಯುತ್ತಿದ್ದಾರೆ. ‘ಪ್ರೀತಿಯಲ್ಲಿ ಇಷ್ಟುದೂರ ಬಂದಾಗಿದೆ ಎಂದೂ ಹಿಂತಿರುಗಿ ನೋಡುವ ಮಾತೇ ಇಲ್ಲ’ ಎನ್ನುವ ಮಾತನ್ನು ಭುವಿ ಬಿಂದುವಿಗೆ ಹೇಳಿದ್ದು, ಅವಳ ಪ್ರೀತಿಯನ್ನು ಹೇಗೆ ಗೆಲ್ಲುತ್ತಾಳೆ ಎಂಬುದೇ ಇನ್ನಿರುವ ಟ್ವಿಸ್ಟ್!