ಖ್ಯಾತ ನಟ ಚಂದು ಗೌಡ ರವರ ಮನೆಗೆ ಬಂತು ದುಬಾರಿ ಬೆಲೆಯ ಸೂಪರ್ ಬೈಕ್, ಬೈಕ್ ಬೆಲೆ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??

152

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಂಭಾವನೆ ಹಾಗೂ ಜನಪ್ರಿಯತೆ ವಿಚಾರದಲ್ಲಿ ಕನ್ನಡ ಚಿತ್ರರಂಗದ ನಟರಷ್ಟೇ ಕಿರುತೆರೆಯ ನಟ ನಟಿಯರು ಕೂಡ ಸರಿ ಸಮಾನರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇತ್ತೀಚಿಗೆ ಜನರು ಸಿನಿಮಾದಷ್ಟೇ ಅಥವಾ ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆ ಧಾರವಾಹಿಗಳನ್ನು ನೋಡಲು ಇಷ್ಟಪಡುತ್ತಿದ್ದಾರೆ ಎನ್ನುವುದು ಗೊತ್ತಿರದ ವಿಚಾರವೇನಲ್ಲ.

ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಕಿರುತೆರೆ ಹಾಗೂ ಪರಭಾಷೆಗಳಲ್ಲಿ ಕೂಡಾ ನಟಿಸಿರುವ ಕಿರುತೆರೆಯ ಖ್ಯಾತ ನಟ ಚಂದು ಗೌಡರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಲಕ್ಷ್ಮೀ ಬಾರಮ್ಮ ಸೇರಿದಂತೆ ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲಿ ನಟಿಸಿರುವ ಚಂದು ಗೌಡ ರವರು ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ನಟರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಇನ್ನು ಸೆಲೆಬ್ರಿಟಿಗಳು ಎಂದ ಮೇಲೆ ದುಬಾರಿ ವಸ್ತುಗಳನ್ನು ಖರೀದಿಸುವುದು ಕಾಮನ್. ಇದೇ ರೀತಿಯಲ್ಲಿ ನಮ್ಮೆಲ್ಲರ ನೆಚ್ಚಿನ ಚಂದು ಗೌಡ ರವರು ಕೂಡ ಇತ್ತೀಚಿಗಷ್ಟೇ ದುಬಾರಿ ಬೆಲೆಯ ಬೈಕೊಂದನ್ನು ಖರೀದಿಸಿದ್ದಾರೆ.

ತಮ್ಮ ನೆಚ್ಚಿನ ನಟ ಪರಿಶ್ರಮಪಟ್ಟು ತಮ್ಮ ಕನಸಿನ ದುಬಾರಿ ಬೈಕ್ ಅನ್ನು ಖರೀದಿಸಿ ರುವುದನ್ನು ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. ಹಾಗಿದ್ದರೆ ನಟ ಚಂದು ಗೌಡ ರವರು ಖರೀದಿಸಿರುವ ಬೈಕ್ ಯಾವುದು ಹಾಗೂ ಅದರ ಬೆಲೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಚಂದು ಗೌಡರವರು ಖರೀದಿಸಿರುವುದು ಹಯಾಬುಸಾ ಸಂಸ್ಥೆಯ ದುಬಾರಿ ಬೆಲೆಯ ಬೈಕ್. ಸುಜುಕಿ ಸಂಸ್ಥೆಯ ಹಯಾಬುಸಾ ಫಾಲ್ಕನ್ ರಿಬಾರ್ನ್ ಸೂಪರ್ ಬೈಕ್ ಇದಾಗಿದ್ದು ಕಾಪು ಹಾಗೂ ಕೇಸರಿ ಬಣ್ಣದ ಕಾಂಬಿನೇಷನ್ನಲ್ಲಿ ಮಿಂಚುತ್ತಿದೆ. 300 ಕಿಲೋಮೀಟರ್ ಸ್ಪೀಡಿನಲ್ಲಿ ಕೂಡ ಓಡಿಸಬಹುದಾದಂತಹ ಸೂಪರ್ ಬೈಕ್ ಇದಾಗಿದೆ. ತನ್ನ ಸಹೋದರಿ ಹಾಗೂ ಪತ್ನಿಯ ಜೊತೆಗೆ ಈ ಬೈಕ್ ಮೇಲೆ ಕುಳಿತು ಕೊಂಡಿರುವ ಫೋಟೋವನ್ನು ಚಂದು ಗೌಡರವರು ಅಪ್ಲೋಡ್ ಮಾಡಿದ್ದು ಈ ಬೈಕ್ ಬೆಲೆ ಬರೋಬ್ಬರಿ 15 ಲಕ್ಷ ರೂಪಾಯಿ.