ಕಷ್ಟದಲ್ಲಿರುವವರಿಗೆ ಹೊಸ ಸಂದೇಶ ಕಳುಹಿಸಿದ ರಶ್ಮಿಕಾ, ನೀವು ಕಷ್ಟದ ಸಮಯ ಹೊಂದಿದ್ದರೇ ರಶ್ಮಿಕಾ ರವರ ಮಾತು ಕೇಳಿ, ಹೇಳಿದ್ದೇನು ಗೊತ್ತೇ??

121

ನಮಸ್ಕಾರ ಸ್ನೇಹಿತರೇ, ನಟಿ ರಶ್ಮಿಕಾ ಮಂದಣ್ಣ ತಮಿಳು ತೆಲುಗು ಕನ್ನಡ ಮಾತ್ರವಲ್ಲ ಹಿಂದಿ ಚಿತ್ರರಂಗದಲ್ಲಿ ಕೂಡ ಫೇಮಸ್ ಆಗುತ್ತಿರುವ ನಟಿ. ಈ ಉದಯೋನ್ಮುಖ ಕಲಾವಿದೆ ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲಿಲ್ಲದ ಬೇಡಿಕೆ. ಸದ್ಯ ಸಕ್ಕತ್ ಬ್ಯುಸಿಯಾಗಿರುವ ರಶ್ಮಿಕ ಮಂದಣ್ಣ ತನ್ನ ಅಭಿಮಾನಿಗಳಿಗೆ ಅದರಲ್ಲೂ ಕಷ್ಟದ ಸಮಯವನ್ನು ಎದುರಿಸುತ್ತಿರುವವರಿಗೆ ಪ್ರೀತಿಯ ಸಂದೇಶವೊಂದನ್ನು ಕಳುಹಿಸಿದ್ದಾರೆ.

ಹೌದು, ನಟಿ ರಶ್ಮಿಕ ಮಂದಣ್ಣ ಸಿನಿಮಾರಂಗದ ಜೊತೆ ಜೊತೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದ್ಯ ಟಾಲಿವುಡ್ ನ ಕ್ರಶ್ ಎನಿಸಿರುವ ರಶ್ಮಿಕಾ ಒಂದಲ್ಲಾ ಒಂದು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ಈ ಜಗತ್ತು ನಿಮ್ಮಿಂದಾಗಿ ಇನ್ನೂ ಉತ್ತಮ ಎನಿಸಿದೆ. ಅಂದರೆ ನಿಮ್ಮೆಲ್ಲರಿಂದ ನಾನು. ನೀವು ನನ್ನನ್ನು ಸಾಕಷ್ಟು ಸಂತೋಷಗೊಳಿಸಿದ್ದೀರಿ ಅಲ್ಲದೇ ನಿಮ್ಮಲ್ಲಿ ಪ್ರತಿಯೊಬ್ಬರು ನನಗೆ ಮುಖ್ಯ’ ಎಂದಿದ್ದಾರೆ ರಶ್ಮಿಕ.

ಮುಂದುವರಿಸಿದ ರಶ್ಮಿಕ, ‘ಆದ್ದರಿಂದ, ನಿಮ್ಮಲ್ಲಿ ಯಾರಿಗಾದರೂ ಇಂದು ಕಷ್ಟ ನೋವು ಅಥವಾ ಅಸಹನೀಯ ಪರಿಸ್ಥಿತಿ ಎದುರಿಸುತ್ತಿದ್ದರೆ, ನಿಮ್ಮ ಭಾವನೆಗಳು ಹೇಗಿರುತ್ತೆ ಎಂದು ನನಗೆ ಅರ್ಥವಾಗುತ್ತದೆ. ಆದ್ದರಿಂದ, ಇಂದು ನಾನು ನಿಮಗೆ ನನ್ನ ಪ್ರೀತಿ ಮತ್ತು ಶಕ್ತಿಯನ್ನು ಕಳುಹಿಸುತ್ತಿದ್ದೇನೆ ಎಂದು ತಿಳಿಯಿರಿ. ಒಂದು ಹೆಜ್ಜೆ ಸರಿಯಾಗಿಡಿ. ನೀವು ಖಂಡಿತವಾಗಿಯೂ ಚೆನ್ನಾಗಿ ಇರುತ್ತೀರಿ. ಜೊತೆಗೆ ಇದನ್ನು ನಿಮಗೆ ನೀವೇ ಹೇಳಿಕೊಳ್ಳಿ, ಈ ಸಮಯ ಕಳೆದು ಹೋಗುತ್ತದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ’. ಈ ರೀತಿ ರಶ್ಮಿಕ ಮಂದಣ್ಣ ಜನತೆಗೆ ಸಾಂತ್ವನವನ್ನು ಹೇಳುವಂತಹ ಸಂದೇಶವನ್ನು ಕಳುಹಿಸಿದ್ದು ಸಾಕಷ್ಟು ಜನರಿಗೆ ಸಂತೋಷವನ್ನು ಕೊಟ್ಟಿದೆ. ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ತೆರೆಕಂಡ ಪುಷ್ಪ ಚಿತ್ರದ ಮೂಲಕ ಇನ್ನಷ್ಟು ಹೆಚ್ಚಿನ ನಟಿಸಿದ್ದಾರೆ. ಹಾಗಾಗಿ ಸಿನಿಮಾ ಆಫರ್ ಗಳು ಕೂಡ ಅವರನ್ನು ಅರಸಿ ಬರುತ್ತಿವೆ.