ಯಾರೇ ಬರಲಿ ಯಾರೇ ಇರಲಿ ಇವರೇ ಟಾಪ್, ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಬರೆದ ಅಪ್ಪು. ಏನು ಗೊತ್ತೇ??

217

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರದ ಬಿಡುಗಡೆ ದಿನಾಂಕ ಇನ್ನೇನು ಹತ್ತಿರ ಬರುತ್ತಿದೆ. ಈಗಾಗಲೇ ಜೇಮ್ಸ್ ಚಿತ್ರದ ಅದ್ದೂರಿ ಬಿಡುಗಡೆಗಾಗಿ ತಯಾರಿಗಳು ನಡೆಯುತ್ತಿವೆ. ನಾಟ್ಯ ಸಾರ್ವಭೌಮ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಎಲ್ಲರೂ ಕೂಡ ಕಾತುರರಾಗಿದ್ದಾರೆ. ಇಡೀ ವಿಶ್ವಾದ್ಯಂತ ನಾಲ್ಕು ಸಾವಿರಕ್ಕೂ ಅಧಿಕ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಹೊರಬಿದ್ದಿವೆ.

ಕರ್ನಾಟಕದಲ್ಲಿ 400ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಅದ್ದೂರಿ ತೆರೆಕಾಣಲಿದೆ. ಇಷ್ಟು ಮಾತ್ರವಲ್ಲದೆ ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಡ ಜೇಮ್ಸ್ ಅಬ್ಬರಿಸಲಿದ್ದಾನೆ. ಅಭಿಮಾನಿಗಳು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಆರಾಧ್ಯ ದೈವನ ಕೊನೆಯ ಸಿನಿಮಾವನ್ನು ಸೆಲಬ್ರೇಷನ್ ಮಾಡಲು ಸಜ್ಜಾಗಿ ನಿಂತಿದ್ದಾರೆ.

ಬಿಡುಗಡೆಗೂ ಮುನ್ನವೇ ಜೇಮ್ಸ್ ಚಿತ್ರ ಈಗಾಗಲೇ ಹಲವಾರು ದಾಖಲೆಗಳನ್ನು ಕೂಡ ಮುರಿದು ಹೊಸ ದಾಖಲೆ ನಿರ್ಮಿಸಿದೆ. ಅದರಲ್ಲೂ ಇದೊಂದು ದಾಖಲೆ ವಿಭಿನ್ನವಾಗಿದ್ದು ಜೇಮ್ಸ್ ಚಿತ್ರದ ಕ್ರೇಜ್ ಗೆ ಇರುವಂತಹ ಜೀವಂತ ಉದಾಹರಣೆ ಎಂದು ಹೇಳಬಹುದಾಗಿದೆ. ಪುನೀತ್ ರಾಜಕುಮಾರ್ ಅವರ ನಿವಾಸದ ಸಮೀಪದಲ್ಲಿರುವ ಕಾವೇರಿ ಸಿನಿಮಾ ಎನ್ನುವ ಥಿಯೇಟರ್ನಲ್ಲಿ ಅರ್ಲಿ ಮಾರ್ನಿಂಗ್ ಶೋ ಸೇರಿದಂತೆ ಎಲ್ಲಾ ಶೋಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ಇಂತಹ ಕ್ರಿಯೇಟ್ ಹಿಂದೆ ಎಂದು ಕೂಡ ಕೇಳಿಬಂದಿಲ್ಲ ಮುಂದೆ ಕೂಡ ನಡೆಯೋದು ಅನುಮಾನವೇ ಸರಿ. ನಿಜಕ್ಕೂ ಕೂಡ ಜೇಮ್ಸ್ ಚಿತ್ರ ಕನ್ನಡಿಗರ ಹೆಮ್ಮೆಯ ಸಿನಿಮಾವಾಗಿ ಮೂಡಿಬರಲಿದೆ ಎನ್ನುವುದಂತು ಕನ್ಫರ್ಮ್.