ಜಿಯೋ ಗೆ ಮತ್ತೊಂದು ಶಾಕ್ ನೀಡಿದ ಏರ್ಟೆಲ್, ವರ್ಷಕ್ಕೆ ಒಂದೇ ಬಾರಿಗೆ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಬಿಡುಗಡೆ. ಎಷ್ಟೆಲ್ಲಾ ಲಾಭ ಗೊತ್ತೇ??

36

ನಮಸ್ಕಾರ ಸ್ನೇಹಿತರೇ, ಮೊಬೈಲ್ ರಿಚಾರ್ಜ್ ಅನ್ನು ಪ್ರತಿ ತಿಂಗಳು ಮಾಡಿಸುವುದು ಎಂದರೆ ಕೆಲವೊಮ್ಮೆ ತಲೆನೋವು. ಯಾಕಂದ್ರೆ ಈ ತಿಂಗಳ ಪ್ಲಾನ್ ಗ ಮೊತ್ತ ಆಗಾಗ ಬದಲಾಗುತ್ತಿರುತ್ತದೆ. ಹಾಗಾಗಿ ಪ್ರತಿಬಾರಿ ರಿಚಾರ್ಜ್ ಮಾಡುವಾಗಲೂ ಆಫರ್ ಗಳನ್ನು ಹುಡುಕಬೇಕಾಗುತ್ತದೆ. ಅದರ ಬದಲು ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು ಇದ್ದರೆ ಒಳ್ಳೆಯದಲ್ಲವೇ! ಹಾಗಾಗಿ ಭಾರ್ತಿ ಏರ್ಟೆಲ್ ವರ್ಷದ ವ್ಯಾಲಿಡಿಟಿಯ ರೀಚಾರ್ಜ್ ಪ್ಲ್ಯಾನ್ ಗಳನ್ನು ಪರಿಚಯಿಸಿದೆ.

ಈ ಪ್ಲ್ಯಾನ್ ನಲ್ಲಿ ಒಮ್ಮೆ ರಿಚಾರ್ಜ್ ಮಾಡಿಸಿದರೆ ಸಾಕು ಮತ್ತೆ ವರ್ಷವಿಡೀ ರಿಚಾರ್ಜ್ ಗೋಜಿಗೆ ಹೋಗಬೇಕಾಗಿಲ್ಲ. ಜೊತೆಗೆ ಇದರಲ್ಲಿ ರಿಚಾರ್ಜ್ ನ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಬನ್ನಿ ಈ ವಾರ್ಷಿಕ ರೀಚಾರ್ಜ್ ಬಗ್ಗೆ ಇನ್ನಷ್ಟು ಮಾಹಿತಿಗಳಾನ್ನು ತಿಳಿಸಿಕೊಡ್ತೀವಿ. ಏರ್ಟೆಲ್ ನಲ್ಲಿ ತಿಂಗಳ ರೀಚಾರ್ಜ್ ನಿಂದ ವಾರ್ಷಿಕ ವ್ಯಾಲಿಡಿಟಿ ಹೊಂದಿರುವ ಪ್ಲ್ಯಾನ್ ಗಳೂ ಲಭ್ಯ. ಅವುಗಳಲ್ಲಿ ಇಂದು 2,999 ರೂ ಮತ್ತು 3,359 ರೂ ಯೋಜನೆ ಬಗ್ಗೆ ನೋಡೋಣ. ಈ ಯೋಜನೆಗಳು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ 2,999 ಪ್ಲಾನ್ ಅಡಿಯಲ್ಲಿ, ಗ್ರಾಹಕರಿಗೆ ದೇಶಾದ್ಯಂತ ಎಲ್ಲಾ ನೆಟ್ವರ್ಕ್ಗಳಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2ಜಿಬಿ ಡೇಟಾ ಮತ್ತು ದಿನಕ್ಕೆ 100 ಎಸ್ ಎಂ ಎಸ್ ನ ಪ್ರಯೋಜನವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಈ ಯೋಜನೆಯಲ್ಲಿನ ಹೆಚ್ಚುವರಿ ಪ್ರಯೋಜನಗಳೆಂದರೆ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಉಚಿತ ಪ್ರಯೋಗ, ಶಾ ಅಕಾಡೆಮಿಯಲ್ಲಿ ಆನ್ಲೈನ್ ಕೋರ್ಸ್, ಫಾಸ್ಟ್ಯಾಗ್ ನಲ್ಲಿ ರೂ 100 ಕ್ಯಾಶ್ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆಗಳ ಸೌಲಭ್ಯಗಳನ್ನು ನೀಡುತ್ತದೆ.

ಮೊದಲು ಈ ಯೋಜನೆಯು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಸದಸ್ಯತ್ವವನ್ನು ನೀಡುತ್ತಿರಲಿಲ್ಲ. ಆದರೆ ಇದೀಗ ರೂ 2,999 ಮತ್ತು ರೂ 3,359 ಈ ಎರಡೂ ಯೋಜನೆಗಳು ಉಚಿತ ಡಿಸ್ನಿ + ಹಾಟ್ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತವೆ. ರೂ 3,359 ಯೋಜನೆಯಲ್ಲಿ ನಿಮಗೆ ಉಚಿತ ಧ್ವನಿ ಕರೆಗಳು, ದಿನಕ್ಕೆ 2 ಜಿಬಿ ಡೇಟಾ ಮತ್ತು ದಿನಕ್ಕೆ 100 ಉಚಿತ ಎಸ್ ಎಂ ಎಸ್ ಗಳನ್ನು ನೀಡುತ್ತದೆ. ಉಳಿದಂತೆ ಂಎಲಿನ ಯೋಜನೆಯ ಎಲ್ಲಾ ಸೌಲಭ್ಯಗಳನ್ನೂ ಈ ಯೋಜನೆಯೂ ಒಳಗೊಂಡಿದೆ. ಆದ್ದರಿಂದ ಈ ಎರಡು ಯೋಜನೆಗಳಲ್ಲಿ ನೀವು ರೂ 3,359 ಬದಲಿಗೆ ರೂ 2,999 ಯೋಜನೆಯನ್ನು ಖರೀದಿಸಿ ರೂ 360 ಉಳಿಸಬಹುದು. ಆದಾಗ್ಯೂ ನಿಮ್ಮ ಅಗತ್ಯಕ್ಕೆ ತಕ್ಕ ಯೋಜನೆಯನ್ನು ಆಯ್ದುಕೊಳ್ಳಬಹುದು.